Just In
Don't Miss!
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟಗರು ಚಿತ್ರಕ್ಕೆ ಬಂತು ಭಾರಿ ಡಿಮ್ಯಾಂಡ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಯಸ್ಸು 50 ದಾಡಿದ ನಂತರವೂ ಭಾರಿ ಬೇಡಿಕೆಯನ್ನ ಉಳಿಸಿಕೊಂಡಿರುವ ನಟ. ಕನ್ನಡ ಸಿನಿಮಾರಂಗದಲ್ಲಿ ಇವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಮಾತಿದೆ. ಸದ್ಯ ಶಿವಣ್ಣ ಅಭಿನಯದ ಟಗರು ಚಿತ್ರಕ್ಕೆ ಭಾರಿ ಡಿಮ್ಯಾಂಡ್ ಕ್ರಿಯೆಟ್ ಆಗಿದೆ.
ಟೀಸರ್ ಮತ್ತು ಮೇಕಿಂಗ್ ನಿಂದ ಭಾರಿ ಕೌತುಕವನ್ನ ಸೃಷ್ಠಿ ಮಾಡಿರುವ ಟಗರು ಚಿತ್ರ ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಹೊಸಪೇಟೆಯಲ್ಲಿ ಮೂರು ಹಾಡುಗಳನ್ನ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆಯನ್ನ ಹೆಚ್ಚು ಮಾಡಿತ್ತು ಸಿನಿಮಾತಂಡ.
ಧನಂಜಯ್ ಗೆ 'ಕೇಡಿ' ಎಂದ ಪ್ರಣಿತಾ: ಮೇಘನಾ, ಸಂಗೀತಾ ಫುಲ್ ಹ್ಯಾಪಿ
ಸದ್ಯ ಚಿತ್ರಕ್ಕೆ ಬಾಲಿವುಡ್ ಮತ್ತು ಟಾಲಿವುಡ್ ನಿಂದ ಬೇಡಿಕೆ ಬಂದಿದೆಯಂತೆ. ಡಬ್ಬಿಂಗ್ ರೈಟ್ಸ್ ಗಾಗಿ ನಿರ್ಮಾಪಕರನ್ನ ಪರಭಾಷೆಯ ಪ್ರೊಡ್ಯೂಸರ್ ಗಳು ಸಂಪರ್ಕ ಮಾಡಿದ್ದಾರೆ. ಚಿತ್ರ ತೆರೆಗೆ ಬರುವ ಮುಂಚೆಯೇ ಈ ಮಟ್ಟಕ್ಕೆ ಟಗರು ಹವಾ ಸೃಷ್ಟಿ ಮಾಡಿದ್ದು ಕನ್ನಡ ಸಿನಿಮಾ ಅಭಿಮಾನಿಗಳಿಗೆ ಖುಷಿ ತಂದಿದೆ.
ದುನಿಯಾ ಸೂರಿ ಟಗರು ಸಿನಿಮಾವನ್ನ ನಿರ್ದೇಶನ ಮಾಡಿರುವುದರಿಂದ ಚಿತ್ರದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ. ಸಿನಿಮಾದ ಟೈಟಲ್ ಸಾಂಗ್ ಎಲ್ಲೆಡೆ ಫೇಮಸ್ ಆಗಿದ್ದು ಶಿವಣ್ಣ ಭೇಟಿ ನೀಡುವ ಖಾಸಗಿ ಕಾರ್ಯಕ್ರಮಗಳಲ್ಲಿ ಹಾಗೂ ಬೇರೆ ಸಿನಿಮಾ ಸೆಟ್ ಗಳಲ್ಲಿ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ.
ಟಗರು ಸಿನಿಮಾದಲ್ಲಿ ಶಿವಣ್ಣನ ಜೊತೆಯಲ್ಲಿ ಮತ್ತಷ್ಟು ಕಲಾವಿದರು ಅಭಿನಯಿಸಿರುವುದರಿಂದ ಚಿತ್ರವನ್ನ ನೋಡಲು ಅಭಿಮಾನಿಗಳ ಸಮೂಹವೇ ಕಾದಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿರುವ ಸೂರಿ ಅಂಡ್ ಟೀಂ ಫೆಬ್ರವರಿಯಲ್ಲಿ ಚಿತ್ರವನ್ನ ತೆರೆಗೆ ತರಲಿದ್ದಾರೆ.