»   » ಯೂಟ್ಯೂಬ್ ಟ್ರೆಂಡಿಂಗ್ ಟಾಪ್ ನಲ್ಲಿ ಮಹಿಳಾ ಪ್ರಧಾನ 'ಶುದ್ಧಿ' ಟ್ರೈಲರ್

ಯೂಟ್ಯೂಬ್ ಟ್ರೆಂಡಿಂಗ್ ಟಾಪ್ ನಲ್ಲಿ ಮಹಿಳಾ ಪ್ರಧಾನ 'ಶುದ್ಧಿ' ಟ್ರೈಲರ್

Posted By:
Subscribe to Filmibeat Kannada

ಸದ್ದಿಲ್ಲದೆ ಕನ್ನಡ ಸಿನಿಮಾ ವೊಂದರ ಅಫೀಶಿಯಲ್ ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ 3 ನೇ ಸ್ಥಾನದಲ್ಲಿದೆ. ವಿಶೇಷ ಅಂದ್ರೆ ಈ ಸಿನಿಮಾ ದಲ್ಲಿ ಅಮೆರಿಕ ನಟಿ ಒಬ್ಬರು ಅಭಿನಯಿಸಿದ್ದಾರೆ.

ಕನ್ನಡ ಸಿನಿಮಾ ಆದರೂ, ಅಮೆರಿಕ ಹುಡುಗಿ ಒಬ್ಬಳ ಸ್ಪಿರಿಚುವಲ್ ಜರ್ನಿ ಕುರಿತ ಈ ಚಿತ್ರದ ಟ್ರೈಲರ್ ಗೆ ಯೂಟ್ಯೂಬ್ ನಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಸೈಲೆಂಟಾಗಿಯೇ ಸಿನಿ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿದೆ. ಆ ಸಿನಿಮಾ ಯಾವುದು? ಡೀಟೇಲ್ಸ್ ಇಲ್ಲಿದೆ.

ಮಹಿಳೆಯರ ದೌರ್ಜನ್ಯದ ಸುತ್ತ ಸುತ್ತುವ ಸಿನಿಮಾ

ಅಂದಹಾಗೆ ಇತ್ತೀಚೆಗೆ ಟ್ರೈಲರ್ ಬಿಡುಗಡೆ ಆಗಿರುವ ಸಿನಿಮಾ ಹೆಸರು 'ಶುದ್ಧಿ'. ಈ ಚಿತ್ರ ಸಂಪೂರ್ಣವಾಗಿ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯದ ಸುತ್ತ ಸುತ್ತುವ ಕಥೆಯನ್ನು ಹೊಂದಿದೆ.

ಭಾರತದಲ್ಲಿನ ಅಮೆರಿಕ ಹುಡುಗಿಯ ಕಥೆ

'ಶುದ್ಧಿ' ಚಿತ್ರವು ಅಮೆರಿಕ ಹುಡುಗಿಯೊಬ್ಬಳ ಭಾರತದಲ್ಲಿನ ಸ್ಪಿರಿಚುವಲ್ ಜರ್ನಿ ಕುರಿತ ಕಥೆಯನ್ನು ಹೊಂದಿದ್ದು, ಅಮೆರಿಕನ್ ಹುಡುಗಿಯೊಬ್ಬಳು ಇಲ್ಲಿನ ಇಬ್ಬರು ಮಹಿಳಾ ಪತ್ರಕರ್ತೆಯರೊಂದಿಗೆ ಸೇರಿ, ಮಹಿಳಾ ಶೋಷಣೆ ವಿರುದ್ಧ ನ್ಯಾಯಕ್ಕಾಗಿ ಹೋರಾಡುವ ಅಂಶವನ್ನು ಸಿನಿಮಾ ಹೊಂದಿದೆ.

ಲೀಡ್ ರೋಲ್‌ ನಲ್ಲಿ ನಿವೇದಿತಾ

ಈ ಹಿಂದೆ 'ಕಲ್ಲರಳಿ ಹೂವಾಗಿ', 'ಅವ್ವ', 'ಯಾರೇ ಕೂಗಾಡಲಿ', ಸಿನಿಮಾಗಳಲ್ಲಿ ಅಭಿನಯಿಸಿರುವ ನಿವೇದಿತಾ 'ಶುದ್ಧಿ' ಚಿತ್ರದ ಲೀಡ್ ರೋಲ್ ನಿರ್ವಹಿಸಿದ್ದಾರೆ.

ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್

3.39 ನಿಮಿಷ ಇರುವ 'ಶುದ್ಧಿ' ಚಿತ್ರದ ಟ್ರೈಲರ್ ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಆಗಿದ್ದು, ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ 3 ನೇ ಸ್ಥಾನದಲ್ಲಿದೆ.

'ಶುದ್ಧಿ' ಯಲ್ಲಿ ಯಾರೆಲ್ಲಾ ಇದ್ದಾರೆ?

'ಶುದ್ಧಿ' ಮಹಿಳಾ ಪ್ರಧಾನ ಚಿತ್ರವಾಗಿರುವುದರಿಂದ ನಿವೇದಿತಾ, ಲಾರೆನ್ ಸ್ಪಾರ್ಟನೊ, ಅಮೃತಾ ಕರಗದ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು, ಇತರೆ ಹಲವರು ಅಭಿನಯಿಸಿದ್ದಾರೆ.

ಸಾನ್ವಿ ಪಿಕ್ಚರ್ಸ್ ನಿರ್ಮಾಣದಲ್ಲಿ 'ಶುದ್ಧಿ

ಆದರ್ಶ್ ಎಚ್.ಈಶ್ವರಪ್ಪ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ಸಾನ್ವಿ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಜೆಸ್ಸಿ ಕ್ಲಿಂಟನ್ ಅವರು ಸಂಗೀತ ಸಂಯೋಜನೆ ನೀಡಿದ್ದು, ಅಂಡ್ರು ಆಯಿಲೋ ಛಾಯಾಗ್ರಹಣ ಚಿತ್ರಕ್ಕಿದೆ.

'ಶುದ್ಧಿ' ಟ್ರೈಲರ್ ನೋಡಿ

English summary
Kannada Movie 'Shuddhi' Official Trailer Released Recently. Shuddhi is the story of an American girl's spiritual journey in India, after she befriends two female journalists who are fighting against the country's lenient Juvenile Justice Act.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada