»   » ಹಾಲಿವುಡ್ ಮಾಷ್ ಕಾಲೆಳೆದ, ಕೋಮಲ್ ಹೊಸ ಚಿತ್ರದ ಪೋಸ್ಟರ್

ಹಾಲಿವುಡ್ ಮಾಷ್ ಕಾಲೆಳೆದ, ಕೋಮಲ್ ಹೊಸ ಚಿತ್ರದ ಪೋಸ್ಟರ್

Posted By:
Subscribe to Filmibeat Kannada

ಹಾಸ್ಯ ನಟ ಕೋಮಲ್ ಕುಮಾರ್ ಅವರು ಇದೇ ಮೊದಲ ಬಾರಿಗೆ 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಎಂಬ ಹೊಸ ಚಿತ್ರದ ಮೂಲಕ ನಟಿ ಪ್ರಿಯಾಮಣಿ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೇ.

ಇದೀಗ ಈ ಚಿತ್ರದಿಂದ ಹೊರಬಂದಿರುವ ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ, ನಿರ್ದೇಶಕ ಶ್ರೀನಿವಾಸ್ ರಾಜು ಆಕ್ಷನ್-ಕಟ್ ಹೇಳಿರುವ 'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಚಿತ್ರದ ವಿಭಿನ್ನ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು, ಸದ್ಯಕ್ಕೆ ಚಿತ್ರತಂಡದ ಡಿಫರೆಂಟ್ ಐಡಿಯಾ ಹಾಲಿವುಡ್ ನ 'ಮಾಷ್' ಚಿತ್ರದ ಪೋಸ್ಟರ್ ಅನ್ನು ಅಣಕಿಸುವಂತಿದೆ.

Kannada movie 'Puttanna' in Mash inspired poster

ಈಗಾಗಲೇ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಂತೂ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.['ಪುಟ್ಟಣ್ಣ' ನ ಅವತಾರ ಎತ್ತಿದ ಕಾಮಿಡಿ ಕಿಂಗ್ ಕೋಮಲ್!]

ಕೇವಲ ಕೈಯಲ್ಲಿ ಒಬ್ಬ ಮಹಿಳೆಯ ದೇಹವನ್ನು ಹೋಲುವ ಹಾಗೆ ವಿಕ್ಟರಿ ಆಕಾರದಲ್ಲಿ ಡಿಸೈನ್ ಮಾಡಿದ್ದು, ಲೀಡ್ ರೋಲ್ ನಲ್ಲಿ ನಟಿಸುತ್ತಿರುವ ನಟಿ ಪ್ರಿಯಾಮಣಿ ಹಾಗೂ ನಟ ಕೋಮಲ್ ಅವರ ಮುಖಗಳು ಎರಡು ಬೆರಳುಗಳಲ್ಲಿ ಕಂಗೊಳಿಸುತ್ತಿದೆ. ಇದೀಗ ಈ ವಿಭಿನ್ನ ಪೋಸ್ಟರ್ ಸಖತ್ ಫೇಮಸ್ ಆಗಿದೆ.

ಅಂದಹಾಗೆ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಹಾಲಿವುಡ್ ಸಿನಿಮಾಗಳ ಪೋಸ್ಟರ್ ಗಳನ್ನು ಅನುಸರಿಸೋದು ಹೊಸದೇನಲ್ಲ, ಯಾಕೆಂದರೆ ಈ ಮೊದಲು ನಟ ನಿನಾಸಂ ಸತೀಶ್ ಅವರ 'ಲೂಸಿಯಾ' ಚಿತ್ರದ ಪೋಸ್ಟರ್ ಕೂಡ ಹಾಲಿವುಡ್ ಚಿತ್ರದ ಪೋಸ್ಟರ್ ಗಳನ್ನು ಅನುಸರಿಸಿದ್ದು, ಇದೀಗ ನಟ ಕೋಮಲ್ ಸರದಿ.

Kannada movie 'Puttanna' in Mash inspired poster

ಇನ್ನು ಬಾಲಿವುಡ್ ಕ್ಷೇತ್ರದಲ್ಲೂ ಇಂತಹ ಪ್ರಯೋಗಗಳನ್ನು ಅನುಸರಿಸುತ್ತಿದ್ದು, ಬಾಲಿವುಡ್ ಬಾದ್ ಷಾ ಕಿಂಗ್ ಖಾನ್ ಶಾರುಖ್ ಅವರು ಕೂಡ ತಮ್ಮ 'ರಾ-ಓನ್' ಚಿತ್ರದಲ್ಲಿ ಹಾಲಿವುಡ್ ಚಿತ್ರ 'ಬ್ಯಾಟ್ ಮನ್' ನ ಪೋಸ್ಟರ್ ಗಳನ್ನು ಅನುಕರಣೆ ಮಾಡಿತ್ತು.

ಒಟ್ನಲ್ಲಿ ಟಾಲಿವುಡ್, ಕಾಲಿವುಡ್, ಬಾಲಿವುಡ್ ಸೇರಿದಂತೆ ಸ್ಯಾಂಡಲ್ ವುಡ್ ಕೂಡ ಇಂತಹ ವಿಶಿಷ್ಟ ಕಾರ್ಯಗಳನ್ನು ಕೈಗೊಂಡು ಪ್ರೇಕ್ಷಕರನ್ನು ರಂಜಿಸುತ್ತಿವೆ. ಇದೀಗ ಕೋಮಲ್ ಅವರ ಈ ವಿಭಿನ್ನ ಸಾಹಸದಿಂದ ಗಾಂಧಿನಗರದ ಮಂದಿಗೆ ಈ ಚಿತ್ರದ ಬಗ್ಗೆ ಕೊಂಚ ಜಾಸ್ತಿನೇ ಕುತೂಹಲ ಮೂಡಿದೆ.

English summary
A new poster of Komal's new film, 'Kathe Chitrakathe Nirdeshana Puttanna', has become popular online with the actor promoting it. The poster shows a hand suggestively designed like a female body. The faces of lead actors Komal and Priyamani adorns two fingers in a victory sign.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada