For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕ ಕೆ ಮಂಜು ಪುತ್ರನ ಸಿನಿಮಾ 'ರಾಣ'ಗೆ ಸಾಥ್ ಕೊಟ್ಟ ಧ್ರುವ ಸರ್ಜಾ!

  |

  ಸ್ಯಾಂಡಲ್‌ವುಡ್‌ನ ಹಿರಿಯ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಾಯಕನಾಗಿ ನಟಿಸಿರುವ ಸಿನಿಮಾ 'ರಾಣ'. ಇದೀಗ ಸಿನಿಮಾ ಬಿಡುಗಡೆ ಸಜ್ಜಾಗಿ ನಿಂತಿದೆ. ಇತ್ತೀಚೆಗಷ್ಟೇ 'ರಾಣ' ಸಿನಿಮಾದ ಆಕ್ಷನ್ ಟ್ರೈಲರ್ ರಿಲೀಸ್ ಆಗಿದ್ದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಿಲೀಸ್ ಮಾಡಿದ್ದಾರೆ.

  ಪಕ್ಕಾ ಮಾಸ್ ಸಿನಿಮಾ 'ರಾಣ' ಸಿನಿಮಾವನ್ನು ನಂದ ಕಿಶೋರ್ ನಿರ್ದೇಶನ ಮಾಡಿದ್ದಾರೆ. 'ಪೊಗರು' ಸಿನಿಮಾ ಬಳಿಕ ನಂದ ಕಿಶೋರ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಯುವ ನಟನಿಗೆ ಯಶಸ್ಸು ಕೊಡಿಸಲು ತುದಿಗಾಲಲ್ಲಿ ನಿಂತಿದ್ದಾರೆ

  ಈ ವೇಳೆ ಧ್ರುವ ಸರ್ಜಾ ಶ್ರೇಯಸ್‌ಗೆ ಶುಭ ಹಾರೈಸಿದ್ದಾರೆ. "ಮಂಜು ನನ್ನ ಆತ್ಮೀಯ ಗೆಳೆಯ. ಈ ಸಿನಿಮಾಗಾಗಿ ಪಟ್ಟಿರುವ ಶ್ರಮ ಟ್ರೈಲರ್‌ನಲ್ಲಿ ಎದ್ದು ಕಾಣುತ್ತಿದೆ‌‌. ಉತ್ತಮ ತಂತ್ರಜ್ಞರ ಹಾಗೂ ಕಲಾವಿದರ ಜೊತೆ ಹಾಗೂ ಕೆ.ಮಂಜು ಅವರ ಸಾರಥ್ಯದಲ್ಲಿ ಈ ಸಿನಿಮಾ ಚೆನ್ನಾಗಿ ಬಂದಿದೆ. ನಾನು ಮೊದಲ ದಿನ ಸಿನಿಮಾ ನೋಡುತ್ತೇನೆ. ನೀವು ನೋಡಿ" ಎಂದಿದ್ದಾರೆ ಧ್ರುವ ಸರ್ಜಾ.

  ಧ್ರುವ ಸರ್ಜಾ ಜೊತೆ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಕೂಡ ಶ್ರೇಯಸ್‌ಗೆ ಸಾಥ್ ನೀಡಿದ್ದಾರೆ. "ಮೂರುವರೆ ವರ್ಷಗಳ ಬಳಿಕ ಶ್ರೇಯಸ್ ನಟಿಸಿದ 'ರಾಣ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ನವೆಂಬರ್ 11 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. "ಈ ದಿನಕ್ಕಾಗಿ ನಾನು ಕಾಯುತ್ತಿದ್ದೆ ಎಂದು ಶ್ರೇಯಸ್ ಭಾವುಕರಾದರು.

  'ಏಕ್ ಲವ್ ಯಾ' ಸಿನಿಮಾ ನಾಯಕಿ ರೀಷ್ಮಾ ನಾಣಯ್ಯ 'ರಾಣ' ಸಿನಿಮಾದಲ್ಲಿ ನಟಿಸಿದ್ದಾರೆ. ಇವರೊಂಧಿಗೆ ರಜನಿ ಭಾರದ್ವಾಜ್, ರಘು, ಮೋಹನ್ ಧನರಾಜ್ ಮುಂತಾದವರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶನದೊಂದಿಗೆ ಈ ಚಿತ್ರಕ್ಕೆ ರಿ-ರೆಕಾರ್ಡಿಂಗ್ ಸಹ ಮಾಡಿದ್ದಾರೆ ಚಂದನ್ ಶೆಟ್ಟಿ.

  Kannada Movie Raana Trailer Released By Dhruva Sarja

  11.11.22 ಒಳ್ಳೆಯ ದಿನ ಈ ಕಾರಣಕ್ಕಾಗಿ 'ರಾಣ' ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಮಾಪಕ ಗುಜ್ಜಾಲ್ ಪುರುಷೋತ್ತಮ್ ನಿರ್ಧರಿಸಿದ್ದಾರೆ. ನಿರ್ಮಾಪಕರಾದ ಕೆ.ಸಿ.ಎನ್ ಕುಮಾರ್, ಸೂರಪ್ಪ ಬಾಬು, ರಮೇಶ್ ರೆಡ್ಡಿ, ಚೇತನ್ ಗೌಡ, ಕಡ್ಡಿಪುಡಿ ಚಂದ್ರು, ರೈತ ಕೇಶವ್ ಸೇರಿದಂತೆ ಅನೇಕ ಗಣ್ಯರು 'ರಾಣ'ಗೆ ಶುಭ ಕೋರಿದ್ದಾರೆ.

  English summary
  Kannada Movie Raana Trailer Released By Dhruva Sarja, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X