'ಒಂದು ಮೊಟ್ಟೆಯ ಕಥೆ' ನೋಡೋಕೆ ರೆಡಿ ಆಗಿ.!
ಟೈಟಲ್ ನಿಂದ ಕನ್ನಡ ಪ್ರೇಕ್ಷಕರನ್ನ ಆಕರ್ಷಣೆ ಮಾಡಿರುವ 'ಒಂದು ಮೊಟ್ಟೆಯ ಕಥೆ' ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳನ್ನ ಬಿಡುಗಡೆ ಮಾಡಿ ಕುತೂಹಲ ಹೆಚ್ಚಿಸಿರುವ 'ಒಂದು ಮೊಟ್ಟೆಯ ಕಥೆ' ಬೆಳ್ಳಿತೆರೆಗೆ ಕಾಲಿಡಲು ಈಗ ಚಿತ್ರಮಂದಿರವನ್ನ ಕಾಯ್ದಿರಿಸಿದೆ.
ಹೌದು, ಜುಲೈ 7 ರಂದು ಬೋಳು ತಲೆ ಮಕ್ಕಳ ಗೋಳು ತೆರೆಮೇಲೆ ಬರಲಿದೆ. ತಲೆ ಮೇಲೆ ಕೂದಲು ಇಲ್ಲದವರ ಬಗ್ಗೆ ಚಿತ್ರಕಥೆಯನ್ನು ಹೊಂದಿರುವ 'ಒಂದು ಮೊಟ್ಟೆಯ ಕಥೆ' ಕಂಪ್ಲೀಟ್ ಮನರಂಜನೆ ಚಿತ್ರ. ಪವನ್ ಕುಮಾರ್ ಮತ್ತು ಸುಹಾನ್ ಪ್ರಸಾದ್ ನಿರ್ಮಾಣ ಮಾಡಿರುವ ಸಿನಿಮಾವನ್ನು ಮಂಗಳೂರು ಸುತ್ತಮುತ್ತಲಲ್ಲಿ, ಅಲ್ಲಿನ ಭಾಷಾ ಶೈಲಿಯಲ್ಲಿಯೇ ಚಿತ್ರೀಕರಿಸಲಾಗಿದೆ.

ಈ ಚಿತ್ರವನ್ನ ರಾಜ್ ಬಿ. ಶೆಟ್ಟಿ ನಟಿಸಿ ತಾವೇ ನಿರ್ದೇಶನ ಮಾಡಿದ್ದಾರೆ. ಮಿಥುನ್ ಮುಕುಂದನ್ ಅವರ ಸಂಗೀತ ನೀಡಿದ್ದು ಹಾಡುಗಳು ಗಮನ ಸೆಳೆಯುತ್ತಿದೆ. ಉಳಿದಂತೆ ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಅವರ ಜೊತೆ ಶೈಲಶ್ರೀ ಸೇರಿದಂತೆ ಮುಂತಾದವರು ಅಭಿನಯಿಸಿದ್ದಾರೆ.
ವಿಡಿಯೋ: ತಲೆಮೇಲೆ ಕೂದಲು ಇಲ್ಲದವರು ನೋಡಲೇಬೇಕಾದ 'ಒಂದು ಮೊಟ್ಟೆಯ ಕಥೆ'


Click it and Unblock the Notifications











