»   » ಬೆಂಬಿಡದಂತೆ 'ರಾಜಕುಮಾರ'ನಿಗೆ ಕಾಡುತ್ತಿರುವ ಪೈರಸಿ ಭೂತ

ಬೆಂಬಿಡದಂತೆ 'ರಾಜಕುಮಾರ'ನಿಗೆ ಕಾಡುತ್ತಿರುವ ಪೈರಸಿ ಭೂತ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಒಂದು ಸಿನಿಮಾ ನಾಲ್ಕೈದು ವಾರ ಓಡಿದರೆ ಸಾಕು, 'ಸೂಪರ್ ಹಿಟ್' ಎಂಬ ಹಣೆಪಟ್ಟಿ ನೀಡಲಾಗುತ್ತದೆ. ಅಂಥದ್ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ 'ರಾಜಕುಮಾರ' ಸಿನಿಮಾ ಶತದಿನೋತ್ಸವ ಆಚರಿಸಿಕೊಂಡಿದೆ.

ಮಲ್ಟಿಪ್ಲೆಕ್ಸ್ ಗಳಲ್ಲಿ 'ರಾಜಕುಮಾರ' ಆಲ್ ಟೈಮ್ ನಂಬರ್ ಒನ್.!


ಇಡೀ ಫ್ಯಾಮಿಲಿ ಕೂತು ನೋಡಬಹುದಾದ ಸದಭಿರುಚಿಯ ಸಿನಿಮಾ 'ರಾಜಕುಮಾರ' ಥಿಯೇಟರ್ ನಲ್ಲಿ ಇನ್ನೂ ಪ್ರದರ್ಶನ ಆಗುತ್ತಿರುವಾಗಲೇ, ಪೈರಸಿ ಭೂತ ಬೆಂಬಿಡದಂತೆ ಕಾಡುತ್ತಿದೆ. ಮುಂದೆ ಓದಿರಿ...


ಕೇಬಲ್ ಚಾನೆಲ್ ನಲ್ಲಿ ಸಿನಿಮಾ ಪ್ರಸಾರ

ಕಳೆದ ಕೆಲ ದಿನಗಳ ಹಿಂದೆಯಷ್ಟೇ, ಖಾಸಗಿ ಕೇಬಲ್ ಚಾನೆಲ್ ಒಂದರಲ್ಲಿ 'ರಾಜಕುಮಾರ' ಸಿನಿಮಾ ಪ್ರಸಾರ ಆಗಿತ್ತು.


ಪುನೀತ್ 'ರಾಜಕುಮಾರ'ನಿಗೆ ಶತ್ರುವಾದ 'ಆ' ಕೇಬಲ್ ಚಾನಲ್.!


ಮಾರುಕಟ್ಟೆಯಲ್ಲಿ ಪೈರೇಟೆಡ್ ಸಿ.ಡಿಗಳು

'ರಾಜಕುಮಾರ' ಚಿತ್ರದ ಒರಿಜಿನಲ್ ಸಿ.ಡಿ/ಡಿ.ವಿ.ಡಿಗಳು ಇನ್ನೂ ಮಾರುಕಟ್ಟೆಗೆ ಲಗ್ಗೆ ಇಟ್ಟಿಲ್ಲ. ಆದ್ರೆ, ಪೈರೇಟೆಡ್ ಸಿ.ಡಿಗಳ ರಾಜ್ಯಭಾರ ಮಾತ್ರ ಮಾರುಕಟ್ಟೆಯಲ್ಲಿ ಜೋರಾಗಿದೆ.


ಅಪ್ಪು ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಸುದೀಪ್, ಯಶ್, ಉಪೇಂದ್ರ.!


ಫೇಸ್ ಬುಕ್ ನಲ್ಲಿ ವಿಡಿಯೋಗಳು

ಇನ್ನೂ ಫೇಸ್ ಬುಕ್ ನಲ್ಲೂ 'ರಾಜಕುಮಾರ' ಚಿತ್ರದ ವಿಡಿಯೋ ಹರಿದಾಡುತ್ತಿದೆ. ಅದನ್ನ ಶೇರ್ ಮಾಡುವವರ ಸಂಖ್ಯೆ ಕೂಡ ಜಾಸ್ತಿ ಆಗಿದೆ.


ನಿರ್ಮಾಪಕರಿಗೆ ಲಾಸು

'ರಾಜಕುಮಾರ' ಸಿನಿಮಾ ಕೋಟಿಗಟ್ಟಲೆ ಕಲೆಕ್ಷನ್ ಮಾಡಿದ್ದರೂ, ಪೈರಸಿ ಕಾಟದಿಂದಾಗಿ ನಿರ್ಮಾಪಕರು ನಷ್ಟ ಅನುಭವಿಸುವಂತಾಗಿದೆ. ಅಲ್ಲದೇ, 'ರಾಜಕುಮಾರ' ಚಿತ್ರದ ಪ್ರಸಾರ ಹಕ್ಕು ಪಡೆದಿರುವ ಖಾಸಗಿ ಮನರಂಜನಾ ವಾಹಿನಿಗೂ ಪೈರಸಿ ಭೂತದಿಂದ ಖಂಡಿತ ಲಾಸ್ ಆಗಲಿದೆ.


ಕನ್ನಡ ಚಿತ್ರಗಳನ್ನ ಪ್ರೋತ್ಸಾಹಿಸಿ

ಕರ್ನಾಟಕದಲ್ಲಿ ಕನ್ನಡ ಚಿತ್ರಗಳನ್ನ ಪ್ರೋತ್ಸಾಹಿಸುವುದು ಕನ್ನಡಿಗರ ಕೈಯಲ್ಲೇ ಇದೆ. ಪೈರೇಟೆಡ್ ಸಿ.ಡಿ ಹಾಗೂ ವಿಡಿಯೋಗಳನ್ನ ನೋಡಲು ಮುಗಿಬೀಳದೆ, ಥಿಯೇಟರ್ ನಲ್ಲಿಯೇ ಕನ್ನಡ ಸಿನಿಮಾ ನೋಡಿದರೆ, ಉತ್ತಮ ಕನ್ನಡ ಚಿತ್ರಗಳನ್ನು ನಿರ್ಮಿಸಲು ನಿರ್ಮಾಪಕರಿಗೆ ಪ್ರೋತ್ಸಾಹ ಮಾಡಿದಂತೆ..! ಕನ್ನಡಿಗರೇ ದಯವಿಟ್ಟು ಆಲೋಚಿಸಿ...


English summary
Power Star Puneeth Rajkumar starrer Kannada Movie 'Raajakumara' faces Piracy problem

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada