Don't Miss!
- Sports
IND vs NZ: ಮುಂದಿನ 2 ಪಂದ್ಯಗಳು ಈತನಿಗೆ ನಿರ್ಣಾಯಕ; ದಿನೇಶ್ ಕಾರ್ತಿಕ್ ಎಚ್ಚರಿಕೆ
- News
Breaking; ನಂದಿ ಹಿಲ್ಸ್ನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ 112 ತಂಡ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Finance
7th Pay Commission update news: ಕೇಂದ್ರ ಬಜೆಟ್ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಘೋಷಣೆ?
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೇ 19ರಂದು ಬೆಳ್ಳಿತೆರೆಯಲ್ಲಿ ಚಿತ್ತಾರಗೊಳ್ಳಲಿದೆ 'ನೂರೊಂದು ನೆನಪು'
'ಆ ದಿನಗಳು' ಖ್ಯಾತಿಯ ನಟ ಚೇತನ್ ಬಹುದಿನಗಳ ನಂತರ ಅಭಿನಯಿಸಿರುವ ಚಿತ್ರ 'ನೂರೊಂದು ನೆನಪು'. ಫಸ್ಟ್ ಲುಕ್ ಪೋಸ್ಟರ್ ಹಾಗೂ ಟ್ರೈಲರ್ ನಿಂದ ಕುತೂಹಲ ಮೂಡಿಸಿರುವ ಈ ಚಿತ್ರ ಕೊನೆಗೂ ತೆರೆಮೇಲೆ ಬರುವುದಕ್ಕೆ ರೆಡಿಯಾಗಿದೆ. ಮೇ 19 ರಂದು ರಾಜ್ಯಾದ್ಯಂತ 'ನೂರೊಂದು ನೆನಪು' ತೆರೆಕಾಣಲಿದೆ.
ಅಂದ್ಹಾಗೆ, 'ನೂರೊಂದು ನೆನಪು' ಮರಾಠಿಯ 'ದುನಿಯಾ ದಾರಿ' ಕಾದಂಬರಿ ಆಧಾರಿತ ಚಿತ್ರ. ಖ್ಯಾತ ಬರಹಗಾರ ಸುಹಾಸ್ ಶಿರ್ವ್ಕಾರ್ ಬರೆದಿರುವ ಮರಾಠಿ ಕಥೆಯನ್ನ ತಮ್ಮ ನೆಟಿವಿಟಿಗೆ ತಕ್ಕಂತೆ ಬದಲಿಸಿ ಸಿನಿಮಾ ಮಾಡಲಾಗಿದೆ. ಈ ಚಿತ್ರ ಸಂಪೂಣವಾಗಿ ರೆಟ್ರೋ ಸ್ಟೈಲ್ ನಲ್ಲಿ ಮೂಡಿ ಬಂದಿರುವುದು ವಿಶೇಷ. 80 ರ ದಶಕದ ಕಥಾಹಂದರವನ್ನ ಈ ಚಿತ್ರ ಹೊಂದಿದ್ದು, ಚಿತ್ರದ ಬಹುತೇಕ ಚಿತ್ರೀಕರಣವನ್ನ ಬೆಳಗಾವಿಯಲ್ಲಿ ಶೂಟ್ ಮಾಡಲಾಗಿದೆ.[ಟ್ರೈಲರ್: ನೆನಪುಗಳನ್ನ ಹೊತ್ತು ಬರುತ್ತಿದೆ 'ನೂರೊಂದು ನೆನಪು']
'ನೂರೊಂದು ನೆನಪು' ಚಿತ್ರದಲ್ಲಿ 'ಆ ದಿನಗಳು' ಖ್ಯಾತಿಯ ಚೇತನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚೇತನ್ ಗೆ ಜೋಡಿಯಾಗಿ ನಟಿ ಮೇಘನಾ ರಾಜ್ ಸಾಥ್ ಕೊಟ್ಟಿದ್ದಾರೆ. ಇಷ್ಟು ದಿನ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ನಟ ಚೇತನ್, 'ನೂರೊಂದು ನೆನಪು' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.['ನೂರೊಂದು ನೆನಪು'ಗಳಲ್ಲಿ ಚೇತನ್-ಮೇಘನಾ ರಾಜ್]
'ಫ್ಲೈ' ಚಿತ್ರದ ಮೂಲಕ ನಾಯಕ ನಟನಾಗಿ ಗುರುತಿಸಿಕೊಂಡಿರುವ ಡಿಂಗ್ರಿ ನಾಗರಾಜ್ ಅವರ ಮಗ ರಾಜ್ ವರ್ಧನ್, 'ನೂರೊಂದು ನೆನಪು' ಚಿತ್ರದ ಮತ್ತೊಬ್ಬ ನಾಯಕ. ಚಿತ್ರದಲ್ಲಿ ರಾಜ್ ವರ್ಧನ್ ಗೆ ಸುಶ್ಮಿತಾ ಜೋಶಿ ಅರ್ಚನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಅಂದ್ಹಾಗೆ, ಈ ಚಿತ್ರಕ್ಕೆ ಕುಮಾರೇಶ್ ಎಂಬುವರು ಆಕ್ಟನ್ ಕಟ್ ಹೇಳುತ್ತಿದ್ದು, ಇದು ಇವರಿಗೆ ಚೊಚ್ಚಲ ಚಿತ್ರ. ಬೆಳಗಾವಿ ಮೂಲದ ಸೂರಜ್ ದೇಸಾಯಿ, ಮನೀಶ್ ದೇಸಾಯಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಗಗನ್ ಬದೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.