»   » ದೀಪಾವಳಿ ಹಬ್ಬದ ಉಡುಗೊರೆ ; 'ರಾಮ್ ಲೀಲಾ' ತೆರೆಗೆ

ದೀಪಾವಳಿ ಹಬ್ಬದ ಉಡುಗೊರೆ ; 'ರಾಮ್ ಲೀಲಾ' ತೆರೆಗೆ

Posted By:
Subscribe to Filmibeat Kannada

ನಟ ಚಿರಂಜೀವಿ ಸರ್ಜಾ ಮತ್ತು ನಟಿ ಅಮೂಲ್ಯ ಜೋಡಿಯಾಗಿ ನಟಿಸಿರುವ 'ರಾಮ್ ಲೀಲಾ' ಚಿತ್ರಕ್ಕೆ ಸೆನ್ಸಾರ್ ಮಂಡಳಿ U ಸರ್ಟಿಫಿಕೇಟ್ ನೀಡಿದೆ. ನವೆಂಬರ್ 12 ರಂದು ದೀಪಾವಳಿ ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ 'ರಾಮ್ ಲೀಲಾ' ರಿಲೀಸ್ ಆಗಲಿದೆ.

ಟಾಲಿವುಡ್ ನ ಹಿಟ್ 'ಲೌಕ್ಯಂ' ಚಿತ್ರದ ರೀಮೇಕ್ ಈ 'ರಾಮ್ ಲೀಲಾ'. ರೀಮೇಕ್ ಸಿನಿಮಾ ಆದರೂ, ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ವಿಜಯ್ ಕಿರಣ್. ಅಂದ್ಹಾಗೆ, ವಿಜಯ್ ಕಿರಣ್ ಗಿದು ಚೊಚ್ಚಲ ನಿರ್ದೇಶನದ ಸಿನಿಮಾ.

Kannada Movie 'Ram-Leela' gets U certificate-releasing on November 12th

'ಮನಂ' ಚಿತ್ರಕ್ಕೆ ಸೂಪರ್ ಹಿಟ್ ಹಾಡುಗಳನ್ನ ಕಂಪೋಸ್ ಮಾಡಿದ್ದ ಅನುಪ್ ರೂಬೆನ್ಸ್, 'ರಾಮ್ ಲೀಲಾ' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ಚಿರಂಜೀವಿ ಸರ್ಜಾ-ಅಮೂಲ್ಯ ಜೋಡಿಯಾಗಿರುವ ಸಿನಿಮಾ ಇದು. [ಟ್ರೈಲರ್ : ಕನ್ನಡದ 'ರಾಮ್ ಲೀಲಾ' ಪಕ್ಕಾ ಎಂಟರ್ ಟೇನರ್]

ಸೌಂದರ್ಯ ಜಗದೀಶ್ ನಿರ್ಮಾಣ ಮಾಡಿರುವ 'ರಾಮ್ ಲೀಲಾ' ಇದೇ ತಿಂಗಳು ನಿಮ್ಮೆಲ್ಲರ ಎದುರಿಗೆ ಬರಲಿದೆ. 'ರಾಮ್ ಲೀಲಾ' ಲೀಲೆ ನೋಡೋಕೆ ನೀವು ರೆಡಿಯಾಗಿ...

English summary
Kannada Actor Chiranjeevi Sarja and Amulya starrer Kannada Movie 'Ram Leela' has received 'U' certificate from the Censor Board. The movie is all set to release on November 12th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada