For Quick Alerts
  ALLOW NOTIFICATIONS  
  For Daily Alerts

  ಟ್ರೈಲರ್: ನೆನಪುಗಳನ್ನ ಹೊತ್ತು ಬರುತ್ತಿದೆ 'ನೂರೊಂದು ನೆನಪು'

  By Bharath Kumar
  |

  'ಆ ದಿನಗಳು' ಖ್ಯಾತಿಯ ನಟ ಚೇತನ್ ಬಹುದಿನಗಳ ನಂತರ ಅಭಿನಯಿಸಿರುವ ಚಿತ್ರ 'ನೂರೊಂದು ನೆನಪು'. ಫಸ್ಟ್ ಲುಕ್ ಪೋಸ್ಟರ್ ಗಳಿಂದಲೇ ಕುತೂಹಲ ಮೂಡಿಸಿದ್ದ ಚಿತ್ರ ಈಗ ಟ್ರೈಲರ್ ಬಿಡುಗಡೆ ಮಾಡಿ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.['ನೂರೊಂದು ನೆನಪು'ಗಳಲ್ಲಿ ಚೇತನ್-ಮೇಘನಾ ರಾಜ್]

  ಅಂದ್ಹಾಗೆ, ಇದು ಮರಾಠಿ ಆಧಾರಿತ ಚಿತ್ರವಾಗಿದ್ದು, ಖ್ಯಾತ ಬರಹಗಾರ ಸುಹಾಸ್ ಶಿರ್ವ್ಕಾರ್ ಬರೆದಿರುವ ಮರಾಠಿ ಕಥೆಯನ್ನ ತಮ್ಮ ನೆಟಿವಿಟಿಗೆ ತಕ್ಕಂತೆ ಬದಲಿಸಿ ಸಿನಿಮಾ ಮಾಡಲಾಗಿದೆ. ಈ ಚಿತ್ರ ಸಂಪೂಣವಾಗಿ ರೆಟ್ರೋ ಸ್ಟೈಲ್ ನಲ್ಲಿ ಮೂಡಿಬಂದಿರುವುದು ವಿಶೇಷವಾಗಿದೆ. 80 ರ ದಶಕದ ಕಥಾಹಂದರವನ್ನ ಈ ಚಿತ್ರ ಹೊಂದಿದ್ದು, ಅಂದಿನ ಕಾಲಘಟ್ಟದ ಕಾಲೇಜು ದಿನಗಳನ್ನ ನೆನಪಿಸುವಂತಹ ಚಿತ್ರಕಥೆ ಇರಲಿದೆಯಂತೆ.

  'ನೂರೊಂದು ನೆನಪು' ಚಿತ್ರದಲ್ಲಿ 'ಆ ದಿನಗಳು' ಖ್ಯಾತಿಯ ಚೇತನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚೇತನ್ ಗೆ ಜೋಡಿಯಾಗಿ ನಟಿ ಮೇಘನಾ ರಾಜ್ ಸಾಥ್ ಕೊಟ್ಟಿದ್ದಾರೆ. ಇಷ್ಟು ದಿನ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ನಟ ಚೇತನ್, 'ನೂರೊಂದು ನೆನಪು' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

  'ಫ್ಲೈ' ಚಿತ್ರದ ಮೂಲಕ ನಾಯಕ ನಟನಾಗಿ ಗುರುತಿಸಿಕೊಂಡಿರುವ ಡಿಂಗ್ರಿ ನಾಗರಾಜ್ ಅವರ ಮಗ ರಾಜ್ ವರ್ಧನ್, 'ನೂರೊಂದು ನೆನಪು' ಚಿತ್ರದ ಮತ್ತೊಬ್ಬ ನಾಯಕ. ಚಿತ್ರದಲ್ಲಿ ರಾಜ್ ವರ್ಧನ್ ಗೆ ಸುಶ್ಮಿತಾ ಜೋಶಿ ಅರ್ಚನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ

  ಅಂದ್ಹಾಗೆ, ಈ ಚಿತ್ರಕ್ಕೆ ಕುಮಾರೇಶ್ ಎಂಬುವರು ಆಕ್ಟನ್ ಕಟ್ ಹೇಳುತ್ತಿದ್ದು, ಇದು ಇವರಿಗೆ ಚೊಚ್ಚಲ ಚಿತ್ರ. ಸೂರಜ್ ದೇಸಾಯಿ, ಮನೀಶ್ ದೇಸಾಯಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಗಗನ್ ಬದೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ, ಚಿತ್ರದ ಟ್ರೈಲರ್, ಹಾಡುಗಳು ಬಿಡುಗಡೆಯಾಗಿದ್ದು, ಆದಷ್ಟೂ ಬೇಗ ತೆರೆಗೆ ಬರಲಿದೆ.

  English summary
  Kannada Actor Chethan, Kannada Actress Meghan raj and others Starrer Noorondu Nenapu Movie Trailer Released. The Movie Directed by kumaraesh M.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X