twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಲನಚಿತ್ರ ಸಿಂಹಾವಲೋಕನ: ಸಾಧಕರಿಗೆ ಸನ್ಮಾನ

    By Suneetha
    |

    ಕರ್ನಾಟಕ ಚಲನಚಿತ್ರ ಅಕಾಡೆಮಿ ಮಾರ್ಚ್ 3ರಂದು ಸಂಜೆ 5.30ಕ್ಕೆ ಕನ್ನಡ 'ವಾಕ್ಚಿತ್ರ ಹುಟ್ಟುಹಬ್ಬ'ದ ಅಂಗವಾಗಿ 'ಕನ್ನಡ ಚಲನಚಿತ್ರ ಸಿಂಹಾವಲೋಕನ-ಸಾಧಕರಿಗೆ ಸನ್ಮಾನ' ಕಾರ್ಯಕ್ರಮವನ್ನು ಬೆಂಗಳೂರು ವಸಂತನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೆಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

    ಮೂಲ ಸೌಲಭ್ಯ ಅಭಿವೃದ್ಧಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಖಾತೆ ಸಚಿವ ಆರ್.ರೋಷನ್ ಬೇಗ್ ಅವರು ಕಾರ್ಯಕ್ರಮದ ಉದ್ಫಾಟನೆಯನ್ನು ನೆರವೇರಿಸಲಿದ್ದು, ವಸತಿ ಸಚಿವ ಕಮ್ ರೆಬೆಲ್ ಸ್ಟಾರ್ ಅಂಬರೀಶ್ ಅವರು ಸಾಧಕರಿಗೆ ಸನ್ಮಾನವನ್ನು ಮಾಡಲಿದ್ದಾರೆ.['ವಿದಾಯ' ಚಲನಚಿತ್ರದ ಜೊತೆ ಬೆಳ್ಳಿ ಮಾತುಗಳು]

    Kannada movie talki birthday celebrations Bengaluru

    ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಕಮ್ ನಟಿ ಉಮಾಶ್ರೀ ಅವರು ವಹಿಸಲಿದ್ದಾರೆ.

    ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಸಾಹಿತಿಗಳು, ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪುರಸ್ಕೃತರಾದ ಡಾ.ಬರಗೂರು ರಾಮಚಂದ್ರಪ್ಪ ಅವರು ಕನ್ನಡ ಚಿತ್ರರಂಗದ ಬೆಳವಣಿಗೆ ಒಂದು ವಿಶ್ಲೇಷಣಾತ್ಮಕ ನೋಟ ಕುರಿತಂತೆ ಮಾತನಾಡಲಿದ್ದಾರೆ.[ಬೆಳ್ಳಿ ಸಿನಿಮಾದಲ್ಲಿ 'ರಂಗಿತರಂಗ' ತಂಡದ ಬೆಳ್ಳಿ ಮಾತು]

    Kannada movie talki birthday celebrations Bengaluru

    ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿ ಡಾ.ಎನ್.ಎಸ್. ಚನ್ನಪ್ಪಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮುಂತಾದವರು ಪಾಲ್ಗೊಳ್ಳಲಿದ್ದಾರೆ.[ಚಿತ್ರಗಳು: ಬೆಳ್ಳಿ ಹೆಜ್ಜೆಯಲ್ಲಿ ಡಾ.ಶಿವಣ್ಣನ ಮನದಾಳದ ಮಾತು]

    ಕನ್ನಡ ಚಲನಚಿತ್ರರಂಗದ ಸ್ಟಾರ್ ನಟರಾದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.

    ಸಂಜೆ 5 ಘಂಟೆಗೆ ವಿಶೇಷವಾಗಿ ಕನ್ನಡ ಚಲನಚಿತ್ರ ಗೀತೆಗಳ ಗಾಯನವನ್ನು ಏರ್ಪಡಿಸಲಾಗಿದೆ ಹಾಗೂ ಪ್ರಶಸ್ತಿ ಪುರಸ್ಕೃತರಿಗೆ 50 ಸಾವಿರ ನಗದು ಬಹುಮಾನ ನೀಡಲಾಗುವುದು.ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟಾರ್ ಹೆಚ್. ಬಿ. ದಿನೇಶ್ ಅವರು ತಿಳಿಸಿದ್ದಾರೆ.

    ಪ್ರಶಸ್ತಿ ಪುರಸ್ಕೃತರ ವಿವರಗಳು ಕೆಳಕಂಡಂತಿವೆ:

    ಕ್ರ.ಸಂ

    ಪ್ರಶಸ್ತಿಯ ಹೆಸರು

    ಚಿತ್ರರಂಗದ ಕ್ಷೇತ್ರ

    ನಗದು ಪ್ರಶಸ್ತಿಗೆ ಆಯ್ಕೆಯಾದವರು


    1 ಆರ್ ನಾಗೇಂದ್ರರಾವ್ ಪ್ರಶಸ್ತಿ ಖ್ಯಾತ ನಿರ್ದೇಶಕ, ನಟ, ನಿರ್ಮಾಪಕ, ಸಂಗೀತ ನಿರ್ದೇಶಕ
    ಅಭಿನಯ
    ರಂಗಭೂಮಿ ಕಲಾವಿದೆ ಶ್ರೀಮತಿ ಎಸ್.ಕೆ.ಪದ್ಮಾದೇವಿ. ಕನ್ನಡದ ಎರಡನೇ ವಾಕ್ಚಿತ್ರ 'ಭಕ್ತಧೃವ'ದಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯ.
    2
    ಬಿ.ಆರ್.ಪಂತುಲು ಪ್ರಶಸ್ತಿ ಖ್ಯಾತ ನಿರ್ದೇಶಕ-ನಟ-ನಿರ್ಮಾಪಕ
    ನಿರ್ದೇಶನ
    ಶ್ರೀ ಜೋಸೈಮನ್, ಕನ್ನಡ ಸಾಹಸ ಚಿತ್ರಗಳಿಗೆ ಹೊಸತನ ನೀಡಿದ ನಿರ್ದೇಶಕ
    3
    ಡಿ.ಶಂಕರ್‌ಸಿಂಗ್ ಪ್ರಶಸ್ತಿ ಖ್ಯಾತ ನಿರ್ದೇಶಕ, ನಿರ್ಮಾಪಕ
    ನಿರ್ಮಾಪಕ
    ಹೆಚ್.ಎನ್.ಮುದ್ದುಕೃಷ್ಣ ಪಾರಿಜಾತ ಮೂವೀಸ್ ಮೂಲಕ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದ್ದಾರೆ.
    4
    ಜಿ.ವಿ.ಅಯ್ಯರ್ ಪ್ರಶಸ್ತಿ ಖ್ಯಾತ ನಿರ್ದೇಶಕ-ನಟ-ನಿರ್ಮಾಪಕ
    ಸಂಗೀತ
    ಶ್ರೀ ರತ್ನಂ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಅನೇಕ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.
    5
    ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ ಖ್ಯಾತ ನಿರ್ದೇಶಕ-ನಿರ್ಮಾಪಕ
    ಹಾಡುಗಳು/ ಸಂಭಾಷಣೆ
    ಬಿ.ಎ.ಮಧು.130ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದಾರೆ.
    6
    ಬಿ.ಎಸ್.ರಂಗ ಪ್ರಶಸ್ತಿ ಕನ್ನಡದ ಮೊದಲ ವರ್ಣ ಚಿತ್ರದ ನಿರ್ದೇಶಕರು
    ಛಾಯಾಗ್ರಹಣ
    ಬಿ.ಎಸ್.ಬಸವರಾಜು.ಹೆಸರಾಂತ ಛಾಯಾಗ್ರಾಹಕರು
    7
    ಬಿ.ಜಯಮ್ಮ ಪ್ರಶಸ್ತಿ ಹೆಸರಾಂತ ಅಭಿನೇತ್ರಿ
    ಅತ್ಯುತ್ತಮ ಪ್ರದರ್ಶಕರು
    ಬಾಬ್ಜಿ ಶ್ರೀನಿವಾಸ ಪಿಕ್ಚರ್ಸ್,ಉತ್ತರ ಕರ್ನಾಟಕ ಗದಗದಲ್ಲಿ ಉತ್ತರ ಕರ್ನಾಟಕದಲ್ಲಿ ಕನ್ನಡ ಚಿತ್ರಗಳ ಅಭಿರುಚಿ ಬೆಳೆಸಿದ ಪ್ರದರ್ಶಕ.
    8
    ಎಂ.ಪಿ.ಶಂಕರ್ ಪ್ರಶಸ್ತಿ ಹೆಸರಾಂತ ನಿರ್ಮಾಪಕರು-ಖಳನಾಯಕರು
    ತಂತ್ರಜ್ಞಾನ
    ಆರ್ಮುಗಂ ಕನ್ನಡದ ಉತ್ತಮ ಶಬ್ದ ಗ್ರಾಹಕರು-ನಿರ್ಮಾಪಕರು
    9
    ತೂಗುದೀಪ ಶ್ರೀನಿವಾಸ್ ಪ್ರಶಸ್ತಿ ಖ್ಯಾತ ಕಲಾವಿದರು
    ಅತ್ಯುತ್ತಮ ಖಳನಾಯಕ
    ಜೈಜಗದೀಶ್. ೪೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಿರ್ಮಾಪಕರು-ನಿರ್ದೇಶಕರು
    10
    ಕೆ.ಎನ್.ಟೈಲರ್ ಪ್ರಶಸ್ತಿ ನಿರ್ದೇಶಕ-ನಟ-ನಿರ್ಮಾಪಕ
    ಪ್ರಾದೇಶಿಕ ಭಾಷೆ
    ರಿಚರ್ಡ್ ಕಾಸ್ಟೋಲಿನ್. ಅನೇಕ ತುಳು ಚಿತ್ರಗಳ ನಿರ್ಮಾಪಕ-ನಿರ್ದೇಶಕ.

    English summary
    Karnataka Film Academy to honors veteran kannada movie artist-techniciens on the occasion of anniversary celebrations of movie talki
    Wednesday, March 2, 2016, 17:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X