»   » ನರ್ತಕಿ ಚಿತ್ರಮಂದಿರದ ಮುಂದೆ 'ಉಪ್ಪಿ-2' ಸರ್ಕಸ್

ನರ್ತಕಿ ಚಿತ್ರಮಂದಿರದ ಮುಂದೆ 'ಉಪ್ಪಿ-2' ಸರ್ಕಸ್

Posted By:
Subscribe to Filmibeat Kannada

'ಉಪ್ಪಿ-2' ಚಿತ್ರದಲ್ಲಿ ಒಂದು ಹಾಡಿದೆ. ''ಇವನ್ಯಾರೋ ಡಿಫರೆಂಟು...ವೆರಿ ವೆರಿ ಡಿಫರೆಂಟು...'' ಅಂತ. ಹಾಡಿಗೆ ತಕ್ಕ ಹಾಗೆ, ಸಿನಿಮಾದಲ್ಲಿ ಉಪೇಂದ್ರ ಎಷ್ಟು ಡಿಫರೆಂಟ್ ಆಗಿದ್ದಾರೋ ಗೊತ್ತಿಲ್ಲ. ಆದ್ರೆ, ಪ್ರಮೋಷನ್ಸ್ ವಿಚಾರದಲ್ಲಿ ಮಾತ್ರ 'ಉಪ್ಪಿ-2' ಸಖತ್ ಡಿಫರೆಂಟ್ ಆಗಿದೆ. ಅದಕ್ಕೆ ಲೇಟೆಸ್ಟ್ ಸ್ಯಾಂಪಲ್ ಇಲ್ಲಿದೆ ನೋಡಿ.

ಸಾಮಾನ್ಯವಾಗಿ ಥಿಯೇಟರ್ ಗಳ ಮುಂದೆ ಸ್ಟಾರ್ ಗಳ ದೊಡ್ಡ ದೊಡ್ಡ ಕಟೌಟ್ ಗಳನ್ನ ನೀವು ನೋಡಿರ್ತೀರಾ. ಅಂತಹ ಕಟೌಟ್ ಗಳಿಗೆ ದೊಡ್ಡ ದೊಡ್ಡ ಹೂವಿನ ಹಾರಗಳು, ಹಾಲಿನ ಅಭಿಷೇಕ ಮಾಡುವುದನ್ನೂ ಕಣ್ತುಂಬಿಕೊಂಡಿರ್ತೀರಾ. ಆದ್ರೆ, 'ಉಪ್ಪಿ-2' ಚಿತ್ರ ರಿಲೀಸ್ ಆಗುತ್ತಿರುವ ನರ್ತಕಿ ಚಿತ್ರಮಂದಿರ ಮುಂದೆ ಉಪೇಂದ್ರ ಅವರ ಕಟೌಟ್ ನೋಡಿದ್ರೆ, ನೀವು ಏನ್ ಹೇಳ್ತೀರೋ....


Kannada Movie 'Uppi-2' upside down cut-out infront of Nartaki Theatre Bengaluru

ಯೆಸ್...ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಮುಂದೆ ನಿಲ್ಲಿಸಿರುವ ಉಪೇಂದ್ರ ಅವರ ಬೃಹತ್ ಕಟೌಟ್ ಇದು. ಉಲ್ಟಾ-ಪಲ್ಟಾ ಇರುವ ಈ ಕಟೌಟ್ ನೋಡಿ ಕೆಲವರು ಧಂಗಾಗಿದ್ರೆ, ಇನ್ನೂ ಕೆಲವರು ತಲೆ ಕೆರೆದುಕೊಂಡಿದ್ದಾರೆ. [ಉಪ್ಪಿ Unknownu ನಾನೇಶ್ವರನಾದ ಟೀಸರ್ ನೋಡಿ]


ಇನ್ನೂ ಕೆಲ ಉಪೇಂದ್ರ ಅಭಿಮಾನಿಗಳು ಕಟೌಟ್ ಗೆ ಹಾರ ಹಾಕುವುದು ಹೇಗೆ, ಹಾಲಿನ ಅಭಿಷೇಕ ಮಾಡುವುದು ಹೇಗೆ ಅಂತ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಉಲ್ಟಾ ಕಟೌಟ್ ನಿಂದ ಮೆಜೆಸ್ಟಿಕ್ ನ ಎಲ್ಲರ ಗಮನ ಸೆಳೆಯುತ್ತಿರುವ ಉಪ್ಪಿ, ಸಿನಿಮಾದಲ್ಲೂ ಇಂತಹ ತಲೆಕೆಳಗಾಗುವ ವಿಷಯಗಳನ್ನ ತೋರಿಸಿದ್ದಾರಾ? ಅದಕ್ಕೆ ಉತ್ತರ ಆಗಸ್ಟ್ 14 ರಂದು ಸಿಗಲಿದೆ.

English summary
Upendra directorial and starrer Kannada Movie 'Uppi-2' is all set to release on August 14th. Meanwhile, an upside down cut-out of Upendra is placed in Nartaki Theatre, Bengaluru, which is the main theatre for 'Uppi-2'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada