»   » 'ಬಾಹುಬಲಿ'ಯಂತೆ ಮೇಕಿಂಗ್ ಮಾಡುತ್ತಿದೆ ಕನ್ನಡದ ಈ ಚಿತ್ರ!

'ಬಾಹುಬಲಿ'ಯಂತೆ ಮೇಕಿಂಗ್ ಮಾಡುತ್ತಿದೆ ಕನ್ನಡದ ಈ ಚಿತ್ರ!

Posted By:
Subscribe to Filmibeat Kannada

ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರ ಹೆಚ್ಚು ಸುದ್ದಿಯಾಗಿದ್ದೇ ಮೇಕಿಂಗ್ ವಿಚಾರಕ್ಕೆ. ಸುಮಾರು ಎರಡೂವರೆ ವರ್ಷ ಚಿತ್ರವೊಂದನ್ನ ತಯಾರು ಮಾಡುವುದು ಎಂದರೇ ಅದು ಕೇವಲ 'ಬಾಹುಬಲಿ' ಚಿತ್ರಕ್ಕೆ ಮಾತ್ರ ಸಾಧ್ಯ ಎಂಬುದು ಚಿತ್ರವಲಯದ ಮಾತು.

ಯಾಕಂದ್ರೆ, ಅಷ್ಟರ ಮಟ್ಟಿಗೆ ಚಿತ್ರದ ಪ್ರಿ-ಪ್ರೊಡಕ್ಷನ್, ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನ ವರ್ಷಗಳಗಟ್ಟಲೇ ಸಮಯ ತೆಗೆದುಕೊಂಡು ಸಿನಿಮಾ ಮಾಡಿತ್ತು. ಗ್ರಾಫಿಕ್ಸ್, ಕಲಾನಿರ್ದೇಶನ, ಮೇಕಪ್ ಹೀಗೆ ಎಲ್ಲ ವಿಭಾಗಕ್ಕೂ ಪರಿಣಿತರಿಂದ ಮೇಕ್ ಓವರ್ ಮಾಡಲಾಗಿತ್ತು.[ಚಿತ್ರದಲ್ಲಿರುವವರು ಯಾರು ಅಂತ ಬೇಗನೇ ಹೇಳಿ...]

ಇದೀಗ ಇಂತಹದ್ದೇ ಮೇಕಿಂಗ್ ವಿಚಾರಕ್ಕೆ ಸದ್ದು ಮಾಡುತ್ತಿದೆ ಕನ್ನಡದ ಹಿಸ್ಟಾರಿಕಲ್ ಚಿತ್ರ. ಸದ್ಯ, ಈ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು, ಥೇಟ್ 'ಬಾಹುಬಲಿ'ಯಂತೆ ಪ್ರಿ-ಪ್ರೊಡಕ್ಷನ್ ಕೆಲಸ ಕಾಣುತ್ತಿದೆ.

ಕನ್ನಡದಲ್ಲೊಂದು 'ಬಾಹುಬಲಿ'

ತೆಲುಗಿನ 'ಬಾಹುಬಲಿ' ಚಿತ್ರದಂತೆ ಕನ್ನಡದ 'ಪಿರಂಗಿಪುರ' ಚಿತ್ರವೂ ಮೇಕಿಂಗ್ ಮಾಡುತ್ತಿದೆ. ಫಸ್ಟ್ ಲುಕ್ ಪೋಸ್ಟರ್ ಗಳಿಂದ ಭರವಸೆ ಹುಟ್ಟಿಸಿದ್ದ ಸಿನಿಮಾ, ಇದೀಗ ಮೇಕಿಂಗ್ ವಿಚಾರದಲ್ಲಿ ಕುತೂಹಲ ಡಬಲ್ ಮಾಡಿದೆ.

ಥ್ರಿಲ್ಲಿಂಗ್ ಎನಿಸಿದೆ ಪ್ರಿ-ಪ್ರೊಡಕ್ಷನ್!

'ಪಿರಂಗಿಪುರ' ಚಿತ್ರದ ಪ್ರಿ-ಪ್ರೊಡಕ್ಷನ್ ನೋಡುತ್ತಿದ್ದರೇ ಥ್ರಿಲ್ಲಿಂಗ್ ಎನಿಸುತ್ತಿದೆ. ಯಾಕಂದ್ರೆ, ಚಿತ್ರದ ಪೂರ್ವ ತಯಾರಿ ವಿಶೇಷವಾಗಿದೆ. ಚಿತ್ರಕ್ಕಾಗಿ ಅದ್ದೂರಿ ಸೆಟ್ ನಿರ್ಮಾಣ ಮಾಡಲಾಗಿದೆ, ಹೆಚ್ಚು ಗ್ರಾಫಿಕ್ಸ್ ವರ್ಕ್ ಬಳಸಲಾಗುತ್ತಿದೆ, ಕಲಾವಿದರಿಂದ ಜಿಮ್ ನಲ್ಲಿ ವರ್ಕೌಟ್ ಮಾಡಿಸಲಾಗುತ್ತಿದೆ. ಡ್ಯಾನ್ಸ್, ಸಂಗೀತ, ಫೈಟ್ ಹೀಗೆ ಎಲ್ಲವೂ ತುಂಬಾ ಇಂಟರೆಸ್ಟಿಂಗ್ ಆಗಿ ನಡೆಯುತ್ತಿದೆ.

ಸಂಚಾರಿ ವಿಜಯ್ ಅಭಿನಯ 'ಪಿರಂಗಿಪುರ'!

ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಈ ಚಿತ್ರದ ನಾಯಕನಾಗಿದ್ದು, ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮೂರು ಶೇಡ್ ನಲ್ಲಿ ವಿಜಯ್!

ಅಂದ್ಹಾಗೆ, ಸಂಚಾರಿ ವಿಜಯ್ ಮೂರು ಶೇಡ್ ನಲ್ಲಿ ಅಭಿನಯಿಸುತ್ತಿದ್ದು, 80 ವರ್ಷದ ಮುದುಕನ ಪಾತ್ರವೂ ಇದರಲ್ಲಿ ಇರಲಿದೆ. ಈಗಾಗಲೇ ಫಸ್ಟ್ ಲುಕ್ ಮೂಲಕ ಸಂಚಾರಿ ವಿಜಯ್ ಗಮನ ಸೆಳೆದಿದ್ದಾರೆ.

ಕನ್ನಡ-ತಮಿಳಿನಲ್ಲಿ 'ಪಿರಂಗಿಪುರ'!

ಭಾರಿ ಕುತೂಹಲ ಮೂಡಿಸುವ ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರಕ್ಕೆ ಜನಾರ್ಧನ್ ಪಿ ಜಾನಿ ಅವರು ಕಥೆ-ಚಿತ್ರಕಥೆ ಬರೆದು, ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲದಲ್ಲಿ ತಯಾರಾಗುತ್ತಿದೆ.['ಪಿರಂಗಿಪುರ' ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ]

English summary
Kannada Movie 'Pirangipura' Making video released. Kannada Actor Sanchari Vijay in the lead role. The movie is directed by Janardhana P Johnny.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada