»   » ಹುಡುಗಿ ಹುಡುಕಿಕೊಂಡು ಮಡಿಕೇರಿಗೆ ಹೋಗಿದ್ದ ಹುಚ್ಚ ವೆಂಕಟ್

ಹುಡುಗಿ ಹುಡುಕಿಕೊಂಡು ಮಡಿಕೇರಿಗೆ ಹೋಗಿದ್ದ ಹುಚ್ಚ ವೆಂಕಟ್

Posted By:
Subscribe to Filmibeat Kannada

ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮೊನ್ನೆ ಮೊನ್ನೆ ನಿರ್ದೇಶಕ ಎಸ್ ನಾರಾಯಣ್ ಅವರ 'ಡಿಕ್ಟೇಟರ್' ಚಿತ್ರದಲ್ಲಿ ನಟನೆ ಮಾಡುವುದಿಲ್ಲ ಎಂದು ಹೇಳಿ ಸುದ್ದಿ ಮಾಡಿದ್ದ ವೆಂಕಟ್ ಅವರು ಇದೀಗ ತಾವೇ ನಟಿಸಿ-ನಿರ್ದೇಶನ ಮಾಡುತ್ತಿರುವ 'ಪೊರ್ಕಿ ಹುಚ್ಚ ವೆಂಕಟ್' ಚಿತ್ರದ ಕೆಲಸಗಳತ್ತ ಗಮನ ಹರಿಸಿದ್ದಾರೆ.

ಇದೀಗ ವೆಂಕಟ್ ಅವರು ತಮ್ಮ 'ಪೊರ್ಕಿ ಹುಚ್ಚ ವೆಂಕಟ್' ಚಿತ್ರಕ್ಕೆ ನಾಯಕಿಯರ ಹುಡುಕಾಟದಲ್ಲಿ ತೊಡಗಿದ್ದು, ಆಡಿಷನ್ ಗಾಗಿ ಇತ್ತೀಚೆಗೆ ಮಡಿಕೇರಿ ಕಡೆ ಪ್ರಯಾಣ ಬೆಳೆಸಿದ್ದರು.[ವೆಂಕಟ್ ವಿರುದ್ಧ ಚಾಟಿ ಬೀಸಿದ ನಿರ್ದೇಶಕ ಎಸ್ ನಾರಾಯಣ್]


Kannada Movie 'Porki Huccha Venkat' Auditions in Madikeri

ತಮ್ಮ ಚಿತ್ರಕ್ಕೆ ಕೊಡಗಿನ ಹುಡುಗಿಯರನ್ನು ಆಯ್ಕೆ ಮಾಡುವ ಹಿನ್ನಲೆಯಲ್ಲಿ ಮಡಿಕೇರಿಯಲ್ಲಿ ನಾಯಕಿಯರ ಆಯ್ಕೆ ಪ್ರಕ್ರಿಯೆ ನಡೆಸಿದರು. ಮಡಿಕೇರಿಯ ಕಾವೇರಿ ಕಲಾ ಕ್ಷೇತ್ರದಲ್ಲಿ ಬೆಳಗ್ಗೆಯಿಂದಲೇ ಫೈರಿಂಗ್ ಸ್ಟಾರ್ ವೆಂಕಟ್ ಮತ್ತು ಚಿತ್ರದ ನಿರ್ಮಾಪಕರು ನಾಯಕಿಯರ ಆಡಿಷನ್ ನಡೆಸಿದರು.


ಚಿತ್ರದಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಳ್ಳಬೇಕೆಂಬ ಆಸಕ್ತಿಯಲ್ಲಿ ಬಂದಿದ್ದ ಕೊಡಗಿನ ಹುಡುಗಿಯರು ತಮ್ಮ ತಮ್ಮ ಇತ್ತೀಚಿಗಿನ ಭಾವಚಿತ್ರಗಳನ್ನು ನೀಡಿ, ಅವರ ಜೊತೆ ಫೋಟೋ ತೆಗೆಸಿಕೊಂಡರು.[ಹುಚ್ಚ ವೆಂಕಟ್ ಅವರ 'ಡಿಕ್ಟೇಟರ್' ಸಿನಿಮಾ ಅರ್ಧಕ್ಕೆ ನಿಂತು ಹೋಯ್ತಾ?]


Kannada Movie 'Porki Huccha Venkat' Auditions in Madikeri

ಇನ್ನು ಚಿತ್ರದ ಬಗ್ಗೆ ಮಾತನಾಡಿದ ಫೈರಿಂಗ್ ಸ್ಟಾರ್ ವೆಂಕಟ್ ಅವರು ಕಾವೇರಿ ಪಾತ್ರಕ್ಕೆ ನಾಯಕಿಯಾಗಿ ಕೊಡಗಿನ ಯುವತಿಯರನ್ನೇ ಆಯ್ಕೆ ಮಾಡಲು ನಿರ್ಧರಿಸಿದ್ದೇವೆ ಎಂದರು. ಇನ್ನು ಚಿತ್ರದ ಬಜೆಟ್ ಕೋಟಿ ದಾಟಲಿದ್ದು, ಚಿತ್ರದಲ್ಲಿ ಕಾವೇರಿ ಕುರಿತಾದ ಹಾಡೊಂದಿದೆ. ಅದನ್ನು ಕೊಡಗು ಮತ್ತು ಚೆನ್ನೈಗಳಲ್ಲಿ ಚಿತ್ರೀಕರಿಸಲಾಗುತ್ತದೆ' ಎಂದರು.['ಫೈರಿಂಗ್ ಸ್ಟಾರ್' 'ಪೊರ್ಕಿ ವೆಂಕಟ್'ಗೆ 'ಸ್ಲಂ'ನಲ್ಲಿ ಮೂಹೂರ್ತ]


Kannada Movie 'Porki Huccha Venkat' Auditions in Madikeri

ಚಿತ್ರಕ್ಕೆ ನಾಯಕಿಯಾಗಿ ಕುಶಾಲನಗರದ ಸೌಜನ್ಯ ಮಾದಪ್ಪ ಎಂಬ ಯುವತಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಚಿತ್ರದ ಬಿಡುಗಡೆ ಮಾಡಲು ವೆಂಕಟ್ ಅವರು ಯೋಜನೆ ಹಾಕಿಕೊಂಡಿದ್ದಾರೆ.

English summary
Kannada Movie 'Porki Huccha Venkat' Auditions in Madikeri, Controversial actor-director Huccha Venkat in the lead role. The movie is directed by Huccha Venkat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada