For Quick Alerts
  ALLOW NOTIFICATIONS  
  For Daily Alerts

  ಸೆನ್ಸಾರ್ ನಲ್ಲಿ ಕ್ಲೀನ್ ಚಿಟ್ ಪಡೆದು ರನ್ ಮಾಡಲು ತಯಾರಾದ 'ಆಂಟನಿ'

  By Suneetha
  |

  ವಿನಯ್ ರಾಜ್ ಕುಮಾರ್ ಅಭಿಮಾನಿಗಳು ಈಗಿನಿಂದಲೇ ದಿನ ಲೆಕ್ಕ ಮಾಡಲು ಶುರು ಹಚ್ಚಿಕೊಂಡಿದ್ದಾರೆ. ಇದೇ ಶುಕ್ರವಾರ (ಜುಲೈ 8) ದಂದು 'ರನ್ ಆಂಟನಿ' ತೆರೆ ಕಾಣುತ್ತಿದೆ. ಎರಡನೇ ಸಿನಿಮಾದ ಮೇಲೆ ಎಲ್ಲರೂ ಬಹಳ ನಿರೀಕ್ಷೆ ಇಟ್ಟುಕೊಂಡಿರುವುದರಿಂದ ಸಹಜವಾಗಿ ವಿನಯ್ ರಾಜ್ ಕುಮಾರ್ ಅವರು ಕೂಡ ಕೊಂಚ ಜಾಸ್ತಿ ಎಕ್ಸೈಟ್ ಆಗಿದ್ದಾರೆ.

  ಇದೀಗ ಸೆನ್ಸಾರ್ ಮಂಡಳಿ ಕೂಡ ಚಿತ್ರಕ್ಕೆ ಯಾವುದೇ ಕತ್ತರಿ ಪ್ರಯೋಗ ಮಾಡದೇ 'ಯು' ಪ್ರಮಾಣ ಪತ್ರ ನೀಡುವ ಮೂಲಕ ಚಿತ್ರ ಬಿಡುಗಡೆ ಮಾಡಲು ಅನುಮತಿ ನೀಡಿದೆ. ವಿಶೇಷ ಅಂದ್ರೆ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಯಾವುದೇ ಕಟ್ಸ್ ಇಲ್ಲದೇ ಕ್ಲೀನ್ ಚಿಟ್ ಪಡೆದು ತೆರೆಗೆ ಅಪ್ಪಳಿಸುತ್ತಿದೆ.['ಸುಮ್ಮನೆ' ಹಾಡು ಕೇಳಿ ಹಾಗೆ ಒಮ್ಮೆ ಕಳೆದು ಹೋಗಿ]

  ಈಗಾಗಲೇ ಥಿಯೇಟರ್ ಲಿಸ್ಟ್ ಕೂಡ ಬಿಡುಗಡೆ ಆಗಿದ್ದು, ಇದೇ ಶುಕ್ರವಾರ ಬೆಂಗಳೂರಿನ ಮುಖ್ಯ ಚಿತ್ರಮಂದಿರ ಕಪಾಲಿ ಸೇರಿದಂತೆ ಇಡೀ ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ 'ರನ್ ಆಂಟನಿ' ಓಟ ಆರಂಭವಾಗಲಿದೆ.

  ಅಂದಹಾಗೆ ರನ್ ಆಂಟನಿ ಚಿತ್ರತಂಡದವರು ವಿಭಿನ್ನವಾಗಿ ಚಿತ್ರದ ಪ್ರಮೋಷನ್ ಮಾಡಿದ್ದರು. ಈ ಮೊದಲು 'ಐರನ್' ಎಂಬ ವಿಭಿನ್ನ ಪ್ರೊಮೋಷನ್ ಮಾಡಿ ಸಾಕಷ್ಟು ಸುದ್ದಿ ಮಾಡಿದ್ದರು. ಈ ಪ್ರೊಮೋಷನ್ ನಲ್ಲಿ ಸ್ಯಾಂಡಲ್ ವುಡ್ ನ ನಟ-ನಟಿಯರು ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.[ಜಗ್ಗೇಶ್, ಕಿಚ್ಚ, ಶಿವಣ್ಣಗೆ ಯಾರನ್ನ ಕಂಡ್ರೆ 'ಆಗಲ್ಲಾಂತ' ನಿಮಗ್ಗೊತ್ತಾ?]

  ತದನಂತರ 'ರನ್ ಆಂಟನಿ ಮ್ಯಾರಥಾನ್' ಅಂತ ಇಡೀ ಚಿತ್ರತಂಡದವರು ಹಾಗೂ ನಟ ಕಮ್ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಮತ್ತು ಮಂಗಳಾ ರಾಘವೇಂದ್ರ ರಾಜ್ ಕುಮಾರ್ ಅವರು ಕರ್ನಾಟಕದ ಮೂಲೆ-ಮೂಲೆಗೆ ಸಂಚರಿಸಿ ಚಿತ್ರದ ಪ್ರಮೋಷನ್ ಮಾಡಿದ್ದರು.[ಸ್ಯಾಂಡಲ್ ವುಡ್ ದಿಗ್ಗಜರ ಸಮಾಗಮದಲ್ಲಿ ಡ್ಯಾನ್ಸ್ ಡ್ಯಾನ್ಸ್]

  ಒಟ್ನಲ್ಲಿ ಹಲವಾರು ವಿಶೇಷತೆಗಳನ್ನೊಳಗೊಂಡ 'ರನ್ ಆಂಟನಿ' ಚಿತ್ರದ ಮತ್ತೊಂದು ಸುಂದರವಾದ ರೋಮ್ಯಾಂಟಿಕ್ ಹಾಡು ಬಿಡುಗಡೆ ಆಗಿದೆ. ನಮ್ಮ ಕರ್ನಾಟಕದ ಬೀದರ್ ಕೋಟೆಗಳಲ್ಲಿ ಚಿತ್ರೀಕರಣ ಮಾಡಿದ್ದು, ವಿನಯ್ ರಾಜ್ ಕುಮಾರ್ ಮತ್ತು ನಟಿ ರುಕ್ಸಾರ್ ಕಾಣಿಸಿಕೊಂಡಿರುವ 'ಕಣ್ಣ ಕರೆಯೂ ಬಂದಿದೆ' ಎಂಬ ಮುದ್ದಾದ ವಿಡಿಯೋ ಸಾಂಗ್ ನೋಡ್ಕೊಂಡು ಎಂಜಾಯ್ ಮಾಡಿ.

  English summary
  Kannada Movie 'Run Antony' all set to releasing on July 8th. And now the movie gets 'U' certificate from the Censor Board. 'Run Antony' features Kannada actor Vinay Rajkumar, Actress Rukhsar, Actress Sushmitha in the lead role. The movie is directed by Raghu Shastry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X