»   » 'ಶಿವಲಿಂಗ' ಹೇಗಿದೆ ಟ್ವಿಟ್ಟರ್ ನಲ್ಲಿ ಪ್ರಥಮ ವಿಮರ್ಶೆ

'ಶಿವಲಿಂಗ' ಹೇಗಿದೆ ಟ್ವಿಟ್ಟರ್ ನಲ್ಲಿ ಪ್ರಥಮ ವಿಮರ್ಶೆ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಥ್ರಿಲ್ಲರ್ ನಿರ್ದೇಶಕ ಪಿ.ವಾಸು ಅವರ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ 'ಶಿವಲಿಂಗ' ಸಿನಿಮಾ ಇಂದು (ಫೆಬ್ರವರಿ 12) ಇಡೀ ಕರ್ನಾಟಕದಾದ್ಯಂತ ಭರ್ಜರಿಯಾಗಿ ತೆರೆ ಕಂಡಿದೆ.

ಬೆಂಗಳೂರಿನ ಮುಖ್ಯ ಚಿತ್ರಮಂದಿರ ಸಂತೋಷ್ ಥಿಯೇಟರ್ ನಲ್ಲಿ 'ಶಿವಲಿಂಗ' ಸಿನಿಮಾ ತೆರೆ ಕಂಡಿದ್ದು, ಅಭಿಮಾನಿಗಳು ಸಂತೋಷ್ ಚಿತ್ರಮಂದಿರದ ಎದುರು ಹಬ್ಬದ ವಾತಾವರಣ ಸೃಷ್ಟಿ ಮಾಡಿದ್ದಾರೆ.[ಶಿವಣ್ಣನ 'ಶಿವಲಿಂಗ' ಏಕೆ ನೋಡಬೇಕು ಇಲ್ಲಿದೆ ಟಾಪ್ 5 ಕಾರಣಗಳು]


ಸೆಂಚುರಿ ಸ್ಟಾರ್ ಶಿವಣ್ಣ ಅವರು ಸಂಪ್ರದಾಯ ಬದ್ಧವಾಗಿ ಸಿಲ್ಕ್ ಪಂಚೆ ಉಟ್ಟಿರುವ ಬೃಹತ್ ಕಟೌಟ್ ಗಳಿಗೆ ಶಿವಣ್ಣ ಅವರ ಅಭಿಮಾನಿಗಳು ಹಾಲಿನ ಅಭಿಷೇಕ, ಕುಂಕುಮಾಭಿಷೇಕ ಮುಂತಾದವುಗಳನ್ನು ಮಾಡುವ ಮೂಲಕ ಚಿತ್ರ ಬಿಡುಗಡೆಗೆ ಭರ್ಜರಿ ಓಪನಿಂಗ್ ನೀಡಿದ್ದಾರೆ.


ಇನ್ನು ಬೆಳ್ಳಂಬೆಳಗ್ಗೆ 'ಶಿವಲಿಂಗ' ಚಿತ್ರದ ಶೋ ಆರಂಭವಾಗಿದ್ದು, ಬಳ್ಳಾರಿಯ ಹೊಸಪೇಟೆಯಲ್ಲಿ ಮುಂಜಾನೆ ಚಿತ್ರಮಂದಿರದ ಎದುರು ಜನ ಸಾಗರ ಕಿಕ್ಕಿರಿದು ತುಂಬಿತ್ತು.[ಶಿವಣ್ಣನ 'ಶಿವಲಿಂಗ'ಕ್ಕೂ ತಟ್ಟಿತೇ ಥಿಯೇಟರ್ ಸಮಸ್ಯೆ ಬಿಸಿ]


ಈಗಾಗಲೇ ಫಸ್ಟ್ ಶೋ ನೋಡಿದ ಶಿವಣ್ಣ ಅವರ ಅಭಿಮಾನಿಗಳು ಮತ್ತು ಸಿನಿಪ್ರೀಯರು ಟ್ವಿಟ್ಟರ್ ನಲ್ಲಿ ಮೊದಲ ವಿಮರ್ಶೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶಿವಣ್ಣ ಅವರ 'ಶಿವಲಿಂಗ' ಕ್ರೇಜ್ ಎಲ್ಲೆಡೆ ಹೇಗಿದೆ ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...


ಹೇಗಿದೆ ಶಿವಣ್ಣನ ದರ್ಬಾರ್

ಬಳ್ಳಾರಿಯ ಹೊಸಪೇಟೆಯಲ್ಲಿ ಮುಂಜಾನೆ 5.30 ರ ಸುಮಾರಿಗೆ ಶಿವರಾಜ್ ಕುಮಾರ್ ಅಭಿನಯದ 'ಶಿವಲಿಂಗ' ಸಿನಿಮಾ ಪ್ರದರ್ಶನ ಆರಂಭವಾಗಿದ್ದು, ಬೆಳ್ಳಂಬೆಳಗ್ಗೆ ಚಿತ್ರಮಂದಿರದ ಎದುರು ಜನಸಾಗರ ಹರಿದು ಬಂದಿತ್ತು.[ಅಬ್ಬಾ! ಶಿವಣ್ಣ ಕಟೌಟ್ ಗೆ 1.25 ಲಕ್ಷ ರೂಪಾಯಿ ಮೌಲ್ಯದ ರುದ್ರಾಕ್ಷಿ ಮಾಲೆ]


1.50 ಲಕ್ಷದ ರುದ್ರಾಕ್ಷಿ ಮಾಲೆ

ಶಿವಣ್ಣ ಅವರ 27 ಅಡಿ ಎತ್ತರದ ಬೃಹತ್ ಕಟೌಟ್ ಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಎಲ್ಲಾ ಅಭಿಮಾನಿ ಸಂಘದವರು ಸೇರಿ ಸುಮಾರು 1.50 ಲಕ್ಷ ಮೌಲ್ಯದ ರುದ್ರಾಕ್ಷಿ ಮಾಲೆ ಹಾಕಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಸಂತೋಷ್ ಚಿತ್ರಮಂದಿರದ ಎದುರು ಈ ಬೃಹತ್ ಕಟೌಟ್ ಗೆ ರುದ್ರಾಕ್ಷಿ ಹಾರ ಹಾಕಲಾಗಿದೆ.


ರಂಗೇರಿದ 'ಶಿವಲಿಂಗ'

ಚಿತ್ರದಲ್ಲಿ ಶಿವಣ್ಣ ಅವರ ಫಸ್ಟ್ ಎಂಟ್ರಿ ಪಕ್ಕಾ ಸಂಪ್ರದಾಯ ಬದ್ಧ ಉಡುಗೆ ಸಿಲ್ಕ್ ಪಂಚೆ ಉಟ್ಟಿರುವುದರಿಂದ ಅವರ ಅಭಿಮಾನಿ ಬಳಗದವರು ಕೂಡ ಸಂತೋಷ್ ಚಿತ್ರಮಂದಿರದ ಎದುರು ಸಂಪ್ರದಾಯ ಉಡುಗೆ ಪಂಚೆ, ಶಲ್ಯ ತೊಟ್ಟು ಸಖತ್ ಸ್ಟೈಲಿಷ್ ಆಗಿ ಕಂಗೊಳಿಸುತ್ತಿದ್ದರು.


ಹುಚ್ಚೆದ್ದು ಕುಣಿದ ಅಭಿಮಾನಿಗಳು

ಇಂದು ಮುಂಜಾನೆಯಿಂದಲೇ ಆರಂಭವಾದ 'ಶಿವಲಿಂಗ' ಪ್ರದರ್ಶನ. ಶಿವಲಿಂಗ ಚಿತ್ರ ನೋಡುತ್ತಲೇ ಚಿತ್ರಮಂದಿರಲ್ಲಿ ಹುಚ್ಚೆದ್ದು ಕುಣಿಯುತ್ತಿರುವ ಅಭಿಮಾನಿಗಳು. ಒಟ್ನಲ್ಲಿ ಶಿವಣ್ಣನ ಶಿವತಾಂಡವಕ್ಕೆ ಅಭಿಮಾನಿಗಳು ಥ್ರಿಲ್ಲ್ ಆಗಿದ್ದಾರೆ.


ಕ್ರೇಜ್ ಅಂದ್ರೆ ಇದಪ್ಪಾ

ಶಿವಣ್ಣನ ಕ್ರೇಜ್ ಅಂದ್ರೆ ಏನಂದುಕೊಂಡಿದ್ದೀರಾ?, ಕ್ರೇಜ್ ಅಂದ್ರೆ ಇದು. ಅಭಿಮಾನಿಯೊಬ್ಬ ರುದ್ರಾಕ್ಷಿಯಲ್ಲಿ ತಯಾರಿಸಿದ 'ಶಿವಲಿಂಗ' ವನ್ನು ಎತ್ತಿ ಹಿಡಿದಿರುವುದು.


ಫಸ್ಟ್ ಹಾಫ್ ಎಕ್ಸಲೆಂಟ್

ಶಿವಣ್ಣ ಅವರ 'ಶಿವಲಿಂಗ' ಫಸ್ಟ್ ಶೋ ನೋಡಿದ ಅವರ ಅಭಿಮಾನಿಗಳು ಮೊದಲ ವಿಮರ್ಶೆ ವ್ಯಕ್ತಪಡಿಸಿದ್ದಾರೆ. 'ಫಸ್ಟ್ ಹಾಫ್ ಎಕ್ಸಲೆಂಟ್, ಮತ್ತು ಸೆಕೆಂಡ್ ಹಾಫ್ ಅಂತೂ ಅದ್ಭುತ. 'ಆಪ್ತಮಿತ್ರ' ಸಿನಿಮಾದ ನಂತರ ನಿರ್ದೇಶಕ ವಾಸು ಅವರದು ಬೆಸ್ಟ್ ಸಿನಿಮಾ. ಎಂದು ಪ್ರಥಮ ವಿಮರ್ಶೆ ಟ್ವಿಟ್ಟರ್ ನಲ್ಲಿ ವ್ಯಕ್ತವಾಗಿದೆ.


ಶಿವಲಿಂಗ ಚಿಂದಿ ಚಿತ್ರಾನ್ನ

ಇನ್ ವೆಸ್ಟಿಗೇಷನ್ ಸ್ಟೈಲ್ ನಲ್ಲಿ ಶಿವಣ್ಣ ಚಿಂದಿ, ಸಾಧು ಕಾಮಿಡಿ ಎಕ್ಸಾಟ್ರಾಡಿನರಿ, ವೇದಿಕಾ ಗ್ಲಾಮರ್ ಸೂಪರ್, ಬಿಜಿಎಮ್ ಮತ್ತು ಸಾಂಗ್ ಟೋಟಲಿ ಸೂಪರ್. ಒಟ್ನಲ್ಲಿ 'ಶಿವಲಿಂಗ' ಪ್ರೇಕ್ಷಕರಿಗೆ ಹಬ್ಬ.


ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ನಿಲ್ಲಿಸುತ್ತೆ

ಪಿ.ವಾಸು ಅವರಿಗೆ ಮತ್ತು ಶಿವಲಿಂಗ ತಂಡಕ್ಕೆ ಹ್ಯಾಟ್ಸಾಫ್. ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವ ಥ್ರಿಲ್ಲರ್ ಮತ್ತು ಕಾಮಿಡಿ. ರೇಟಿಂಗ್: 4.75/5.


ಟ್ವಿಟ್ಟರ್ ನಲ್ಲಿ 'ಶಿವಲಿಂಗ' ಟ್ರೆಂಡಿಂಗ್

ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದ್ದು, ಬೆಂಗಳೂರಿನಾದ್ಯಂತ ಟ್ವಿಟ್ಟರ್ ನಲ್ಲಿ 'ಶಿವಲಿಂಗ' ಟಾಪ್ ಟ್ರೆಂಡಿಂಗ್ ಆಗಿದೆ.


ಹೊಸಪೇಟೆಯಲ್ಲಿ 'ಶಿವಲಿಂಗ'ಕ್ಕೆ ಅಭಿಷೇಕ

ಬಳ್ಳಾರಿಯ ಹೊಸಪೇಟೆಯಲ್ಲಿ 'ಶಿವಲಿಂಗ' ರಂಗೇರಿದ್ದು, ಅಭಿಮಾನಿಗಳು ಶಿವಣ್ಣ ಅವರ ಬೃಹತ್ ಕಟೌಟ್ ಗಳನ್ನು ಹಾಕಿ ಸಂಭ್ರಮದಿಂದ ಡ್ಯಾನ್ಸ್ ಮಾಡಿದರು.


ಸಂತೋಷ್ ಥಿಯೇಟರ್ ನಲ್ಲಿ ಹಬ್ಬದ ವಾತಾವರಣ

ಈಗಾಗಲೇ ಮುಖ್ಯ ಚಿತ್ರಮಂದಿರ ಸಂತೋಷ್ ಹೌಸ್ ಫುಲ್ ಬೋರ್ಡ್ ನೇತು ಹಾಕಿಕೊಂಡಿದೆ. ಚಿತ್ರದಲ್ಲಿ ಅಭಿಮಾನಿಗಳು ಶಿವಣ್ಣ ಅವರ ಬೃಹತ್ ಕಟೌಟ್ ಗೆ ಭಾರಿ ತೂಕದ ರುದ್ರಾಕ್ಷಿ ಮಾಲೆಯನ್ನು ಹಾಕಲು ತೊಡಗಿದ್ದಾರೆ. ಒಟ್ನಲ್ಲಿ ಸಂತೋಷ್ ಚಿತ್ರಮಂದಿರದ ಎದುರು ಹಬ್ಬದ ವಾತಾವರಣ ಸೃಷ್ಟಿಯಾಗಿದೆ.


ಪ್ರೊಮೋಷನ್ ನಲ್ಲಿ ಬ್ಯುಸಿಯಾದ ವೇದಿಕಾ

ಚಿತ್ರದ ನಾಯಕಿ ವೇದಿಕಾ ಅವರು ಸಿನಿಮಾ ಬಿಡುಗಡೆಯ ಭರಾಟೆಯಲ್ಲೂ ಚಿತ್ರಕ್ಕೆ ಪ್ರೊಮೋಷನ್ ನೀಡಿದ ಪರಿ ನೋಡಿ. ಇದೇ ಮೊದಲ ಬಾರಿಗೆ ಶಿವಣ್ಣ ಅವರ ಜೊತೆ ಮಿಂಚಿರುವ ವೇದಿಕಾ ಅವರು ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಪತ್ನಿಯ ಪಾತ್ರದಲ್ಲಿ ಮಿಂಚಿದ್ದಾರೆ.


ನಟಿ ಮಾನ್ವಿತ ಹರೀಶ್

ಈ ಬಾರಿ ನನಗೆ 'ಶಿವಲಿಂಗ' ಸಿನಿಮಾ ನೋಡಲು ಎರಡು ಕಾರಣ ಇದೆ. ಒಂದು ಶಿವಣ್ಣ ಅವರು ಕಾರಣ ಆದರೆ ಇನ್ನೊಂದು ಅದ್ಭುತ ನಿರ್ದೇಶಕ ಪಿ.ವಾಸು ಅವರು ಎಂದು 'ಕೆಂಡಸಂಪಿಗೆ' ಚಿತ್ರದ ಖ್ಯಾತಿಯ ನಟ ಮಾನ್ವಿತ ಹರೀಶ್ ಅವರು ಟ್ವೀಟ್ ಮಾಡಿದ್ದಾರೆ.


ಕಿಲ್ಲಿಂಗ್ ನಂತರ ಟ್ವಿಟ್ಟರ್ ನಲ್ಲಿ ಶಿವಲಿಂಗ ಟ್ರೆಂಡಿಂಗ್

ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದ ನಂತರ ಇದೀಗ ಸೆಂಚುರಿ ಸ್ಟಾರ್ ಶಿವಣ್ಣ ಅವರ 'ಶಿವಲಿಂಗ' ಸಿನಿಮಾ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ. ಇದು ಶಿವರಾಜ್ ಕುಮಾರ್ ಅಭಿಮಾನಿಗಳ ಪವರ್ ಅಂದ್ರೆ.


ರೆಕಾರ್ಡ್ ಬ್ರೇಕ್ ಮಾಡುತ್ತೆ 'ಶಿವಲಿಂಗ'

'ಶಿವಲಿಂಗ' ಚಿತ್ರದ ಫಸ್ಟ್ ಹಾಫ್ ಅನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. 'ಶಿವಲಿಂಗ' ಎಲ್ಲಾ ರೆಕಾರ್ಡ್ಸ್ ಗಳನ್ನು ಧೂಳಿಪಟ ಮಾಡುತ್ತೆ. ಏಕೆಂದರೆ ಸಿನಿಮಾದಲ್ಲಿ ಅಷ್ಟು ಸ್ಟ್ರಾಂಗ್ ಕಂಟೆಂಟ್ ಇದೆ ಎಂದು ಟ್ವಿಟ್ಟರ್ ನಲ್ಲಿ ಮೊದಲ ವಿಮರ್ಶೆ ಉತ್ತಮವಾಗಿ ವ್ಯಕ್ತವಾಗಿದೆ.


ಶಿವಣ್ಣನ ಅಭಿಮಾನಿಗಳ ಹವಾರಿಲೀಸ್ ಗು ಮುನ್ನ ಶುರು ಶಿವ 󾌵


Posted by Dr.Shivarajkumar Yuva Sene on Thursday, February 11, 2016

ವಿಡಿಯೋ ನೋಡಿ..

ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಜನಸಾಗರ ಮತ್ತು ಅಭಿಮಾನಿಗಳ ಸಂಭ್ರಮ ನೋಡಲು ಈ ವಿಡಿಯೋ ನೋಡಿ..


English summary
Kannada Movie 'Shivalinga' directed by P Vasu released today and got overwhelming response all over Karnataka. Actor Shiva Rajkumar, Actress Vedika are in the lead role. Here is the first day first show craze, tweets, audience response.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada