Just In
Don't Miss!
- News
ಅರ್ಧ ಮುಂಬೈ ಕರ್ನಾಟಕಕ್ಕೆ ಸೇರಬೇಕು: ವಾಟಾಳ್ ನಾಗರಾಜ್
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಸಿಡ್ನಿ, ದಿನ 4, Live ಸ್ಕೋರ್
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'Rambo 2' ಸಿನಿಮಾ ಕಾಶೀನಾಥ್ ಅವರಿಗೆ ಸಮರ್ಪಣೆ
ಶರಣ್ ನಟಿಸಿರುವ 'Rambo 2' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದೆ. ಈ ಸಿನಿಮಾ ನೋಡುಗರಿಗೆ ಸಖತ್ ಖುಷಿ ಕೊಡುತ್ತದೆ. ಆದರೆ ಅದಕ್ಕೂ ಮಿಗಿಲಾಗಿ ಸಿನಿಮಾದ ಟೈಟಲ್ ಕಾರ್ಡ್ ನಲ್ಲಿಯೇ ಚಿತ್ರತಂಡ ಪ್ರೇಕ್ಷಕರ ಮುಖದಲ್ಲಿ ಸಂತಸವನ್ನು ಮೂಡಿಸುತ್ತದೆ. ಕಾರಣ 'Rambo 2' ಸಿನಿಮಾವನ್ನು ನಟ, ನಿರ್ದೇಶಕ ಕಾಶೀನಾಥ್ ಅವರಿಗೆ ಸಮರ್ಪಣೆ ಮಾಡಲಾಗಿದೆ.
'Rambo 2' ಚಿತ್ರವನ್ನು ಕಾಶೀನಾಥ್ ಅವರಿಗೆ ಡೆಡಿಕೇಟ್ ಮಾಡಲಾಗಿದೆ. ಚಿತ್ರದ ಪ್ರಾರಂಭದಲ್ಲಿ ಬರುವ ಟೈಟಲ್ ಕಾರ್ಡ್ ನಲ್ಲಿ ಕಾಶೀನಾಥ್ ಕ್ಯಾಮರಾ ಹಿಡಿದ ಫೋಟೋವೊಂದು ತೆರೆ ಮೇಲೆ ಮೂಡುತ್ತದೆ. ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ಇದನ್ನು ನೋಡಿಯೇ ಖುಷಿ ಆಗುತ್ತದೆ.
Rambo 2 ವಿಮರ್ಶೆ : ಕಾಮಿಡಿ 'ವೆರೈಟಿ', ಮನರಂಜನೆ ಗ್ಯಾರೆಂಟಿ
ಅಂದಹಾಗೆ, ನಿರ್ದೇಶಕ ತರುಣ್ ಸುಧೀರ್ 'Rambo 2' ಚಿತ್ರದ ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಈ ಹಿಂದೆ ತರುಣ್ ನಿರ್ದೇಶನದ 'ಚೌಕ' ಚಿತ್ರದಲ್ಲಿ ಕಾಶೀನಾಥ್ ನಟಿಸಿದ್ದು, ಆ ಚಿತ್ರದ ಮೂಲಕ ಅವರು ಕಾಶಿನಾಥ್ ಅವರಿಗೆ ತುಂಬ ಆಪ್ತರಾಗಿದ್ದರು. ಇನ್ನು ಕೆಲ ತಿಂಗಳ ಹಿಂದೆ ಕಾಶೀನಾಥ್ ನಿಧನರಾಗಿದ್ದು, ಈ ಚಿತ್ರವನ್ನು ಅವರಿಗೆ ಸಮರ್ಪಣೆ ಮಾಡಲಾಗಿದೆ. ಈ ಮೂಲಕ 'Rambo 2' ಚಿತ್ರತಂಡ ಒಬ್ಬ ಹೆಮ್ಮೆಯ ನಿರ್ದೇಶಕನಿಗೆ ಗೌರವ ಸಮರ್ಪಣೆ ಮಾಡಿದೆ.
ಹೇಗಿದೆ 'Rambo 2' ಸಿನಿಮಾ ?
ಕೃಷ್ಣ (ಶರಣ್) ಮತ್ತು ಮಯೂರಿ (ಆಶಿಕಾ ರಂಗನಾಥ್) ಇಬ್ಬರು ಮಾಡ್ರನ್ ಪ್ರೇಮಿಗಳು. ಈ ಇಬ್ಬರು ಒಂದು ದಿನದ ಮಟ್ಟಿಗೆ ಡೇಟಿಂಗ್ ಎಂದು ಲಾಂಗ್ ಡ್ರೈವ್ ಹೋಗುತ್ತಾರೆ. ಆ ಜರ್ನಿಯೇ ಇಡೀ ಸಿನಿಮಾದ ಕಥೆ. ಇಬ್ಬರು ಲವರ್ಸ್ ಗಳ ಕಾರು ಪ್ರಯಾಣದಲ್ಲಿ ನಡೆಯುವ ಘಟನೆಗಳ ಸುತ್ತ ಸಿನಿಮಾ ನಿಂತಿದೆ. ಆ ಪ್ರಯಾಣದಲ್ಲಿ ನಗು, ಅಳು, ರೋಚಕತೆ, ಕುತೂಹಲ ಹೀಗೆ ಎಲ್ಲ ಅಂಶಗಳು ಇವೆ.