»   » ಛೆ! ಉಪೇಂದ್ರ ಅಮೇರಿಕದಲ್ಲಿ ಹೀಗೆಲ್ಲಾ ಮಾಡಬಹುದೇ?

ಛೆ! ಉಪೇಂದ್ರ ಅಮೇರಿಕದಲ್ಲಿ ಹೀಗೆಲ್ಲಾ ಮಾಡಬಹುದೇ?

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದ ಹಿಟ್ ಚಿತ್ರ 'ಉಪ್ಪಿ 2' ಭರ್ಜರಿ 50 ದಿನಗಳನ್ನು ಮುಗಿಸಿದ ಸಂಭ್ರಮದಲ್ಲಿದೆ. ಇದೀಗ ತಮ್ಮ ಕನಸಿನ ಚಿತ್ರ 50 ದಿನಗಳನ್ನು ಪೂರೈಸಿದ ಸಂತಸದಲ್ಲಿರುವ ಉಪೇಂದ್ರ ಅವರು ಚಿತ್ರದ ಯಶಸ್ಸನ್ನು ಡಿಫರೆಂಟ್ ಆಗಿ ಆಚರಿಸಿಕೊಂಡಿದ್ದಾರೆ.

ಎಲ್ಲರ ಕಾಲ್ ಎಳೀತದೆ ಕಾಲ 'ನೋ ಎಕ್ಸ್ ಕ್ಯೂಸ್ ಮಿ ಪ್ಲೀಸ್' ಎಂದು ಡಿಫರೆಂಟ್ ಹಾಡಿನ ಮೂಲಕ ಇಡೀ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಕಾಲು ಎಳೆದು ಕಾಂಟ್ರವರ್ಸಿ ಮೂಲಕನೂ ಈ ವರ್ಷ ಉಪೇಂದ್ರ ಅವರು ಸಖತ್ ಸುದ್ದಿಯಾಗಿದ್ದರು. ಒಟ್ನಲ್ಲಿ ಡಿಫರೆಂಟ್ 'ಉಪ್ಪಿ-ಟ್ಟು' ರುಚಿ ಎಲ್ಲರಿಗೂ ಹಿಡಿಸಿದ್ದು, ಹೌದು ಅಭಿಮಾನಿಗಳು ಭರ್ಜರಿಯಾಗಿ ತಿಂದು ತೇಗಿದ್ದು, ಹೌದು.[ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!]


ಇನ್ನು ಉಪೇಂದ್ರ, ಕ್ರಿಸ್ಟಿನಾ ಅಖೀವಾ ಹಾಗೂ ಪಾರುಲ್ ಯಾದವ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ, ನಟಿ ಕಮ್ ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ ಅವರು ಬಂಡವಾಳ ಹಾಕಿರುವ 'ಉಪ್ಪಿ-2' ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಕಮಾಲ್ ಮಾಡುತ್ತಿದೆ.


ಇನ್ನು ಉಪೇಂದ್ರ ಅವರ 'ಉಪ್ಪಿ-2' ಅಮೇರಿಕದಲ್ಲೂ ತೆರೆಕಾಣುತ್ತಿದ್ದು, ಚಿತ್ರದ ಪ್ರೊಮೋಷನ್ ಗಾಗಿ ಚಿಕಾಗೋ ನಲ್ಲಿ ಟೂರ್ ಹೊಡೆಯುತ್ತಿರುವ ಉಪ್ಪಿ ಅವರು ತಮ್ಮ ಚಿತ್ರ ಯಶಸ್ವಿ 50 ದಿನಗಳನ್ನು ಪೂರೈಸಿದ[ಉಪೇಂದ್ರರ ಬಿಸಿ-ಬಿಸಿ 'ಉಪ್ಪಿ2'ಗೆ 50ರ ಸಂಭ್ರಮ ] ಸಂಭ್ರಮವನ್ನು ಡಿಫರೆಂಟ್ ಆಗಿ ಆಚರಿಸಿಕೊಂಡಿದ್ದಾರೆ ಅದೇನೆಂಬುದನ್ನು ನೋಡಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ.


ಚಿಕಾಗೋನಲ್ಲಿ ಉಪ್ಪಿ 'ಉಲ್ಟಾ' ಅವತಾರ

ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ 'ಉಪ್ಪಿ-ಟ್ಟು' 50ನೇ ದಿನವನ್ನು ಪೂರೈಸಿದ ಸಂಭ್ರಮದಲ್ಲಿ ಅಕ್ಟೋಬರ್ 2 ರಂದು ಚಿಕಾಗೋನ ವಿಲ್ಲಿಸ್ ಟವರ್ ಸ್ಕೈಡೆಕ್ ನ 103ರ ಮಹಡಿಯಲ್ಲಿ ತಾವೇ ಉಲ್ಟಾ ನಿಂತು ಫೋಸ್ ಕೊಡುವ ಮೂಲಕ ಚಿತ್ರದ ಭರ್ಜರಿ ಯಶಸ್ಸನ್ನು ಡಿಫರೆಂಟ್ ಆಗಿ ಆಚರಿಸಿಕೊಂಡರು.


ಲಾಸ್ ವೇಗಸ್ ನಲ್ಲಿ ಕನ್ನಡ ಸಂಘ ಉದ್ಘಾಟನೆ

ವಿದೇಶದ ಲಾಸ್ ವೇಗಸ್ ನಲ್ಲಿರುವ ಕನ್ನಡ ಸಂಘವನ್ನು ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಅವರು ಉದ್ಘಾಟಿಸಿದರು. ಇನ್ನೇನು ಮುಂದಿನ ವಾರದಲ್ಲಿ ಲಾಸ್ ವೇಗಸ್ ನಲ್ಲಿ ಉಪ್ಪಿ ಅವರ 'ಉಪ್ಪಿ-ಟ್ಟು' ಘಮ-ಘಮಿಸಲಿದೆ.[ಅಮೆರಿಕನ್ನಡಿಗರಿಗೆ ಉಪ್ಪಿ2 ಟೇಸ್ಟು ತೋರಿಸಲಿದ್ದಾರೆ ಉಪ್ಪಿ]


'ಉಪ್ಪಿ 2' 50 ನೇ ದಿನದ ನ್ಯೂ ಪೋಸ್ಟರ್

ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ 2', 50 ದಿನಗಳನ್ನು ಪೂರೈಸಿದ ಸಂಭ್ರಮಕ್ಕೆ ಉಪ್ಪಿ ಅವರ ಅಭಿಮಾನಿಯೊಬ್ಬ ರಚಿಸಿದ ಹೊಚ್ಚ ಹೊಸ ಪೋಸ್ಟರ್. ಸದ್ಯಕ್ಕೆ ಇದೀಗ ಮತ್ತೊಮ್ಮೆ ಎಲ್ಲೆಡೆ ಉಪ್ಪಿ ಮೇನಿಯಾ ಆರಂಭವಾದಂತಿದೆ.


ಉಪ್ಪಿ ಜೊತೆ ವಿದೇಶಿಗನ್ನಡಿಗರು

ಯುಎಸ್ಎ, ಸ್ಯಾನ್ ಜೋಸ್ ನ ಟೌನ್ 3 ಸಿನಿಮಾಸ್ ನಲ್ಲಿ ಉಪೇಂದ್ರ ಅವರು ಉಪ್ಪಿ-2 ಚಿತ್ರದ ಸ್ಕ್ರೀನಿಂಗ್ ಸಂದರ್ಭದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಅಭಿಮಾನಿಗಳೊಂದಿಗೆ ಚರ್ಚೆ ನಡೆಸಿದರು


ವಿದೇಶದಲ್ಲಿರುವ ವಿಶ್ವ ಕನ್ನಡಿಗರೊಂದಿಗೆ ಉಪ್ಪಿ ಸಾಂಗ್

ವಿದೇಶದಲ್ಲಿರುವ ಕನ್ನಡಿಗರೊಂದಿಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಸಾಂಗ್ ಹಾಡುತ್ತಿರುವುದು. ಉಪ್ಪಿ ಸಾಂಗ್ ಗೆ ವಿದೇಶಿಗನ್ನಡಿಗರ ಸಖತ್ ಸ್ಟೆಪ್[ಉಪೇಂದ್ರ ಮುಂದಿನ ಪ್ರಾಜೆಕ್ಟ್ ಗುಟ್ಟು ಇನ್ನೂ ರಟ್ಟಾಗಿಲ್ಲ!]


ಉಪ್ಪಿ-ಟ್ಟು ಇನ್ ಯುಎಸ್ಎ

ನಾನು-ನೀನು unknown ದರ್ಬಾರ್ ಇನ್ನು ಯುಎಸ್ಎ ನಲ್ಲೂ ಮುಂದುವರಿಯಲಿದೆ, ಈಗಾಗಲೇ 'ಉಪ್ಪಿ 2' ಚಿತ್ರದ ಪ್ರೊಮೋಷನ್ ಗೆ ಫಾರಿನ್ ಟೂರ್ ನಲ್ಲಿರುವ ಉಪೇಂದ್ರ ಅವರು ವಿದೇಶಿ ಮಹಿಳೆ ಹಾಗೂ ವಿದೇಶದಲ್ಲಿರುವ ಕನ್ನಡಿಗರೊಬ್ಬರೊಂದಿಗೆ ಸೆಲ್ಫಿಗೆ ಫೋಸ್ ನೀಡಿದ್ದು ಹೀಗೆ


ಲಾಸ್ ವೇಗಸ್ ನಲ್ಲಿ ಉಪೇಂದ್ರ ಫೋಸ್

ವಿದೇಶದಲ್ಲಿ ಚಿತ್ರ ಬಿಡುಗಡೆಯ ಪ್ರೊಮೋಷನ್ ಕಾರ್ಯದ ತರಾತುರಿಯಲ್ಲೂ ಲಾಸ್ ವೇಗಸ್ ನಲ್ಲಿ ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ಫೋಟೋ ಗೆ ಫೋಸ್ ಕೊಟ್ಟಿದ್ದು ನೋಡಿ ಹೀಗೆ


English summary
Kannada movie 'Uppi 2' 50 days Celebrations in Chicago. Upendra had directed the film apart from acting and scripting it. 'Uppi 2' completed 50 of days in India screening, Shortly this film was released in USA and Las Vegas.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada