»   » ಅನೂಪ್ 'ಪಂಟ' ಚಿತ್ರಕ್ಕೆ ಬಿಡುಗಡೆ ಯೋಗ.!

ಅನೂಪ್ 'ಪಂಟ' ಚಿತ್ರಕ್ಕೆ ಬಿಡುಗಡೆ ಯೋಗ.!

Posted By:
Subscribe to Filmibeat Kannada

ಇಷ್ಟೋತ್ತಿಗಾಗಲೇ 'ಪಂಟ' ಸಿನಿಮಾ ಬಿಡುಗಡೆಯಾಗಿ ಚಿತ್ರದ ನಾಯಕ ಅನೂಪ್ ಮತ್ತೊಂದು ಚಿತ್ರಕ್ಕೆ ಅಣಿಯಾಗಬೇಕಿತ್ತು. ಆದ್ರೆ, ಅಂತಿಮ ಕ್ಷಣದಲ್ಲಿ ಬಿಡುಗಡೆಯಿಂದ ಹಿಂದೆ ಸರಿದಿದ್ದ 'ಪಂಟ' ಈಗ ಅದ್ದೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ.

'ಪಂಟ' ಚಿತ್ರದ ಆರಂಭದಲ್ಲಿ ಕುಲುಕು ಕುಲುಕು ...' ಎಂಬ ಹಾಡು ಮಾಡಲಾಗಿತ್ತಂತೆ. ಕಾರಣಾಂತರಗಳಿಂದ ಆ ಹಾಡನ್ನ ಚಿತ್ರದಿಂದ ಕೈಬಿಡಲಾಗಿತ್ತಂತೆ. ತದ ನಂತರ ನಿರ್ಮಾಪಕರ ಒತ್ತಾಯದ ಮೆರೆಗೆ ಮತ್ತೆ ಆ ಹಾಡನ್ನ ಸೇರಿಸಲು ನಿರ್ಧರಿಸಿ ಬಿಡುಗಡೆಯಿಂದ ಹಿಂದೆ ಸರಿದಿದ್ದರಂತೆ. ಈಗ ಎಲ್ಲ ಕಂಪ್ಲೀಟ್ ಆಗಿದ್ದು, ಚಿತ್ರಮಂದಿರಕ್ಕೆ ಬರಲು ರೆಡಿಯಾಗಿದ್ದಾರೆ.

Kannada Movie Panta Releasing on June 23rd

ಅಂದ್ಹಾಗೆ, 'ಪಂಟ' ಅನೂಪ್ ರೇವಣ್ಣ ಅಭಿನಯದ ಎರಡನೇ ಚಿತ್ರ. ಈಗಾಗಲೇ ಟ್ರೈಲರ್ ಮೂಲಕ ಕುತೂಹಲ ಹುಟ್ಟಿಹಾಕಿರುವ 'ಪಂಟ', ಸಸ್ಪೆನ್ಸ್ ಥ್ರಿಲ್ಲಿಂಗ್ ಸಿನಿಮಾ. ಸುಮ್ರಮಣ್ಯಂ.ಕೆ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ರಿತೀಕ್ಷ ಚಿತ್ರದ ನಾಯಕಿಯಾಗಿದ್ದಾರೆ.

English summary
Anup Revanna's second film 'Panta' which is directed by S Narayan. is all set to release on June 23rd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada