»   » ಚಿತ್ರದಲ್ಲಿರುವವರು ಯಾರು ಅಂತ ಬೇಗನೇ ಹೇಳಿ...

ಚಿತ್ರದಲ್ಲಿರುವವರು ಯಾರು ಅಂತ ಬೇಗನೇ ಹೇಳಿ...

Posted By:
Subscribe to Filmibeat Kannada

ಸದಾ ವಿಭಿನ್ನ ಪಾತ್ರಕ್ಕೆ ಮಣೆ ಹಾಕುವ ಸಂಚಾರಿ ವಿಜಯ್ ಅವರು ಯಾವ ಪಾತ್ರ ಕೊಟ್ಟರು ಅಚ್ಚುಕಟ್ಟಾಗಿ ಮಾಡುತ್ತಾರೆ ಅನ್ನೋದು, 'ನಾನು ಅವನಲ್ಲ ಅವಳು' ಚಿತ್ರದಲ್ಲಿ ಎಲ್ಲಾ ಪ್ರೇಕ್ಷಕರಿಗೂ ಮನದಟ್ಟಾಗಿದೆ.

ಸಂಚಾರಿ ವಿಜಯ್ ಅವರ ಈ ವೃತ್ತಿಪರತೆ ಮತ್ತೆ ಸಾಬೀತಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಟ 'ಪಿರಂಗಿಪುರ' ಎಂಬ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಅಂತ ನಾವೇ ನಿಮಗೆ ಹೇಳಿದ್ವಿ. ಈ ಚಿತ್ರ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ಮೂಡಿಬರುತ್ತಿದೆ ಅನ್ನೋದು, ಇನ್ನೊಂದು ವಿಶೇಷ.[ಮಂಗಳಮುಖಿಯಾಗಿ ಮೆಚ್ಚಿಸಿದ ಸಂಚಾರಿ ವಿಜಯ್ ಕಾಲಿವುಡ್ ಸಂಚಾರ]

Kannada Movie 'Pirangipura' first look poster released

ಇದೀಗ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳು ರಿಲೀಸ್ ಆಗಿದ್ದು, ಗುರುತೇ ಸಿಗದಂತಹ ಅವತಾರದಲ್ಲಿ ಸಂಚಾರಿ ವಿಜಯ್ ಮಿಂಚಿದ್ದಾರೆ. ಭಾರಿ ಕುತೂಹಲ ಮೂಡಿಸುವ ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರಕ್ಕೆ ಜನಾರ್ಧನ್ ಪಿ ಜಾನಿ ಅವರು ಕಥೆ-ಚಿತ್ರಕಥೆ ಬರೆದು, ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ.

Kannada Movie 'Pirangipura' first look poster released

ಕನ್ನಡದಲ್ಲಿ ಈ ಸಿನಿಮಾ 'ಪಿರಂಗಿಪುರ' ಎಂಬ ಹೆಸರಿನಲ್ಲಿದ್ದು, ತಮಿಳಿನಲ್ಲಿ 'ಬಿರಂಗಿ ಪುರಂ' ಎಂಬ ಹೆಸರಿನಲ್ಲಿ ಮೂಡಿಬರುತ್ತಿದೆ. 80 ವರ್ಷ ವಯಸ್ಸಿನ ಹಣ್ಣು-ಹಣ್ಣು ಮುದುಕನ ಪಾತ್ರದಲ್ಲಿ ಸಂಚಾರಿ ವಿಜಯ್ ಕಾಣಿಸಿಕೊಂಡಿದ್ದು, ಬರೋಬ್ಬರಿ ಮೂರು ಶೇಡ್ ನಲ್ಲಿ ಸಂಚಾರಿ ವಿಜಯ್ ಅವರು ಅಭಿನಯ ತೋರಲಿದ್ದಾರೆ.

Kannada Movie 'Pirangipura' first look poster released

ಸೆಪ್ಟೆಂಬರ್ 6ರಂದು 'ಪಿರಂಗಿಪುರ' ಚಿತ್ರದ ಕನ್ನಡ ಮತ್ತು ತಮಿಳು ಫಸ್ಟ್ ಲುಕ್ ಪೋಸ್ಟರ್ ಗಳು ಬಿಡುಗಡೆ ಆಗಿದ್ದು, 'ರೋರಿಂಗ್ ಸ್ಟಾರ್' ಶ್ರೀಮುರಳಿ ಮತ್ತು ಪ್ರತಿಭಾವಂತ ನಟ, ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಖ್ಯಾತಿಯ ವಸಿಷ್ಠ ಎನ್ ಸಿಂಹ ಅವರು ರಿಲೀಸ್ ಮಾಡಿದ್ದಾರೆ.

English summary
Kannada Movie 'Pirangipura' first look poster released. Kannada Actor Sanchari Vijay in the lead role. The movie is directed by Janardhana P Johnny.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada