»   » ಕೊಲೆಯ ರಹಸ್ಯ ಭೇದಿಸಿ ಹೊರಟ 'ರಿಂಗ್ ರೋಡ್'

ಕೊಲೆಯ ರಹಸ್ಯ ಭೇದಿಸಿ ಹೊರಟ 'ರಿಂಗ್ ರೋಡ್'

Posted By:
Subscribe to Filmibeat Kannada

ಹೆಣ್ಮಕ್ಕಳು ಸೇರಿಕೊಂಡು ಮಾಡಿರುವ 'ರಿಂಗ್ ರೋಡ್' ಗಾಂಧಿನಗರದಲ್ಲಿ ಟೈಟಲ್ ವಿಚಾರದಲ್ಲಿ ಭಾರಿ ಸುದ್ದಿಯಾಗಿದ್ದ ವಿಚಾರ ನಿಮಗೆ ಗೊತ್ತೆ ಇದೆ ಅಲ್ವಾ?. ದುನಿಯಾ ವಿಜಯ್, ನಿಖಿತಾ ತುಕ್ರಾಲ್ ಹಾಗು ಖುಷಿ ಮುಂತಾದವರು ಕಾಣಿಸಿಕೊಂಡಿರುವ ಈ ಚಿತ್ರ ಅಕ್ಟೋಬರ್ 22 ರಂದು ತೆರೆ ಕಾಣುತ್ತಿದೆ.

ರಿಯಲ್ ಮರ್ಡರ್ ಒಂದನ್ನು ಅಧಾರವಾಗಿಟ್ಟುಕೊಂಡು ನಿರ್ದೇಶಕಿ ಪ್ರೀಯಾ ಬೆಳ್ಳಿಯಪ್ಪ ಅವರು ಕಥೆ ಹೆಣೆದಿದ್ದಾರೆ. ಆದರೆ ಚಿತ್ರದ ಪ್ರೊಮೋಷನ್ ಗಳು ಹೇಳುವ ಪ್ರಕಾರ 'ರಿಂಗ್ ರೋಡ್', ಈ ಕೊಲೆಯ ಹಿಂದಿರುವ ಪರಮ ರಹಸ್ಯವನ್ನು ಬಹಿರಂಗ ಪಡಿಸುವ ಕಥೆಯೇ ಈ ಸಿನಿಮಾವಾಗಿದೆ.[ಶುಭ ಅನ್ನಲ್ಲ, ಸುಮ ಇಲ್ಲ.! ಏನಿದ್ರು 'ರಿಂಗ್ ರೋಡ್' ಮಾತ್ರ ]


duniya vijay

'ನೋಡಿದ್ದು ಸುಳ್ಳಾಗಬಹುದು, ಹೇಳಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ಕೆಲವು ಸತ್ಯಗಳು, ಸುಳ್ಳಾಗೇ ಉಳಿದು ಬಿಡಬಹುದು'. ಇದು ಚಿತ್ರದ ಟ್ಯಾಗ್ ಲೈನ್ ಆಗಿದ್ದು, ಇದೆಲ್ಲವನ್ನು ನೋಡುತ್ತಿದ್ದರೆ ಕೊಲೆಯ ಹಿಂದಿರುವ ಕೆಲವೊಂದು ಮಿಸ್ಟರಿಗಳನ್ನು ಈ ಸಿನಿಮಾ ಹೇಳ ಹೊರಟಿದೆ ಅಂತ ನಮಗನ್ನಿಸುತ್ತಿದೆ.[ಟೈಟಲ್ ಟ್ರಬಲ್ ನಲ್ಲಿ ಮತ್ತೆ 'ರಿಂಗ್ ರೋಡ್' ಸುಮ ]


ಈ ಮೊದಲು 'ರಿಂಗ್ ರೋಡ್ ಶುಭಾ' ಆ ನಂತರ 'ರಿಂಗ್ ರೋಡ್' ಸುಮಾ', ಹೀಗೆ ಟೈಟಲ್ ವಿವಾದದಿಂದ ಈ ಚಿತ್ರ ಸಖತ್ ಸೌಂಡ್ ಮಾಡಿದ್ದರಿಂದ ಬಿಡುಗಡೆಯಾಗಲು ಹಿಂದೆ ಮುಂದೆ ನೋಡುತ್ತಿತ್ತು. ಇದೀಗ ಎಲ್ಲಾ ಸಮಸ್ಯೆಗಳು ಬಗೆಹರಿದಿರುವುದರಿಂದ ಕೇವಲ 'ರಿಂಗ್ ರೋಡ್' ಎನ್ನುವ ಟೈಟಲ್ ಇಟ್ಟುಕೊಂಡು ಇದೇ ಅಕ್ಟೋಬರ್ 22 ರಂದು ಎಲ್ಲೆಡೆ ಭರ್ಜರಿಯಾಗಿ ಚಿತ್ರ ತೆರೆ ಕಾಣುತ್ತಿದೆ.


duniya vijay

ಇನ್ನು ವಿಶೇಷ ಪಾತ್ರದಲ್ಲಿ ದುನಿಯಾ ವಿಜಿ ಹಾಗೂ ನಿಖಿತಾ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಯುವ ನಟಿ ಖುಷಿ ನಟಿಸಿದ್ದು, ಸಂಜನಾ, ನೀತು ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

English summary
Kannada Movie 'Ring Road' is inspired by a real murder. But the film's promotion says they are revealing the reality behind the murder. 'Ring Road' feature Kannada actor Duniya Vijay, Kannada Actress Nikita, Kannada Actress Khushie in the lead role. The movie is releasing on October 22nd, directed by Priya Belliyappa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada