»   » ಕನ್ನಡ ತಾರೆಯರು ಮೆಚ್ಚಿದ 'ರಿಕ್ತ' ಈ ವಾರ ಬಿಡುಗಡೆ!

ಕನ್ನಡ ತಾರೆಯರು ಮೆಚ್ಚಿದ 'ರಿಕ್ತ' ಈ ವಾರ ಬಿಡುಗಡೆ!

Posted By:
Subscribe to Filmibeat Kannada

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಭಿನಯದ 'ರಿಕ್ತ' ನಾಳೆ ಅಂದ್ರೆ ಜನವರಿ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಾರರ್ ಕಮ್ ಕಾಮಿಡಿಯ ಕಥಾಹಂದರವನ್ನ ಹೊಂದಿರುವ 'ರಿಕ್ತ' ಈ ವಾರದಿಂದ ಚಿತ್ರಮಂದಿರಗಳಲ್ಲಿ ಕಮಾಲ್ ಮಾಡಲಿದೆ.

ಸದ್ಯ, ಟ್ರೈಲರ್ ಹಾಗೂ ಹಾಡುಗಳ ಮೂಲಕ ವಿಶೇಷವೆನಿಸಿಕೊಂಡಿರುವ 'ರಿಕ್ತ' ಚಿತ್ರಕ್ಕೆ, ಸ್ಯಾಂಡಲ್ ವುಡ್ ತಾರೆಯರು ಸಾಥ್ ಕೊಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್, ಯೋಗರಾಜ್ ಭಟ್, ಹರ್ಷಿಕಾ ಪೂಣಚ್ಚ, ಎಪಿ ಅರ್ಜುನ್, ಮಯೂರಿ, ಪವನ್ ಒಡೆಯರ್ ಸೇರಿದಂತೆ ಹಲವರು 'ರಿಕ್ತ' ಚಿತ್ರದ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.['ರಿಕ್ತ' ಇದು ಸಂಚಾರಿ ವಿಜಯ್ ಬತ್ತಳಿಕೆಯಿಂದ ಹೊರಟ ಹೊಸ ಬಾಣ]

ಸ್ಯಾಂಡಲ್ ವುಡ್ ಸ್ಟಾರ್ ಗಳು ಸಾಥ್!

'ರಿಕ್ತ' ಈ ವಾರ ತೆರೆಕಾಣುತ್ತಿದ್ದು, ಪುನೀತ್ ರಾಜ್ ಕುಮಾರ್, ಯೋಗರಾಜ್ ಭಟ್, ಹರ್ಷಿಕಾ ಪೂಣಚ್ಚ, ಎಪಿ ಅರ್ಜುನ್, ಮಯೂರಿ, ಹೆಬ್ಬುಲಿ ಕೃಷ್ಣ, ವಿ.ನಾಗೇಂದ್ರ ಪ್ರಸಾದ್, ಮಾಸ್ಟರ್ ಆನಂದ್ ಸೇರಿದಂತೆ ಹಲವರು ಕಲಾವಿದರು ಚಿತ್ರಕ್ಕೆ ಶುಭಾ ಹಾರೈಸಿದ್ದಾರೆ.[ಸೆನ್ಸಾರ್ ಮಂಡಳಿಯಲ್ಲಿ ಕ್ಲೀನ್ ಚಿಟ್ ಪಡೆದುಕೊಂಡ 'ರಿಕ್ತ' ]

ಡಿಫ್ರೆಂಟ್ ಗೆಟಪ್ ನಲ್ಲಿ ವಿಜಯ್

'ರಿಕ್ತ' ಚಿತ್ರದಲ್ಲಿ ಸಂಚಾರಿ ವಿಜಯ್ ಎರಡು ಡಿಫ್ರೆಂಟ್ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೆಡೆ ದೆವ್ವದ ಪಾತ್ರ ಹಾಗೂ ಮತ್ತೊಂದೆಡೆ ಲವರ್ ಬಾಯ್ ಆಗಿ ಬಣ್ಣ ಹಚ್ಚಿದ್ದಾರೆ. ಇನ್ನೂ ಸಂಚಾರಿ ವಿಜಯ್ ಗೆ ಯುವ ನಟಿ ಅದ್ವಿಕ ಸಾಥ್ ಕೊಟ್ಟಿದ್ದು, ಚಿತ್ರದ ನಾಯಕಿಯಾಗಿದ್ದಾರೆ

ನವ ನಿರ್ದೇಶಕ ಅಮೃತ್ ಕುಮಾರ್

'ರಿಕ್ತ' ಚಿತ್ರಕ್ಕೆ ನವ ನಿರ್ದೇಶಕ ಅಮೃತ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾ. ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಪೋಸ್ಟರ್ ಸ್ಯಾಂಡಲ್ ವುಡ್‌ನಲ್ಲಿ ಭರವಸೆ ಮೂಡಿಸಿದ್ದು, ಎಲ್ಲಾ ಕುತೂಹಲಕ್ಕೆ ಈ ವಾರ ಬ್ರೇಕ್ ಬೀಳಲಿದೆ.

ಮತ್ತೆ ಬಂದ ದೇವದಾಸ್!

ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ, ದೇವದಾಸ್. 'ಮುಂಗಾರು ಮಳೆ' ಚಿತ್ರದಲ್ಲಿದ್ದ 'ದೇವದಾಸ್' ಸತ್ತ ನಂತರ ದೆವ್ವವಾಗಿ 'ರಿಕ್ತ' ಚಿತ್ರದಲ್ಲಿ ಕಾಣಿಸಿಕೊಂಡಿದೆ. ಅಲ್ಲಿ ಗೊಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಯಲ್ಲಿದ್ದ 'ದೇವದಾಸ್', ರಿಕ್ತ ಚಿತ್ರದಲ್ಲಿ ಸಂಚಾರಿ ವಿಜಯ್ ಅವರ ಜೊತೆ ಸೇರಿದೆ.[ನಂಬಿದ್ರೆ ನಂಬಿ.! 'ಮುಂಗಾರು ಮಳೆ'ಯ ಮೊಲ 'ದೇವದಾಸ್' ದೆವ್ವ ಆಗಿದೆ.!]

ಹಾಡುಗಳು ಸೂಪರ್ ಹಿಟ್!

'ರಿಕ್ತ' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವುದು ರಿಕ್ಕಿ ಸೋನು. ಈಗಾಗಲೇ ಚಿತ್ರದ ಹಾಡುಗಳು ಮೋಡಿ ಮಾಡಿವೆ. ಅದ್ರಲ್ಲೂ 'ವಾಟ್ ಡೂ ಮಿಸ್ಸಡೂ' ಹಾಡು ಫೆವರೆಟ್ ಎನಿಸಿಕೊಂಡಿದೆ. ಚಿತ್ರಕ್ಕೆ ಅರುಣ್ ಕುಮಾರ್ ಬಂಡವಾಳ ಹೂಡಿದ್ದಾರೆ. ಮುರುಳಿಧರ್ ಅವರ ಕ್ಯಾಮೆರಾ ವರ್ಕ್ ಇದೆ.

English summary
Kannada Actor Sanchari Vijay's 'Riktha' Movie Has Releasing on January 19th. The Movie is Directed by Amruth Kumar.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X