»   » ಭಾವನಾ-ರಾಹುಲ್ ಬೋಸ್ ನಟನೆಯ 'ನಿರುತ್ತರ' ಈ ವಾರ ತೆರೆಗೆ

ಭಾವನಾ-ರಾಹುಲ್ ಬೋಸ್ ನಟನೆಯ 'ನಿರುತ್ತರ' ಈ ವಾರ ತೆರೆಗೆ

Posted By:
Subscribe to Filmibeat Kannada

ಅಪೂರ್ವ ಕಾಸರವಳ್ಳಿ ನಿರ್ದೇಶನದ ಚೊಚ್ಚಲ ಚಿತ್ರ 'ನಿರುತ್ತರ' ಡಿಸೆಂಬರ್ 23 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಸೆನ್ಸಾರ್ ಅಂಗಳದಿಂದ ಪಾಸ್ ಆಗಿರುವ 'ನಿರುತ್ತರ' ಚಿತ್ರಕ್ಕೆ 'U/A' ಸರ್ಟಿಫಿಕೇಟ್ ಸಿಕ್ಕಿದೆ.

ಸಂಬಂಧದ ಸೂಕ್ಷ್ಮತೆಗಳ ಮೇಲೆ ಬೆಳಕು ಚೆಲ್ಲುವ ಈ ಚಿತ್ರವನ್ನ ನಟಿ ಭಾವನಾ, ತಮ್ಮ ಹೋಮ್ ಟೌನ್ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸಿದ್ದಾರೆ. ಸಾಹಿತ್ಯ ಅಕಾಡೆಮಿ ಪುರಸ್ಕೃತ ವಿಕ್ರಮ್ ಹತ್ವಾರ್ ಅವರ ಕಥೆ 'ನಿರುತ್ತರ' ಚಿತ್ರಕ್ಕಿದೆ.

'ನಿರುತ್ತರ' ಚಿತ್ರದಲ್ಲಿ ದೊಡ್ಡ ತಾರಾಗಣ

ಭಾವನಾ ಅವರೊಂದಿಗೆ ಬಾಲಿವುಡ್ ನಟ ರಾಹುಲ್ ಬೋಸ್, ಕಿರಣ್ ಶ್ರೀನಿವಾಸ್ ಮತ್ತು ಐಂದ್ರಿತಾ ರೇ ತಾರಾಗಣದಲ್ಲಿದ್ದಾರೆ. ಈ ನಾಲ್ಕು ಪಾತ್ರಗಳ ಸುತ್ತಲೇ ಇಡೀ ಚಿತ್ರ ಸುತ್ತುತ್ತದೆ. ರಾಹುಲ್ ಬೋಸ್ ಕನ್ನಡದಲ್ಲಿ ತಾವೇ ಡಬ್ ಮಾಡಿರುವುದು 'ನಿರುತ್ತರ' ಚಿತ್ರದ ಮತ್ತೊಂದು ವಿಶೇಷ.

ರೆಸೂಲ್ ಪೂಕುಟ್ಟಿ ಧ್ವನಿ ಸಂಯೋಜನೆ

ತಾಂತ್ರಿಕವಾಗಿ ಉತ್ಕೃಷ್ಟವಾಗಿರುವ 'ನಿರುತ್ತರ' ಚಿತ್ರದಲ್ಲಿ ಆಸ್ಕರ್ ಪ್ರಶಸ್ತಿ ಪುರಸ್ಕೃತ ರೆಸೂಲ್ ಪೂಕುಟ್ಟಿ ಧ್ವನಿ ಸಂಯೋಜನೆ ಮಾಡಿದ್ದಾರೆ.

ಅಗ್ನೆಲೋ ಫರ್ನಾಂಡಿಸ್ ಬ್ಯಾಕ್ ಗ್ರೌಂಡ್ ಸ್ಕೋರ್

'ಧೂಮ್ 3', 'ಭಜರಂಗಿ ಭಾಯ್ ಜಾನ್' ಚಿತ್ರಗಳಿಗೆ ಹಿನ್ನಲೆ ಸಂಗೀತ ನೀಡಿದ್ದ ಅಗ್ನೆಲೋ ಫರ್ನಾಂಡಿಸ್ 'ನಿರುತ್ತರ' ಚಿತ್ರಕ್ಕೆ ಬ್ಯಾಕ್ ಗ್ರೌಂಡ್ ಸ್ಕೋರ್ ನೀಡಿದ್ದಾರೆ.

ನೀಲಾದ್ರಿ ಕುಮಾರ್ ಸಂಗೀತ

'ಝಿಟಾರ್' ಮೂಲಕ ಶಾಸ್ತ್ರೀಯ ಸಂಗೀತದ ಜಗತ್ತಿನಲ್ಲಿ ಹೆಸರು ಮಾಡಿರುವ ನೀಲಾದ್ರಿ ಕುಮಾರ್ 'ನಿರುತ್ತರ' ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಕವಿರಾಜ್ ಸಾಹಿತ್ಯ ಚಿತ್ರಕ್ಕಿದೆ. ಈಗಾಗಲೇ ಜನಪ್ರಿಯವಾಗಿರುವ ಹಾಡುಗಳನ್ನು ಹಾಡಿದವರೆಲ್ಲರೂ ಹೊಸಬರೇ.

ಸುಂದರ ತಾಣಗಳಲ್ಲಿ ಚಿತ್ರೀಕರಣ

ಹಿಮಾಚಲ ಪ್ರದೇಶ, ಗೋವಾ ಸೇರಿದಂತೆ ಅನೇಕ ಕಣ್ಣು ಕೋರೈಸುವ ತಾಣಗಳಲ್ಲಿ 'ನಿರುತ್ತರ' ಚಿತ್ರೀಕರಣ ನಡೆದಿದೆ.

ಈ ವಾರ ಬಿಡುಗಡೆ

'ನಿರುತ್ತರ' ಡಿಸೆಂಬರ್ 23 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ನೋಡಲು ನೀವು ರೆಡಿನಾ.?

English summary
Kannada Actress Bhavana, Aindrita Ray starrer Kannada Movie 'Niruttara' is all set to release on December 23rd, 2016. 'Niruttara' Movie is directed by Apoorva Kasaravalli.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada