»   » ಶಿವಣ್ಣನ 'ಶಿವತಾಂಡವ'ಕ್ಕೆ ಬೆಚ್ಚಿ ಬಿದ್ದ ಬಾಕ್ಸಾಫೀಸ್

ಶಿವಣ್ಣನ 'ಶಿವತಾಂಡವ'ಕ್ಕೆ ಬೆಚ್ಚಿ ಬಿದ್ದ ಬಾಕ್ಸಾಫೀಸ್

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ನಟಿ ವೇದಿಕಾ ಅವರು ಕಾಣಿಸಿಕೊಂಡಿದ್ದ ಹಾರರ್ ಕಮ್ ಥ್ರಿಲ್ಲರ್ ಸಿನಿಮಾ 'ಶಿವಲಿಂಗ' ಎಲ್ಲಾ ಕಡೆ ನಾಗಾಲೋಟದಿಂದ ಓಡುತ್ತಿದೆ. ಇಡೀ ಕರ್ನಾಟಕದಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ 'ಶಿವಲಿಂಗ' ಬಾಕ್ಸಾಫೀಸ್ ನಲ್ಲೂ ಶಿವತಾಂಡವವಾಡುತ್ತಿದೆ.

ಹೌದು ಅಂದಾಜು 38 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾದ ಶಿವಣ್ಣನ 'ಶಿವಲಿಂಗ' ಸಿನಿಮಾ ಮೊದಲ ದಿನದ ಕಲೆಕ್ಷನ್ ಸುಮಾರು 8.8 ಕೋಟಿ. 3 ದಿನಗಳಲ್ಲಿ ಅಂದಾಜು 13.7 (ಕೃಪೆ ಶಿವರಾಜ್ ಕುಮಾರ್ ಫ್ಯಾನ್ಸ್) ಕೋಟಿ ರೂಪಾಯಿ ಗಳಿಸಿ, ಬಾಕ್ಸಾಫೀಸ್ ನಲ್ಲಿ ಚಿಂದಿ ಉಡಾಯಿಸಿದರೆ, 4 ದಿನಗಳಲ್ಲಿ ಮಾಡಿದ ಕಲೆಕ್ಷನ್ ಬರೋಬ್ಬರಿ 16.3 ಕೋಟಿ ರೂಪಾಯಿ.['ಶಿವಲಿಂಗ'ದಲ್ಲಿ ರಹೀಂ ಪಾತ್ರ ಮಾಡಿದವರು ಯಾರು ಗೊತ್ತಾ? ]


ನಿರ್ದೇಶಕ ಪಿ.ವಾಸು ಆಕ್ಷನ್-ಕಟ್ ಹೇಳಿದ್ದ ಈ ಸಿನಿಮಾದಲ್ಲಿ ಶಿವಣ್ಣ ಅವರು ಸಿ.ಐ.ಡಿ ಪಾತ್ರದಲ್ಲಿ ಮಿಂಚಿದರೆ, ನಿರ್ದೇಶಕ ವಾಸು ಅವರ ಮಗ ನಟ ಶಕ್ತಿ ವಾಸುದೇವನ್ ಅವರು ಪ್ರಮುಖ ಪಾತ್ರ ವಹಿಸಿ ಪ್ರೇಕ್ಷಕರನ್ನು ಥ್ರಿಲ್ಲಾಗಿಸಿದ್ದು ಚಿತ್ರದ ವಿಶೇಷ.


ಒಂದರ ಹಿಂದೆ ಒಂದು ಅಂತ ಎರಡು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ಕೊಟ್ಟ ಶಿವಣ್ಣ ಅವರು ಇದೀಗ 'ಶಿವಲಿಂಗ' ಚಿತ್ರದ ಮೂಲಕ ಕೂಡ ಹೊಸ ದಾಖಲೆ ಬರೆಯಲು ಸಿದ್ಧರಾಗಿದ್ದಾರೆ.[ಅಂದು ಸೌಂದರ್ಯ; ಇಂದು ವೇದಿಕಾ.! 'ಶಿವಲಿಂಗ' ಅಚ್ಚರಿ.!]


ಇನ್ನು 'ಶಿವಲಿಂಗ' ಸಿನಿಮಾ ಬರೀ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ ಬೇರೆ ರಾಜ್ಯದಲ್ಲೂ ಸದ್ದು ಮಾಡುತ್ತಿದ್ದು, ಎಲ್ಲೆಲ್ಲಿ ಶಿವಣ್ಣ ಶಿವತಾಂಡವ ಆಡುತ್ತಿದ್ದಾರೆ ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..


ಮೂರು ಬ್ಲಾಕ್ ಬಸ್ಟರ್ ಹಿಟ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇತ್ತೀಚೆಗೆ ಅಭಿನಯಿಸಿದ್ದ 'ವಜ್ರಕಾಯ', 'ಕಿಲ್ಲಿಂಗ್ ವೀರಪ್ಪನ್' ಮತ್ತು ಇದೀಗ 'ಶಿವಲಿಂಗ' ಸಿನಿಮಾ ಮೂರು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಆಗಿದ್ದು, ಈ ಬಾರಿ ಶಿವಣ್ಣ ಅವರು ಹೊಸ ಇತಿಹಾಸ ಸೃಷ್ಟಿಸಿದರೂ ಯಾವುದೇ ಅಚ್ಚರಿ ಇಲ್ಲ.['ಶಿವಲಿಂಗ' ವಿಮರ್ಶೆ; ಪಿ.ವಾಸು ನಿರ್ದೇಶನದ ಮತ್ತೊಂದು 'ಆಪ್ತಮಿತ್ರ' ]


ಕೊಚ್ಚಿ ಮತ್ತು ಕೇರಳದಲ್ಲಿ ಹೌಸ್ ಫುಲ್

ಪಕ್ಕದ ರಾಜ್ಯ ಕೇರಳದಲ್ಲಿ ಶಿವರಾಜ್ ಕುಮಾರ್ ಮತ್ತು ದಕ್ಷಿಣ ಭಾರತದ ನಟಿ ವೇದಿಕಾ ಅಭಿನಯಿಸಿರುವ 'ಶಿವಲಿಂಗ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರಮಂದಿರಗಳು ಸೇರಿದಂತೆ ಮಲ್ಟಿಪ್ಲೆಕ್ಸ್ ಗಳೂ ಹೌಸ್ ಫುಲ್ ಬೋರ್ಡ್ ನೇತು ಹಾಕಿಕೊಂಡಿವೆ. ಎಂದು ನಟಿ ವೇದಿಕಾ ಟ್ವೀಟ್ ಮಾಡಿದ್ದಾರೆ.


ಚೆನ್ನೈನಲ್ಲೂ ಶಿವತಾಂಡವ

ಚೆನ್ನೈನ ಮಾಯಾಜಾಲ ಚಿತ್ರಮಂದಿರದಲ್ಲಿ ಶಿವಲಿಂಗ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಅಲ್ಲೂ ಕೂಡ ಶಿವಣ್ಣನ ಅಬ್ಬರ ಜೋರಾಗೇ ಇದೆ. ಮಾಯಾಜಾಲ ಚಿತ್ರಮಂದಿರದ ಮುಂಭಾಗದಲ್ಲಿ 'ಶಿವಲಿಂಗ' ಚಿತ್ರದ ಪೋಸ್ಟರ್ ಹಾಕಿದ ಅಭಿಮಾನಿಗಳು


ನಾಗವಲ್ಲಿಯಾದ ವೇದಿಕಾ

ಸದಾ ಚೆಲ್ಲು ಚೆಲ್ಲಾಗಿ ಪ್ರೀತಿಸುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ವೇದಿಕಾ ಅವರು ಈ ಚಿತ್ರದಲ್ಲಿ ಸಖತ್ತಾಗಿರೋ ಅಭಿನಯ ನೀಡಿದ್ದು, ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ವೇದಿಕಾ ಅವರ ಈ ಭೀಭತ್ಸ ರೂಪಕ್ಕೆ ಅತ್ಯಂತ ಹೆಚ್ಚು ಚಪ್ಪಾಳೆ ಮತ್ತು ವಿಶಲ್ ಗಳು ಬಿದ್ದಿವೆ.


ಹೆಚ್ಚು ಬ್ಲ್ಯಾಕ್ ಟಿಕೆಟ್ ಮಾರಾಟವಾಗಿದೆ

ಬ್ಲ್ಯಾಕ್ ಟಿಕೆಟ್ ಮೂಲಕ ಶಿವರಾಜ್ ಕುಮಾರ್ ಅವರ 'ಶಿವಲಿಂಗ' ಚಿತ್ರ ನೋಡಿದ ಅಭಿಮಾನಿಗಳು ಇದ್ದಾರೆ. ಬರೋಬ್ಬರಿ 700 ರೂಪಾಯಿ ಕೊಟ್ಟು ಸಿನಿಮಾ ವೀಕ್ಷಣೆ ಮಾಡಿದ್ದಾರಂತೆ. ಈ ಹಿಂದೆ ಶಿವಣ್ಣ ಅವರ 'ಜೋಗಿ' ಸಿನಿಮಾ ಕೂಡ ಇದೇ ಹವಾ ಸೃಷ್ಟಿ ಮಾಡಿತ್ತು.


ಮಲ್ಟಿಪ್ಲೆಕ್ಸ್ ಶೋ ಲಿಸ್ಟ್

ಸಿನಿಮಾ ಬಿಡುಗಡೆ ಆಗಿ ಹತ್ತತ್ತಿರ ಒಂದು ವಾರ ಆಗುತ್ತಾ ಬಂದರೂ ಕೂಡ ಈಗಲೂ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನಮ್ಮ ರಾಜ್ಯ ಮತ್ತು ಬೇರೆ ರಾಜ್ಯಗಳಲ್ಲಿ ಮಲ್ಲಿಪ್ಲೆಕ್ಸ್ ನಲ್ಲಿ ನಡೆಯುತ್ತಿರುವ ಶೋಗಳ ಲಿಸ್ಟ್ ಇದು.


English summary
Kannada Movie 'Shivalinga' 4 days box office collection report. Kannada Actor Shiva Rajkumar, Actress Vedika, Tamil Actor Sakti in the lead role. The movie is dircted by P.Vasu. The Movie Opens with 8.8 Crore on its 1st Day and near to Collect 16.3 crore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada