'ಸೈಡ್ ವಿಂಗ್' ಚಿತ್ರದ ಟೀಸರ್: ನಾಟಕನಾ ಅಥವಾ ಸಿನಿಮಾನಾ

ಕನ್ನಡಕ್ಕಾಗಿ ಒಂದನ್ನು ಒತ್ತಿ, ದಯವಿಟ್ಟು ಗಮನಿಸಿ ಅಂತಹ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ ಅವಿನಾಶ್ ಈಗ ಇನ್ನೊಂದು ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಹೆಸರು ಸೈಡ್ ವಿಂಗ್. ರಂಗಭೂಮಿ ಕಲಾವಿದನ ಸುತ್ತ ನಡೆಯುವ ಕಥೆಯಾಧರಿತ ಚಿತ್ರ.

ಪೋಸ್ಟರ್ ಮೂಲಕ ಚರ್ಚೆಗೆ ಕಾರಣವಾಗಿದ್ದ ಸೈಡ್ ವಿಂಗ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸ್ಯಾಂಡಲ್ ವುಡ್ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ. ಯಾಕಂದ್ರೆ, ಟೀಸರ್ ನಲ್ಲಿ ತೋರಿಸಿರುವಂತೆ ಸಿನಿಮಾ ಮತ್ತು ರಂಗಭೂಮಿ ನಡುವಿನ ಅಂತರ, ಸಂಬಂಧಗಳ ಬಗ್ಗೆ ಈ ಚಿತ್ರದಲ್ಲಿ ಉಲ್ಲೇಖಿಸಲಾಗಿದೆ.

Kannada movie Sidewing teaser release

ಸಿನಿಮಾ ಮೇಲೆ ದ್ವೇಷ ಹೊಂದಿರುವ ರಂಗಭೂಮಿ ಕಲಾವಿದ, ರಂಗಭೂಮಿಯನ್ನ ದ್ವೇಷ ಮಾಡುವ ಸಿನಿಮಾ ಕಲಾವಿದೆಯ ಪಾತ್ರಗಳ ಜೊತೆ ಇನ್ನು ಕೆಲವು ಪಾತ್ರಗಳನ್ನಿಟ್ಟು ಇಡೀ ಸಿನಿಮಾ ಮಾಡಲಾಗಿದೆ. ವಿಶೇಷ ಅಂದ್ರೆ ಈ ಚಿತ್ರವನ್ನ ನಾಯಕನಟ ಅವಿನಾಶ್ ಶಠಮರ್ಷಣ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ನಟನಾಗಿದ್ದ ಅವಿನಾಶ್ ನಿರ್ದೇಶಕನಾಗಿ ಬಡ್ತಿ ಪಡೆದುಕೊಂಡಿದ್ದಾರೆ.

Kannada movie Sidewing teaser release

ಅವಿನಾಶ್ ಗೆ ಜೋಡಿಯಾಗಿ ಅವರ ಪತ್ನಿ ಪ್ರಿಯಾ ಶಠಮರ್ಷಣ ನಟಿಸಿದ್ದಾರೆ. ಇವರಿಬ್ಬರ ಜೊತೆ ಆತ್ಮಾನಂದ ವಾಸನ್, ವಂದಿತಾ, ಅನ್ವಯ ಶೆಟ್ಟಿ, ಪ್ರಣಯ ಮೂರ್ತಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ರಿಷಿ ಛಾಯಾಗ್ರಹಣ ಇದ್ದು, ಸೂರ್ಯ ಎಸ್ ಭಾರಧ್ವಜ್ ಸಂಗೀತ ನಿರ್ದೇಶವಿದೆ.

Kannada movie Sidewing teaser release

ಈಗಾಗಲೇ ಸೈಡ್ ವಿಂಗ್ ಚಿತ್ರದ ಟೀಸರನ್ನ ಹಿರಿಯ ನಿರ್ದೇಶನ ಟಿ ಎಸ್ ನಾಗಭರಣ ಅವರು ನೋಡಿ ಮೆಚ್ಚಿಕೊಂಡಿದ್ದಾರೆ. ಸದ್ಯಕ್ಕೆ ಟೀಸರ್ ಮೂಲಕ ಸದ್ದು ಮಾಡುತ್ತಿರುವ ಸೈಡ್ ವಿಂಗ್ ಆದಷ್ಟೂ ಬೇಗ ಚಿತ್ರಮಂದಿರಕ್ಕೆ ಬರಲಿದೆ.

More from Filmibeat

English summary
Kannadakkagi ondanna othi and dayavittu gamanisi fame actor avinash starrer sidewing movie teaser released. the movie directed by avinash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X