»   » ಚಿರು, ರಾಧಿಕಾ 'ರುದ್ರ ತಾಂಡವ' ಭರ್ಜರಿ ಕ್ಲೈಮಾಕ್ಸ್

ಚಿರು, ರಾಧಿಕಾ 'ರುದ್ರ ತಾಂಡವ' ಭರ್ಜರಿ ಕ್ಲೈಮಾಕ್ಸ್

Posted By:
Subscribe to Filmibeat Kannada

ಗುರು ದೇಶ್ ಪಾಂಡೆ ಆಕ್ಷನ್ ಕಟ್ ಹೇಳುತ್ತಿರುವ 'ರುದ್ರ ತಾಂಡವ' ಚಿತ್ರಕ್ಕೆ ಭರ್ಜರಿ ಕ್ಲೈಮಾಕ್ಸ್ ಸನ್ನಿವೇಶವನ್ನು ಎಂಟು ದಿನಗಳಿಂದ "ಗಾಳಿ, ನೀರು, ಬೆಂಕಿ" ಸಂಗಮದೊಂದಿಗೆ ತಾವರೆಕೆರೆ ಬಳಿ ಇರುವ ಭೂತಬಂಗಲೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ.

ಅದೊಂದು ವಿಶೇಷ ಬಗೆಯ ಚಿತ್ರೀಕರಣ. ಹಲವಾರು ಕ್ಯಾಮೆರಾಗಳು, ನೂರಾರು ಸಹ ಕಲಾವಿದರು, ಬಹಳಷ್ಟು ಪರಿಕರಗಳು ಉಪಯೋಗ ಮಾಡಲಾದ ಚಿತ್ರೀಕರಣದಲ್ಲಿ ಮಾಸ್ ಮಾದ ಅವರ ಸಾಹಸ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ನಾಯಕ ಚಿರಂಜೀವಿ ಸರ್ಜಾ, ಚಿತ್ರದ ದ್ವಿತೀಯ ನಾಯಕಿ ಶ್ರುತಿರಾಜ್, ಹಲವಾರು ಸಾಹಸ ಪಟುಗಳು ಭಾಗವಹಿಸಿದ್ದರು.

Kannada movie Rudra Tandava in Climax

ನಿರ್ದೇಶಕ ಗುರು ದೇಶ್ ಪಾಂಡೆ ಅವರಿಗೆ ಚಿತ್ರದ ಹೆಸರಿಗೆ ತಕ್ಕಂತೆ ಇಂತಹದೊಂದು ಭರ್ಜರಿ ದೃಶ್ಯ ಬೇಕಿತ್ತು. ಅದನ್ನು ವಿಶೇಷ ಆಸಕ್ತಿಯಿಂದ ಚಿತ್ರೀಕರಿಸಿಕೊಳ್ಳುತ್ತಿದ್ದಾರೆ. 'ರುದ್ರ ತಾಂಡವ' ಚಿತ್ರಕ್ಕೆ ನಾಯಕ ಚಿರಂಜೀವಿ ಸರ್ಜಾ ವಿಶೇಷವಾಗಿ ತಯಾರಾಗಿದ್ದಾರೆ.

ಚಿತ್ರದ ಪಾತ್ರವರ್ಗದಲ್ಲಿ ಡಾಕ್ಟರ್ ಗಿರೀಶ್ ಕಾರ್ನಾಡ್, ಮಿತ್ರ, ಕುಮಾರ್ ಗೋವಿಂದ್, ರವಿಶಂಕರ್, ವಸಿಷ್ಠ, ಸುರೇಶ್ ಮಂಗಳೂರು, ನಾಯಕಿಯಾಗಿ
ರಾಧಿಕಾ ಕುಮಾರಸ್ವಾಮಿ, ಶ್ರುತಿರಾಜ್ ಇದ್ದಾರೆ.

ಜಗದೀಶ್ ವಾಲಿ ಅವರ ಛಾಯಾಗ್ರಹಣ, ವಿ ಹರಿಕೃಷ್ಣ ಅವರ ಸಂಗೀತ ಈ ಚಿತ್ರಕ್ಕೆ ಇದೆ. ಇತ್ತೀಚಿಗೆ ವಿಧಾನಪರಿಷತ್ತಿಗೆ ಆಯ್ಕೆಯಾದ ಶರವಣ ಹಾಗೂ ವಿನೋದ್ ಅವರು ಈ ಚಿತ್ರದ ನಿರ್ಮಾಪಕರುಗಳು. (ಒನ್ಇಂಡಿಯಾ ಕನ್ನಡ)

English summary
Chiranjeevi Sarja and Radhika Kumaraswamy lead 'Rudra Tanda' shoot at brisk progress in Bangalore. Recently the climax sequence picturised in Tavarekere bungalow.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada