»   » 'ವಾಸ್ತುಪ್ರಕಾರ' ಭಟ್ರಿಗೆ 'ಬಂಪರ್' ಕಲೆಕ್ಷನ್

'ವಾಸ್ತುಪ್ರಕಾರ' ಭಟ್ರಿಗೆ 'ಬಂಪರ್' ಕಲೆಕ್ಷನ್

Posted By:
Subscribe to Filmibeat Kannada

'ವಾಸ್ತುಪ್ರಕಾರ' ಚಿತ್ರದ ಬಗ್ಗೆ ಅತಿಯಾದ ನಿರೀಕ್ಷೆಯನ್ನ ಹೊತ್ತು ರಿಲೀಸ್ ಆದ ಮೊದಲ ದಿನ ಮೊದಲ ಶೋ ನೋಡಿದ ಪ್ರೇಕ್ಷಕರಿಗೆ ನಿರಾಸೆ ಆಗಿತ್ತು. ಹೀಗಂತ ಗಾಂಧಿನಗರದ ಮೂಲೆ ಮೂಲೆಯಲ್ಲಿ ಸುದ್ದಿಯಾಗಿತ್ತು. ವಿಮರ್ಶಕರಂತೂ ತರಹೇವಾರಿ ವಿಮರ್ಶೆಗಳನ್ನ ನೀಡಿದ್ದಾರೆ. ಒಬ್ಬರಿಗೆ ಸಿನಿಮಾ ಇಷ್ಟವಾದ್ರೆ, ಇನ್ನೊಬ್ಬರಿಗೆ ಅಷ್ಟಕಷ್ಟೆ.

ಸಾಮಾಜಿಕ ಜಾಲತಾಣಗಳಲ್ಲಿ 'ವಾಸ್ತುಪ್ರಕಾರ' ಚಿತ್ರದ ಬಗ್ಗೆ ಹುಟ್ಟಿಕೊಂಡಿರುವ ಗಾದೆ ಮಾತು 'ವಾಸ್ತು ಇಲ್ಲದೆ ಮನೆ ಕಟ್ಟುವುದು; ಕಥೆ ಇಲ್ಲದೆ ಸಿನಿಮಾ ಮಾಡುವುದು ಒಂದೇ' ಸಿಕ್ಕಾಪಟ್ಟೆ ಫೇಮಸ್ ಆಗ್ಬಿಟ್ಟಿದೆ. ['ವಾಸ್ತುಪ್ರಕಾರ' ಪತ್ರಿಕೆಗಳ ವಿಮರ್ಶಾ ನೋಟ]


Kannada movie Vaastu Prakaara collects 3.78 crore in 3 days

'ಹೊಗಳದ' ಭಟ್ರ ಕ್ಯಾಂಪಿನವರು 'ವಾಸ್ತುಪ್ರಕಾರ' ಸಿನಿಮಾ ಬಗ್ಗೆ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ. ಹಾಗಂದ ಮಾತ್ರಕ್ಕೆ 'ವಾಸ್ತುಪ್ರಕಾರ' ಸಿನಿಮಾ ಫ್ಲಾಪ್ ಆಗಿದೆ ಅಂತಲ್ಲ. ಯಾವ ಟಾಪ್ ಸ್ಟಾರ್ ಸಿನಿಮಾಕ್ಕಿಂತಲೂ 'ವಾಸ್ತುಪ್ರಕಾರ' ಕಲೆಕ್ಷನ್ ನಲ್ಲಿ ಹಿಂದೆ ಬಿದ್ದಿಲ್ಲ.


ಬಿಡುಗಡೆಯಾದ ಮೂರೇ ದಿನದಲ್ಲಿ ಮೂರು ಕೋಟಿಗೂ ಹೆಚ್ಚು ದುಡ್ಡು ಬಾಚಿ 'ವಾಸ್ತುಪ್ರಕಾರ' ಕಲೆಕ್ಷನ್ ನಲ್ಲಿ ದಾಖಲೆ ಬರೆದಿದೆ. ರಾಜ್ಯದಾದ್ಯಂತ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದ 'ವಾಸ್ತುಪ್ರಕಾರ' ಮೂರು ದಿನಗಳಲ್ಲಿ ಬರೋಬ್ಬರಿ ಮೂರು ಕೋಟಿ ಎಪ್ಪತ್ತೆಂಟು ಲಕ್ಷ ರೂಪಾಯಿ ಲೂಟಿ ಮಾಡಿದೆ. [ಚಿತ್ರ ವಿಮರ್ಶೆ: ಯೋಗರಾಜ್ ಭಟ್ ರ 'ಸರಳ' ವಾಸ್ತು]


Kannada movie Vaastu Prakaara collects 3.78 crore in 3 days

ಹಾಗಂತ ಖುದ್ದು 'ವಾಸ್ತುಪ್ರಕಾರ' ಚಿತ್ರದ ನಾಯಕಿ ಪಾರುಲ್ ಯಾದವ್ ಟ್ವೀಟ್ ಮಾಡಿದ್ದಾರೆ.ಅಲ್ಲಿಗೆ, ಯಾರೇನೇ ಅಂದರೂ, ಊರೇ ಕೂಗಾಡಿದರೂ, ನನ್ನ ಕಲೆಕ್ಷನ್ ಗೇನು ಕಮ್ಮಿಯಿಲ್ಲ ಅಂತ 'ವಾಸ್ತುಪ್ರಕಾರ' ಮುನ್ನುಗುತ್ತಿದೆ. ಭಟ್ರಿಗೆ ಯೋಗಾಯೋಗ ಚೆನ್ನಾಗಿದೆ ಅಂತರ್ಥ.


ನವರಸ ನಾಯಕ ಜಗ್ಗೇಶ್ ತಮ್ಮ ಎಂದಿನ ಶೈಲಿಯಲ್ಲೇ ನೀಡಿರುವ ಕಾಮಿಡಿ ಕಚಗುಳಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಇನ್ನೂ ಅನಂತ್ ನಾಗ್-ಸುಧಾರಾಣಿ ಜೋಡಿಯ ಜುಗಲ್ಬಂದಿ ನೋಡುವುದಕ್ಕಂತಲೇ ಪ್ರೇಕ್ಷಕರು ಚಿತ್ರಮಂದಿರಗಳಿಗೆ ನುಗ್ಗುತ್ತಿದ್ದಾರೆ. ಹೀಗಿರುವಾಗ ಬೇರೆಯವರಿಗೆ ಬೇಸರ...ಕಾತರ...ಯಾಕೆ..? (ಫಿಲ್ಮಿಬೀಟ್ ಕನ್ನಡ)


English summary
Yogaraj Bhat directorial Kannada movie 'Vaastu Prakaara' 3 days collection report is revealed. Jaggesh and Rakshit Shetty starrer movie collects 3.78 crore in 3 days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada