»   » 'ಪ್ಲಸ್; ಚಿತ್ರದಲ್ಲಿ ಮೈನಸ್ ಇಲ್ವೆ, ಇಲ್ವಂತೆ!!

'ಪ್ಲಸ್; ಚಿತ್ರದಲ್ಲಿ ಮೈನಸ್ ಇಲ್ವೆ, ಇಲ್ವಂತೆ!!

Posted By:
Subscribe to Filmibeat Kannada

ಗಾಂಧಿನಗರಕ್ಕೆ ಇಧೀಗ ಮತ್ತೊಂದು ಹೊಸತನದ ಚಿತ್ರ ಬರುತ್ತಿದೆ. ಸೈಕಾಲೋಜಿಕಲ್ ಥ್ರಿಲ್ಲರ್ ಆಗಿರುವ 'ಪ್ಲಸ್' ಚಿತ್ರದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು, ಎಲ್ಲೆಡೆ ಸಖತ್ ಸೌಂಡ್ ಮಾಡ್ತಿದೆ.

ಸದಾ ನಿರ್ದೇಶನದ ಕಡೆ ಗಮನ ಕೊಡುತ್ತಿದ್ದ ಯೋಗರಾಜ ಭಟ್ರು ಇದೀಗ ನಿರ್ಮಾಣದ ಕೆಲಸಕ್ಕೆ ಕೈ ಹಾಕಿದ್ದಾರೆ. ಯೋಗರಾಜ್ ಮೂವೀಸ್ ಹಾಗೂ ಹೊನ್ನ ಹೈಟ್ಸ್ ಲಾಂಛನದ ಅಡಿಯಲ್ಲಿ ತಯಾರಾಗುತ್ತಿರುವ 'ಪ್ಲಸ್' ಚಿತ್ರದಲ್ಲಿ ಮೈನಸ್ ಇಲ್ವೆ, ಇಲ್ವಂತೆ.


ಇದೀಗ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿರುವ 'ಪ್ಲಸ್' ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ...


Kannada movie 'Plus' official trailer Review

'ಪ್ಲಸ್' ಚಿತ್ರದಲ್ಲಿ ವಿಶೇಷವಾಗಿ ಅನಂತ್ ನಾಗ್ ಗಡ್ಡ ತುಂಬಾನೇ ಹೈಲೈಟ್ ಆಗುತ್ತಿದೆ. ಅವರ ವೇ‍ಷಭೂಷಣಗಳು ಕೂಡಾ ಸ್ಟೈಲಿಷ್ ಆಗಿವೆ. 'ಪಾಸಿಟಿವ್ ಆಗಿ ಯೋಚನೆ ಮಾಡುವವರನ್ನು ವಿಷ ಕೊಟ್ರು ಕೊಲ್ಲಕ್ಕಾಗಲ್ಲ" 'ದುನಿಯಾದಲ್ಲಿ 90% ಜನ ಹುಟ್ಟೋದೇ ಆಕ್ಸಿಡೆಂಟ್ ನಿಂದ' ಹೀಗೆ ಡಿಫರೆಂಟ್ ಡೈಲಾಗ್ ಹಾಗೂ ಲವ್ಲಿ ಹಾಡುಗಳು ಇರುವ ಪ್ಲಸ್ ಚಿತ್ರದ ಟ್ರೈಲರ್ ತುಂಬಾ ಸುದ್ದಿ ಮಾಡುತ್ತಿದೆ. [ಕಾರು ಅಪಘಾತದಲ್ಲಿ ಗಾಯಗೊಂಡ ನಟ ಅನಂತನಾಗ್]


'ದ್ಯಾವ್ರೆ' ಚಿತ್ರದ ನಂತರ ಗಡ್ಡ ವಿಜಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಪ್ಲಸ್' ಚಿತ್ರದಲ್ಲಿ ಅನಂತ್ ನಾಗ್, ರವಿಶಂಕರ್, ಚೇತನ್ ಚಂದ್ರ, ರಿತೇಶ್, ಶಾಲಿನಿ, ಐಶಾನಿ ಶೆಟ್ಟಿ, ಸುಧಾರಾಣಿ, ರಾಜೇಶ್ ನಟರಂಗ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 'ಲೂಸಿಯಾ' ನಾಯಕಿ ಶ್ರುತಿ ಹರಿಹರನ್ 'ಸಂಡೇ ಬಂತು, ಅಂತೂ ಇಂತೂ ಸಂಡೇ ಬಂತು' ಅನ್ನುವ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ.


ಮಿಸೋಪೋನೀಯಾ, ಹಿಮೋಫೋಬಿಯಾ, ಇಂತಹದೇ ಆರು ಥರದ ವಿಭಿನ್ನ ಮಾನಸಿಕ ಕಾಯಿಲೆ ಇರುವ ವ್ಯಕ್ತಿಗಳನ್ನು ಒಂದು ಮಾಡಿರುವ 'ಪ್ಲಸ್' ಚಿತ್ರದ ಟ್ರೈಲರ್ ಹಲವಾರು ಕುತೂಹಲಕ್ಕೆ ಎಡೆ ಮಾಡಿಕೊಡುತ್ತಿದೆ. ಯೋಗರಾಜ್ ಭಟ್ ಮತ್ತು ರಿತೇಶ್ ನಿರ್ಮಾಣ ಮಾಡಿರುವ 'ಪ್ಲಸ್' ಚಿತ್ರಕ್ಕೆ ರವಿ ಬಸ್ರೂರು ಹಿನ್ನಲೆ ಸಂಗೀತ ಹಾಗೂ ಬಿ.ಜೆ ಭರತ್ ಚಿತ್ರಕ್ಕೆ ಮ್ಯೂಸಿಕ್ ಕಂಪೊಸ್ ಮಾಡಿದ್ದಾರೆ.

English summary
Kannada Movie 'Plus' official Trailer is released, 'Plus' features Kannada actor Anant Nag, Chetan Chandra, and Ravishankar, Kannada Actress Aishani Shetty, in the lead roles. The movie is directed by Gadda Viji.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada