'ಸರ್ವಸ್ವ' ಚಿತ್ರವನ್ನ ಯಾಕೆ ನೋಡ್ಬೇಕು? ಇಲ್ಲಿದೆ ಚಿತ್ರದ ವಿಶೇಷತೆಗಳು.!
''ಲಕ್ಷ್ಯ ಮತ್ತು ಪ್ರೀತಿಯ ನಡುವಿನ ರೋಮಾಂಚಕ ಕದನ. ರಹಸ್ಯಭರಿತ ಪಾತ್ರಗಳು. ಹಿತವಾದ ಸಂಗೀತ. ಬೆರಗುಗೊಳಿಸುವ ಧಕ್ಷಿಣ ಕರಾವಳಿಯ ದೃಶ್ಯಗಳು''. ಈ ಎಲ್ಲ ಅಂಶಗಳನ್ನ ಒಂದೇ ಚಿತ್ರದಲ್ಲಿ ನೋಡಬೇಕೆಂದರೇ ಈ ವಾರ ಬಿಡುಗಡೆಯಾಗುತ್ತಿರುವ 'ಸರ್ವಸ್ವ' ಚಿತ್ರವನ್ನ ನೋಡಿ.
''ಇದೊಂದು ಕೌಟುಂಬಿಕ ಸಿನಿಮಾ. ಜೀವನದಲ್ಲಿ ಸ್ನೇಹ, ಪ್ರೀತಿಯೇ ಸರ್ವಸ್ವ''. ಈ ಅಂಶವನ್ನಿಟ್ಟು ನಿರ್ದೇಶಕ ಶ್ರೇಸಯ್ ಕಬಾಡಿ 'ಸರ್ವಸ್ವ' ಚಿತ್ರವನ್ನ ತೆರೆ ಮೇಲೆ ತಂದಿದ್ದಾರೆ.

ಇವರೆಗೂ ವಿಲನ್ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ನಟ ತಿಲಕ್ ಈ ಚಿತ್ರದ ನಾಯಕ. ವಿಭಿನ್ನ ಶೇಡ್ ನಲ್ಲಿ ಅಭಿನಯಿಸಿರುವ ತಿಲಕ್ ಈ ಚಿತ್ರದ ಸ್ಟಾರ್ ಕಲಾವಿದ. ತಿಲಕ್ ಜೊತೆಯಲ್ಲಿ ಚೇತನ್ ಎಂಬ ಹೊಸ ಹುಡುಗ ಮತ್ತೊಬ್ಬ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಇನ್ನು ಚಿತ್ರದಲ್ಲಿ ಇಬ್ಬರು ನಾಯಕಿರಿದ್ದು, ರೇಣುಶಾ ಮತ್ತು ಸಾತ್ವಿಕಾ ಕಾಣಿಸಿಕೊಂಡಿದ್ದಾರೆ.
ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ ಸಂಗೀತ ಸಂಯೋಜನೆ ಮಾಡಿದ್ದು, ಚಿತ್ರದ ಹಾಡುಗಳು ಗಮನ ಸೆಳೆದಿದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆ. ಅದರಲ್ಲೂ ಚಿತ್ರದ ಐಟಂ ಸಾಂಗ್ ವೊಂದು ವಿಶೇಷ ದಾಖಲೆ ಮಾಡಿದೆ.

ಈ ಚಿತ್ರದಲ್ಲಿ ಸಿನಿಮಾದೊಳಗೊಂದು ಸಿನಿಮಾ ನಡೆಯಲಿದ್ದು, ಅಲ್ಲೊಂದು ಹಾಡು ಇದೆ. ಅದಕ್ಕಾಗಿ ರಾಕ್‌ಲೈನ್ ಸ್ಟ್ಟುಡಿಯೋದಲ್ಲಿ ನೂರು ಅಡಿಯ ಬ್ಯಾಕ್ ಡ್ರಾಪ್ ಕ್ರಿಯೇಟ್ ಮಾಡಿ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಈ ರೀತಿ ಸುಮಾರು 100 ಅಡಿಗೂ ಹೆಚ್ಚಿನ ಬ್ಯಾಕ್ ಗ್ರೌಂಡ್ ಹಾಕಿ ಚಿತ್ರೀಕರಣ ಮಾಡಿದ ಮೊದಲ ಕನ್ನಡ ಚಿತ್ರ ಎಂಬ ಖ್ಯಾತಿಗೂ 'ಸರ್ವಸ್ವ' ಒಳಗಾಗಿದೆ. ಈ ಹಾಡಿನಲ್ಲಿ ಮರಾಠಿಯ ಡಾನ್ಸರ್ ಆಗಿರುವ ಸಿಯಾ ಪಾಟೀಲ್ ನೃತ್ಯ ಮಾಡಿದ್ದಾರೆ.

ವೆನಿಜುವೆಲಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದ ಪ್ರದರ್ಶನಕ್ಕೆ ಆಯ್ಕೆಯಾಗಿರುವ ಐದು ಸಿನಿಮಾಗಳ ಪೈಕಿ 'ಸರ್ವಸ್ವ' ಕೂಡ ಒಂದಾಗಿದೆ. ಭೂಪಿಂದರ್ ಪಾಲ್ ಸಿಂಗ್ ರೈನಾ ಅವರ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ವಿಮಲ್ ಮತ್ತು ವಾಮ್ದೇವ್ ಬಂಡವಾಳ ಹಾಕಿದ್ದಾರೆ. ಅಕ್ಟೋಬರ್ 27ರಂದು ಈ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.


Click it and Unblock the Notifications











