»   » ಸೆನ್ಸಾರ್ ಮುಗಿಸಿದ 'ರೋಗ್' ತೆರೆಗೆ ಬರಲು ಸಿದ್ದ!

ಸೆನ್ಸಾರ್ ಮುಗಿಸಿದ 'ರೋಗ್' ತೆರೆಗೆ ಬರಲು ಸಿದ್ದ!

Posted By:
Subscribe to Filmibeat Kannada

ಪೂರಿ ಜಗನ್ನಾಥ್ ಹಲವು ವರ್ಷಗಳ ನಂತರ ಕನ್ನಡದಲ್ಲಿ ನಿರ್ದೇಶನ ಮಾಡುತ್ತಿರುವ ಚಿತ್ರ 'ರೋಗ್' ಇತ್ತೀಚೆಗಷ್ಟೆ ಸೆನ್ಸಾರ್ ಮುಗಿಸಿದೆ. ಚಿತ್ರವನ್ನ ವೀಕ್ಷಸಿದ ಸೆನ್ಸಾರ್ ಮಂಡಳಿ 'ರೋಗ್' ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ.

ಟ್ರೈಲರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಹುಟ್ಟಿಸಿರುವ 'ರೋಗ್', ಏಕಕಾಲದಲ್ಲಿ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಮೂಡಿಬರುತ್ತಿದೆ. ಸಿ.ಆರ್.ಮನೋಹರ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಇಶಾನ್ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಪರಿಚಯವಾಗುತ್ತಿದ್ದಾರೆ.[ಖಡಕ್ ಹುಡುಗನ ಕಾದಲ್ ಕಥೆಯ 'ರೋಗ್' ಟ್ರೈಲರ್ ಔಟ್]

Kannada Movie Rogue Get U/A certificate

ಇಶಾನ್ ಗೆ ಚಿತ್ರದಲ್ಲಿ ಮನ್ನಾರಾ ಮತ್ತು ಏಂಜೆಲಾ ಜೋಡಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ 'ರೋಗ್' ಚಿತ್ರದ ಕನ್ನಡ ವರ್ಷನ್ ನಲ್ಲಿ ಸಾಧು ಕೋಕಿಲ, ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.['ರೋಗ್' ಚಿತ್ರದ ಮೂಲಕ ಕನ್ನಡಕ್ಕೆ ಪರಭಾಷಾ ನಟಿಯರ ಪದಾರ್ಪಣೆ!]

Kannada Movie Rogue Get U/A certificate

ಸುನಿಲ್ ಕಶ್ಯಪ್ ಸಂಗೀತ ಸಂಯೋಜನೆ, ಮುಕೇಶ್ ಜಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸದ್ಯ ಯಶಸ್ವಿಯಾಗಿ ಸೆನ್ಸಾರ್ ಮುಗಿಸಿರುವ 'ರೋಗ್' ಇದೇ ತಿಂಗಳಾಂತ್ಯಕ್ಕೆ ತೆರೆಗೆ ಬರುವ ಯೋಚನೆಯಲ್ಲಿದೆ.

English summary
CR Manohar produced movie Rogue has been censored with U/A certificate and will be releasing in March end.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada