»   » 'ಕಬೀರ' ಥಿಯೇಟರ್ ಗೆ ಬರೋ ದಿನಾಂಕ ಫಿಕ್ಸ್ ಆಯ್ತು.!

'ಕಬೀರ' ಥಿಯೇಟರ್ ಗೆ ಬರೋ ದಿನಾಂಕ ಫಿಕ್ಸ್ ಆಯ್ತು.!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟಿ ಸನುಷಾ ಕಾಣಿಸಿಕೊಂಡಿರುವ ಐತಿಹಾಸಿಕ ಕಥೆಯಾಧರಿತ 'ಸಂತೆಯಲ್ಲಿ ನಿಂತ ಕಬೀರ' ತೆರೆಗೆ ಬರಲು ಸಜ್ಜಾಗಿದ್ದು, ಯಾವಾಗ ಬಿಡುಗಡೆ ಆಗುತ್ತೆ ಅಂತ ಶಿವಣ್ಣ ಅವರ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದರು.

ಇದೀಗ ಚಿತ್ರ ಬಿಡುಗಡೆಗೆ ಸರಿಯಾದ ಮುಹೂರ್ತ ಕೂಡಿಬಂದಿದ್ದು, ಇದೇ ತಿಂಗಳ ಕೊನೆಯಲ್ಲಿ ಅಂದರೆ ಜುಲೈ 29ಕ್ಕೆ ಗ್ರ್ಯಾಂಡ್ ಆಗಿ ಇಡೀ ಕರ್ನಾಟಕದಾದ್ಯಂತ ಚಿತ್ರ ತೆರೆಗೆ ಬರಲಿದೆ.[ರೋಚಕ, ಕೌತುಕ, ಮನಮೋಹಕ 'ಸಂತೆಯಲ್ಲಿ ನಿಂತ ಕಬೀರ' ಟ್ರೈಲರ್]


Kannada Movie 'Santheyalli Nintha Kabira' all set to releasing on July 29th

ನಿರ್ದೇಶಕ ಇಂದ್ರಬಾಬು ಅವರು ಆಕ್ಷನ್-ಕಟ್ ಹೇಳಿರುವ 'ಸಂತೆಯಲ್ಲಿ ನಿಂತ ಕಬೀರ' ಚಿತ್ರದಲ್ಲಿ ಸಂತ ಕಬೀರರ ದೋಹಾಗಳನ್ನು ಕೂಡ ಬಳಸಿಕೊಳ್ಳಲಾಗಿದೆ. ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು, ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.


'ಶಿವ ಮೆಚ್ಚಿದ ಕಣ್ಣಪ್ಪ' ಚಿತ್ರದ ನಂತರ ಮತ್ತೆ ಸೆಂಚುರಿ ಸ್ಟಾರ್ ಶಿವಣ್ಣ ಅವರು ವಿಭಿನ್ನವಾಗಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳನ್ನು ರಂಜಿಸಲಿದ್ದಾರೆ. 'ಸಂತೆಯಲ್ಲಿ ನಿಂತ ಕಬೀರ' ಚಿತ್ರದಲ್ಲಿ ಇವರಿಗೆ ತಮಿಳು ನಟ ಶರತ್ ಕುಮಾರ್, ಅವಿನಾಶ್, ದತ್ತಣ್ಣ, ಅನಂತ್ ನಾಗ್ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.[ಆಡಿಯೋ ವಿಮರ್ಶೆ: 'ಸಂತೆಯಲ್ಲಿ ನಿಂತ ಕಬೀರ' ಹಾಡುಗಳು ಸೂಪರ್]


Kannada Movie 'Santheyalli Nintha Kabira' all set to releasing on July 29th

ಭೀಷ್ಮ ಸಹಾನಿ ಅವರ ಮೂಲ ಹಿಂದಿ ನಾಟಕ 'ಕಬೀರ್ ಖಡಾ ಬಝಾರ್ ಮೇ', ಇದನ್ನು ಕನ್ನಡಕ್ಕೆ ಗೋಪಾಲ ವಾಜಪೇಯಿ ಅವರು 'ಸಂತ್ಯಾಗ ನಿಂತಾನ ಕಬೀರ' ಎಂದು ಅನುವಾದ ಮಾಡಿದ್ದರು. ಈ ನಾಟಕ ಇದೀಗ ಸಿನಿಮಾ ಆಗಿ ಜುಲೈ 29 ರಂದು ತೆರೆ ಮೇಲೆ ರಾರಾಜಿಸಲಿದೆ.[ಸೆನ್ಸಾರ್ ಪರೀಕ್ಷೆ ಎದುರಿಸಲು ತಯಾರಾದ 'ಸಂತೆಯಲ್ಲಿ ನಿಂತ ಕಬೀರ']

English summary
Kannada Actor Shiva Rajkumar, Actress Sanusha starrer Kannada Movie 'Santheyalli Nintha Kabira' all set to releasing on July 29th. The movie is directed by Indra Babu of 'Kabaddi' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada