»   » ಜುಲೈ 3 ರಂದು 'ರಂಗಿತರಂಗ' ಭರ್ಜರಿ ಓಪನ್ನಿಂಗ್

ಜುಲೈ 3 ರಂದು 'ರಂಗಿತರಂಗ' ಭರ್ಜರಿ ಓಪನ್ನಿಂಗ್

Posted By:
Subscribe to Filmibeat Kannada

ಆಗಾಗ ಗಾಂಧಿನಗರದತ್ತ ಮುಖ ಮಾಡಿ ಹೋಗುವ ಹೊಸಬರ ಚಿತ್ರಗಳಿಗೇನು ಬರ ಇಲ್ಲ. ಕೆಲ ಚಿತ್ರಗಳು ನೆಗೆಟಿವ್ ಶೇಡ್ ನಲ್ಲಿ ಪಬ್ಲಿಸಿಟಿ ಪಡೆದುಕೊಂಡರೆ ಇನ್ನೂ ಕೆಲವು ಹಲವು ವಿಶೇಷತೆಗಳಿಂದ ಹಿಸ್ಟರಿ ಕ್ರಿಯೇಟ್ ಮಾಡುತ್ತವೆ. ಅಂತಹ ಸಾಲಿಗೆ ಈಗ ಹೊಸ ಸೇರ್ಪಡೆ 'ರಂಗಿತರಂಗ'.

ಹೌದು, ಅದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವ 'ರಂಗಿತರಂಗ' ಸಂಪೂರ್ಣ ಯುವ ಪ್ರತಿಭೆಗಳೇ ಸೇರಿ ಮಾಡಿರುವ ಚಿತ್ರ. ಮಾತ್ರವಲ್ಲದೇ ಇಡೀ ಚಿತ್ರತಂಡಕ್ಕೆ ಹೊಸ ಪ್ರಯೋಗ. ಇನ್ನೂ ಈ ಚಿತ್ರದ ಟ್ರೈಲರ್ ನೋಡಿದ ನಮ್ಮ ಸ್ಟಾರ್ ನಟರಾದ ಶ್ರೀಮುರಳಿ, ಹಾಗೂ ಯಶ್ ಭೇಷ್ ಅಂದಿದ್ದಾರೆ.[ಈ ಹಾಡು ಕೇಳಿ..ನಿಮ್ಮ ನಾಲಿಗೆಗೆ ಕಸರತ್ತು ಕೊಡಿ...]

Kannada Movie Rangitaranga releasing on July 3rd

ಇದೇ ವಾರ, ಅಂದ್ರೆ ಜುಲೈ 3 ರಂದು 'ರಂಗಿತರಂಗ' ಥಿಯೇಟರ್ ಗಳಲ್ಲಿ ತೆರೆಕಾಣಲಿದೆ. ರೋಚಕ ಕಥೆ, ಕುತೂಹಲ ಕೆರಳಿಸುವ ಸನ್ನಿವೇಶಗಳು, ಕಣ್ಣಿಗೆ ಮುದ ನೀಡುವ ಸುಂದರ ತಾಣಗಳು, ಕಿವಿಗೆ ಇಂಪು ನೀಡುವ ಸಂಗೀತವಿರುವ 'ರಂಗಿತರಂಗ' ಖಂಡಿತವಾಗಿಯೂ ಹಿಟ್ ಆಗುವ ನಿರೀಕ್ಷೆ ಇದೆ.

ಪಕ್ಕಾ ಥ್ರಿಲ್ಲರ್ ಸಿನಿಮಾ ಆಗಿರುವ 'ರಂಗಿತರಂಗ' ಮೂಲಕ ನಿರೂಪ್ ಭಂಡಾರಿ, ರಾಧಿಕಾ ಚೇತನ್ ಸೇರಿದಂತೆ ಅನೇಕ ಕಲಾವಿದರು ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೊತೆಗೆ ಸಾಯಿಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಅನೂಪ್ ಭಂಡಾರಿ ಚಿತ್ರದ ನಿರ್ದೇಶನದ ಜೊತೆಗೆ ಸಾಹಿತ್ಯ ರಚಿಸಿ, ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.[ಸೋಷಿಯಲ್ ಮೀಡಿಯಾದಲ್ಲಿ 'ರಂಗಿತರಂಗ' ಸೂಪರ್ ಹಿಟ್]

Kannada Movie Rangitaranga releasing on July 3rd

ಈಗಾಗಲೇ ಟ್ರೈಲರ್ ಮೂಲಕ ಸಾಮಾಜಿಕ ಜಾಲಾತಾಣಗಳಲ್ಲಿ ಸೂಪರ್ ಹಿಟ್ ಆಗಿರುವ 'ರಂಗಿತರಂಗ' ತೆರೆಯ ಮೇಲೆ ಯಾವ ರೀತಿ ಕಮಾಲ್ ಮಾಡಲಿದೆ ಅನ್ನುವುದಕ್ಕೆ ಇದೇ ಶುಕ್ರವಾರ ಉತ್ತರ ಸಿಗಲಿದೆ.

English summary
Kannada movie 'Rangitaranga' is all set to release on July 3rd. The Movie features Nirup Bhandari, Avantika Shetty, Radhika Chetan directed by Anup Bhandari.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada