»   » ಪವನ್ ಕುಮಾರ್ 'ಯು-ಟರ್ನ್'ಗೆ ಟ್ರಾಫಿಕ್ ಪೊಲೀಸ್ ಅಧಿಕಾರಿ ಫಿದಾ

ಪವನ್ ಕುಮಾರ್ 'ಯು-ಟರ್ನ್'ಗೆ ಟ್ರಾಫಿಕ್ ಪೊಲೀಸ್ ಅಧಿಕಾರಿ ಫಿದಾ

Posted By:
Subscribe to Filmibeat Kannada

ಪವನ್ ಕುಮಾರ್ ನಿರ್ದೇಶನ ಮಾಡಿದ್ದ 'ಯು-ಟರ್ನ್' ಸಿನಿಮಾ ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುವುದರ ಜೊತೆಗೆ ಇಡೀ ಚಿತ್ರತಂಡ ಮಾಡುತ್ತಿರುವ ಸಾಮಾಜಿಕ ಸೇವೆಯಿಂದಾಗಿ ಎಲ್ಲರಿಂದ ಸಾಕಷ್ಟು ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಿದೆ.

ಇದೀಗ ಈ ಸಿನಿಮಾ ನೋಡಿ ಮೆಚ್ಚಿಕೊಂಡ ಮಂಗಳೂರಿನ ಎ.ಸಿ.ಪಿ ಉದಯ್ ನಾಯಕ್ ಅವರು ತಮ್ಮ ಇಡೀ ಪೊಲೀಸ್ ಇಲಾಖೆಗೆ ಸಿನಿಮಾ ತೋರಿಸಲು ಮುಂದಾಗಿದ್ದಾರೆ. ಆದ್ದರಿಂದ ನಾಳೆ (ಜೂನ್ 8) ಮಂಗಳೂರಿನ ಬಿಗ್ ಸಿನಿಮಾಸ್ ನಲ್ಲಿ ಮಧ್ಯಾಹ್ನ 12.30ಕ್ಕೆ ವಿಶೇಷವಾಗಿ ಪೊಲೀಸ್ ಇಲಾಖೆಗೆಂದೇ ಸ್ಪೆಷಲ್ ಶೋ ಹಮ್ಮಿಕೊಳ್ಳಲಾಗಿದೆ.[ಪೊಲೀಸ್ ಇಲಾಖೆಗೆ 'ಕಿಲ್ಲಿಂಗ್ ವೀರಪ್ಪನ್' ಸ್ಪೆಶಲ್ ಶೋ]


Kannada movie 'U Turn' special show for Police Department

ಮೇ 25 ರಂದು ಮಂಗಳೂರು ಬಿಗ್ ಎಫ್.ಎಂ ನ ಆರ್.ಜೆ ಎರೋಲ್ ಅವರು ಈ ಸಿನಿಮಾ ನೋಡಿ ಬಹಳ ಇಷ್ಟಪಟ್ಟಿದ್ದರು. ಮಂಗಳೂರಿನಲ್ಲಿ ಇತ್ತೀಚಿಗಿನ ಟ್ರಾಫಿಕ್ ಸಮಸ್ಯೆ ನೋಡಿ ಬೇಸತ್ತಿದ್ದ ಆರ್.ಜೆ ಎರೋಲ್ ಅವರು ಈ ಸಿನಿಮಾ ನೋಡಿದ ಬಳಿಕ ಮಂಗಳೂರಿನ ಟ್ರಾಫಿಕ್ ಪೊಲೀಸ್ ಇಲಾಖೆಗೆ ಕರೆ ಮಾಡಿ ಈ ಸಿನಿಮಾ ನೋಡಿ ಅಂತ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು.[ಡಬ್ಬಲ್ ರೋಡ್ ಫ್ಲೈ ಓವರ್ ಕಾಮಗಾರಿ ಮಾಡಿದ 'ಯು-ಟರ್ನ್' ಚಿತ್ರತಂಡ]


Kannada movie 'U Turn' special show for Police Department

ಆರ್.ಜೆ ಎರೋಲ್ ಅವರ ಅಭಿಪ್ರಾಯ ಪಡೆದುಕೊಂಡ ಎ.ಸಿ.ಪಿ ಉದಯ್ ನಾಯಕ್ ಅವರು ಸಿನಿಮಾ ನೋಡಿ ಮೆಚ್ಚಿಕೊಂಡು ಮಂಗಳೂರಿನ ಇಡೀ ಪೊಲೀಸ್ ಇಲಾಖೆಗೆ ಸಿನಿಮಾ ತೋರಿಸುವ ನಿಟ್ಟಿನಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲು ಆರ್.ಜೆ ಎರೋಲ್ ಅವರನ್ನು ಕೇಳಿಕೊಂಡಿದ್ದರು.


ಹಾಗಾಗಿ ಇದೀಗ ಎರೋಲ್ ಅವರು ಬಿಗ್ ಸಿನಿಮಾಸ್ ಮಾಲಿಕರಲ್ಲಿ ಮನವಿ ಮಾಡಿಕೊಂಡು ಪೊಲೀಸ್ ಅಧಿಕಾರಿಗಳಿಗಾಗಿ 'ಯು-ಟರ್ನ್' ಚಿತ್ರದ ವಿಶೇಷ ಪ್ರದರ್ಶನದ ಏರ್ಪಾಡು ಮಾಡಲು ಸಹಾಯ ಮಾಡಿದ್ದಾರೆ. ಈ ಸ್ಪೆಷಲ್ ಶೋನಲ್ಲಿ ಚಿತ್ರದ ನಿರ್ದೇಶಕ ಪವನ್ ಕುಮಾರ್ ಅವರು ಪಾಲ್ಗೊಳ್ಳಲಿದ್ದಾರೆ. (ನಿರ್ದೇಶಕ ಪವನ್ ಕುಮಾರ್ ಅವರ ಪೋಸ್ಟ್)English summary
ACP Uday Nayak saw Kannada Movie 'U Turn' in Mangalore and he was impressed. He is now getting his whole dept along with police dept and other higher officials to watch the film tomorrow (June 8) at Mangalore Big Cinemas at 12.30 noon. The movie is directed by Pawan Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada