»   » ವಿದೇಶದಲ್ಲಿ ಡ್ಯುಯೆಟ್ ಹಾಡಿ ಬಂದ ಚಿರು-ಅಮೂಲ್ಯ

ವಿದೇಶದಲ್ಲಿ ಡ್ಯುಯೆಟ್ ಹಾಡಿ ಬಂದ ಚಿರು-ಅಮೂಲ್ಯ

Posted By:
Subscribe to Filmibeat Kannada

ಗಾಂಧಿನಗರದ ಅಪರೂಪದ ನಿರ್ಮಾಪಕ ಸೌಂದರ್ಯ ಜಗದೀಶ್. ಇವರು ನಿರ್ಮಾಣ ಮಾಡಿದ ಸಿನಿಮಾಗಳು ಪ್ರೇಕ್ಷಕರ ಮನರಂಜಿಸಿದೆ. 'ಮಸ್ತ್ ಮಜಾ ಮಾಡಿ', 'ಅಪ್ಪು-ಪಪ್ಪು', ಮತ್ತು 'ಸ್ನೇಹಿತರು' ಮುಂತಾದ ಕಾಮಿಡಿ ಚಿತ್ರಗಳನ್ನು ಸಿನಿಪ್ರಿಯರಿಗೆ ಅರ್ಪಿಸಿದ ಕ್ರೆಡಿಟ್ ಇವರದು.

ಇದೀಗ ಸೌಂದರ್ಯ ಜಗದೀಶ್ ಫಿಲಂ ಲಾಂಛನದಲ್ಲಿ ನಿರ್ಮಿಸುತ್ತಿರುವ ಬಹುನಿರೀಕ್ಷಿತ ಚಿತ್ರ 'ರಾಮ್ ಲೀಲಾ'. ಚಿರಂಜೀವಿ ಸರ್ಜಾ, ಅಮೂಲ್ಯ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ರಾಮ್ ಲೀಲಾ' ಚಿತ್ರತಂಡ ಕಳೆದ 15 ದಿನಗಳ ಕಾಲ ಜಾರ್ಜಿಯಾದ ಟಿಬಿಲಿಸಿ, ಬತುಮಿ ಹಾಗೂ ರಷ್ಯಾದ ಬಾರ್ಡರ್ ಕಸ್ಟೇಗಿಯಲ್ಲಿ ಸೇರಿದಂತೆ ಹಲವು ಮನೋಹರ ತಾಣಗಳಲ್ಲಿ ಹಾಡುಗಳ ಚಿತ್ರೀಕರಣ ನಡೆಸಿದೆ. [ಕನ್ನಡದ 'ರಾಮ್ ಲೀಲಾ'ದಲ್ಲಿ ಚಿರಂಜೀವಿ ಸರ್ಜಾ-ಅಮೂಲ್ಯ ]

Kannada movie 'Ramleela' team Back to India

ಈಗಾಗಲೇ ಭಾರತಕ್ಕೆ ವಾಪಸಾಗಿರುವ ಚಿತ್ರತಂಡ, ವಿದೇಶದಲ್ಲಿ ತಮಗೆ ಆದ ಅನುಭವಗಳನ್ನು ಹಂಚಿಕೊಳ್ಳುತ್ತಾ, ಇಲ್ಲಿನ 25 ಜನರ ತಂಡದೊಂದಿಗೆ ಅಲ್ಲಿನ 50 ಜನರ ತಂಡವನ್ನು ಸೇರಿಸಿಕೊಂಡು 3 ಕ್ಯಾಮರಾಗಳೊಂದಿಗೆ ಕಡಿಮೆ ಆಕ್ಸಿಜನ್ ಪ್ರದೇಶವಾದ ಕಸ್ಟೇಗಿಯಲ್ಲಿ ತುಂಬಾ ಶ್ರಮವಹಿಸಿ ಒಂದು ಹಾಡನ್ನು ಚಿತ್ರೀಕರಿಸಿದ್ದಾರಂತೆ. [ಚಿರು-ಅಮೂಲ್ಯ ನಡುವೆ ನಟಿ ಸಂಜನಾ ಲೀಲೆ]

Kannada movie 'Ramleela' team Back to India

ವಿಜಯ್ ಕಿರಣ್ ಆಕ್ಷನ್-ಕಟ್ ಹೇಳಿರುವ 'ರಾಮ್ ಲೀಲಾ' ಚಿತ್ರಕ್ಕೆ ಅನೂಪ್ ರೂಬೆನ್ಸ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನುಳಿದಂತೆ ಸಂಜನಾ, ಸಾಧುಕೋಕಿಲ, ರಂಗಾಯಣ ರಘು, ರವಿಕಾಳೆ, ಚಿಕ್ಕಣ್ಣ, ರವಿಶಂಕರ್ ಗೌಡ, ಶೋಭರಾಜ್, ಟೆನ್ನಿಸ್ ಕೃಷ್ಣ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

English summary
Kannada movie 'Ramleela' has finished song shooting in Russia and are now back to India. 'Ramleela' features Chiranjeevi Sarja and Amulya directed by Vijay Kiran.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X