»   » ಉಪೇಂದ್ರ ಬರ್ತಡೆಗೆ 'ಶ್..!' ಉಡುಗೊರೆ

ಉಪೇಂದ್ರ ಬರ್ತಡೆಗೆ 'ಶ್..!' ಉಡುಗೊರೆ

Posted By:
Subscribe to Filmibeat Kannada

1993, ಡಿಸೆಂಬರ್ 3 ರಂದು ತೆರೆ ಕಂಡ ಕುಮಾರ್ ಗೋವಿಂದ್, ದಯಾನಂದ, ಕಾಶೀನಾಥ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಹಾರರ್ ಕಮ್ ಥ್ರಿಲ್ಲರ್ ಸಿನಿಮಾ 'ಶ್' ಇದೀಗ ರೀ-ರಿಲೀಸ್ ಆಗುತ್ತಿದೆ.

22 ವರ್ಷಗಳ ನಂತರ ನಟ ಕಮ್ ನಿರ್ಮಾಪಕ ಕುಮಾರ್ ಗೋವಿಂದ್ 'ಶ್' ಚಿತ್ರವನ್ನ ರೀ-ರಿಲೀಸ್ ಮಾಡುವ ಪ್ಲಾನ್ ಮಾಡಿದ್ದಾರೆ. ಇದೀಗ ಗಾಂಧಿನಗರದ ಲೇಟೆಸ್ಟ್ ಮಾಹಿತಿ ಪ್ರಕಾರ 'ಶ್' ಚಿತ್ರವನ್ನು ಡಿಜಿಟಲೀಕರಣ ಮಾಡಿ ಪ್ರದರ್ಶನ ಮಾಡಲಾಗುವುದು. [ದಿನಪತ್ರಿಕೆ ಸಂಪಾದಕರನ್ನೇ ಕುಣಿಸಿದ 'ಉಪ್ಪಿ-2']

ಚಿತ್ರದಲ್ಲಿ ಸ್ವಲ್ಪ ಮಟ್ಟದ ಬದಲಾವಣೆ ಇರುವುದರಿಂದ ಸೆನ್ಸಾರ್ ಕೂಡ ಮಾಡಲಾಗುತ್ತಿದೆಯಂತೆ. ಎಲ್ಲಾ ಆದ ನಂತರ ಸದ್ಯದಲ್ಲೇ ಅಂದ್ರೆ, ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ 'ಶ್' ವಿನೂತನ ರೀತಿಯಲ್ಲಿ ತೆರೆಗೆ ಬರಲಿದೆ.

Kannada Movie 'Shh' to Re-Release for Upendra's Birthday!

ಹೌದು, ಸೆಪ್ಟೆಂಬರ್ ನಲ್ಲಿ ನಟ, ನಿರ್ದೇಶಕ ಉಪೇಂದ್ರ ಅವರ 48 ನೇ ಹುಟ್ಟುಹಬ್ಬ. ಅಂದು 'ಶ್' ಚಿತ್ರದ ರೀ-ರಿಲೀಸ್ ಮಾಡಲಾಗುತ್ತದೆ. ಮಾತ್ರವಲ್ಲದೆ ಕುಮಾರ್ ಗೋವಿಂದ್ 'ಶ್' ಚಿತ್ರವನ್ನು ಹಿಂದಿ, ತಮಿಳು, ತೆಲುಗು ಭಾಷೆಗಳಿಗೂ ಡಬ್ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ. ['ಉಪ್ಪಿ-2' ಆಡಿಯೋ ರಿಲೀಸ್ ಮಾಡಿದ್ದು ಯಾರು?]

ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಹವಾ ಎಬ್ಬಿಸುತ್ತಿರುವ ಉಪೇಂದ್ರ ನಿರ್ದೇಶಿಸಿ, ನಾಯಕನಾಗಿ ಕಾಣಿಸಿಕೊಂಡಿರುವ 'ಉಪ್ಪಿ 2' ಚಿತ್ರ ತೆರೆಕಂಡ ನಂತರ 'ಶ್' ಚಿತ್ರ ರೀ-ರಿಲೀಸ್ ಆಗಲಿದೆ. [ರಿಯಲ್ ಸ್ಟಾರ್ ಉಪೇಂದ್ರರ 'ಉಪ್ಪಿ 2' ರಿಲೀಸ್ ಡೇ ಘೋಷಣೆ]

ಅದೇನೇ ಇರಲಿ ಉಪೇಂದ್ರ ಅವರ ಕಟ್ಟಾ ಅಭಿಮಾನಿಗಳಿಗೆ ಈ ಮಾನ್ಸೂನ್ ಗೆ ಡಬಲ್ ಧಮಾಕ ಸಿಗುವುದು ಗ್ಯಾರಂಟಿ. ಒಂದೆಡೆ ಉಪ್ಪಿ ಅಭಿನಯದ 'ಉಪ್ಪಿ 2' ತೆರೆ ಕಾಣುವುದು ಆಗಸ್ಟ್ ನಲ್ಲಾದರೆ, ಇನ್ನೊಂದೆಡೆ ಉಪ್ಪಿ ನಿರ್ದೇಶನದ 'ಶ್' ಚಿತ್ರದ ರೀ-ರಿಲೀಸ್ ಸೆಪ್ಟೆಂಬರ್ ನಲ್ಲಿ. ಅಂತೂ ಇಂತೂ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿದ್ದಾರೆ 'ರಿಯಲ್ ಸ್ಟಾರ್' ಉಪೇಂದ್ರ.

English summary
After 22 years, Kannada Super Hit Horror movie 'Shh' is re-releasing this September. Actor-Producer Kumar Govind has planned to re-release the film on Upendra's birthday. 'Shh' features Kannada Actor Kumar Govind, Kannada actor Kashinath,The movie is directed by Upendra.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X