For Quick Alerts
  ALLOW NOTIFICATIONS  
  For Daily Alerts

  'ಉಳಿದವರು ಕಂಡಂತೆ' ಚಿತ್ರಕ್ಕೆ ಅಲ್ಪಸ್ವಲ್ಪ ಬದಲಾವಣೆ

  By Rajendra
  |

  ಮಿಶ್ರ ಪ್ರತಿಕ್ರಿಯೆಗೆ ಪಾತ್ರವಾದ ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಉಳಿದವರು ಕಂಡಂತೆ' ಚಿತ್ರದಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಲಾಗಿದೆ. ಈಗ ಚಿತ್ರವನ್ನು ಸಬ್ ಟೈಟಲ್ ನಲ್ಲಿ ಪ್ರದರ್ಶಿಸಲಾಗುತ್ತಿದೆ. ಚಿತ್ರ ಸ್ವಲ್ಪ ಲ್ಯಾಗ್ ಆಗಿದೆ ಎಂಬ ವಿಮರ್ಶೆಗಳ ಹಿನ್ನೆಲೆಯಲ್ಲಿ 12 ನಿಮಿಷಗಳಷ್ಟು ಕಡಿತವನ್ನೂ ಮಾಡಲಾಗಿದೆ.

  ಚಿತ್ರಕ್ಕೆ ಉಳಿದವರು ಎಳೆದಂತೆ ಎಂಬ ವಿಮರ್ಶೆಗಳು ವ್ಯಕ್ತವಾಗಿದ್ದನ್ನು ಸ್ಮರಿಸಬಹುದು. ಇನ್ನು ಚಿತ್ರಕ್ಕೆ ಸಬ್ ಟೈಟಲ್ ಇಡಲು ಕಾರಣ ಅಲ್ಲಲ್ಲಿ ಬಳಸಿರುವ ಮಂಗಳೂರು ಕನ್ನಡ ಹಾಗೂ ತುಳು ಭಾಷೆ. ಕೆಲವರು ಚಿತ್ರದ ಸಂಭಾಷಣೆ ಅಲ್ಲಲ್ಲಿ ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದಿದ್ದರು. ['ಮಂಜಿನ ಹನಿ' ಕಣ್ಣಲ್ಲಿ 'ಉಳಿದವರು ಕಂಡಂತೆ']

  ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಬ್ ಟೈಟಲ್ ನಲ್ಲಿ ಚಿತ್ರವನ್ನು ಇದೀಗ ಪ್ರದರ್ಶಿಸಲಾಗುತ್ತಿದೆ. ಈ ಬಗ್ಗೆ ಟ್ವೀಟಿಸಿರುವ ರಕ್ಷಿತ್ ಶೆಟ್ಟಿ, " All Multiplexes and 2K screens should be playing subtitles with #UlidavaruKandante from tomorrow." ಎಂದಿದ್ದಾರೆ.

  ಕನ್ನಡದಲ್ಲಿ ಹೊಸ ತರಹದ ಚಿತ್ರಗಳು ಬರುತ್ತಿಲ್ಲ, ಅದೇ ಸವಕಲು ಕಥೆಗಳು ಎಂಬ ಮಾತುಗಳಿಗೆ 'ಉಳಿವರು ಕಂಡಂತೆ' ಚಿತ್ರ ಅಪಬಾದವಾಗಿದೆ. ಆದರೆ ಪ್ರೇಕ್ಷಕರು ಹೊಸದನ್ನು ಸ್ವೀಕರಿಸುವಲ್ಲಿ ಅಷ್ಟಾಗಿ ಉತ್ಸಾಹ ತೋರದಿರುವುದು ದುರಂತ.

  ಚಿತ್ರದ ಪಾತ್ರವರ್ಗದಲ್ಲಿ ಶಂಕರ್ ಪೂಜಾರಿಯಾಗಿ ದಿನೇಶ್ ಮಂಗಳೂರು, ರತ್ನಕ್ಕಳಾಗಿ ತಾರಾ, ಮುನ್ನಾ ಪಾತ್ರದಲ್ಲಿ ಕಿಶೋರ್, ರಿಚಿ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ, ರಿಶಬ್ ಆಗಿ ರಘು, ಬಾಲು ಪಾತ್ರದಲ್ಲಿ ಅಚ್ಯುತ ಕುಮಾರ್, ಶಾರದಾ ಪಾತ್ರದಲ್ಲಿ ಯಜ್ಞಾ ಶೆಟ್ಟಿ ಹಾಗೂ ರೆಜೀನಾ ಪಾತ್ರದಲ್ಲಿ ಶೀತಲ್ ಶೆಟ್ಟಿ ಅಭಿನಯಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Recently released Kannada movie Ulidavaru Kandante, directed by and acting Rakshit Shetty, will now release with subtitles. Rakshit tweeted, "All Multiplexes and 2K screens should be playing subtitles with #UlidavaruKandante from tomorrow."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X