»   » 50ರ ಸಂಭ್ರಮದಲ್ಲಿ ಹ್ಯಾಟ್ರಿಕ್ ಹೀರೋ 'ವಜ್ರಕಾಯ'

50ರ ಸಂಭ್ರಮದಲ್ಲಿ ಹ್ಯಾಟ್ರಿಕ್ ಹೀರೋ 'ವಜ್ರಕಾಯ'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಎ.ಹರ್ಷ ಕಾಂಬಿನೇಷನ್ ನ ಹಿಟ್ ಚಿತ್ರ 'ವಜ್ರಕಾಯ' ಇದೀಗ ಭರ್ಜರಿ 50 ದಿನಗಳನ್ನು ಪೂರೈಸಿದೆ. 50 ದಿನ ಪೂರೈಸಿರುವ ಸಂಭ್ರಮದಲ್ಲಿರುವ 'ವಜ್ರಕಾಯ' ಚಿತ್ರಕ್ಕೆ ಶಿವಣ್ಣ ಅಭಿಮಾನಿಗಳು ಟ್ವಿಟ್ಟರ್ ಮೂಲಕ ಶುಭ ಹಾರೈಸಿದ್ದಾರೆ.

ನಿರ್ದೇಶಕ ಎ.ಹರ್ಷ ಆಕ್ಷನ್-ಕಟ್ ಹೇಳಿರುವ 'ಭಜರಂಗಿ' ಹಿಟ್ ನಂತರ ಮತ್ತೊಮ್ಮೆ 'ವಜ್ರಕಾಯ' ಚಿತ್ರದ ಮೂಲಕ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಶಿವರಾಜ್ ಕುಮಾರ್ ಈಗಲೂ ತುಂಬಾ ಎನರ್ಜಟಿಕ್ ಹೀರೋ ಅಂದರೂ ತಪ್ಪಾಗ್ಲಿಕ್ಕಿಲ್ಲಾ.[ಚಿತ್ರವಿಮರ್ಶೆ ; ಶಿವ ಭಕ್ತರಿಗೆ 'ವಜ್ರಕಾಯ' ನೋ ಪ್ರಾಬ್ಲಂ.!]

Shiva Rajkumar

50 ರ ಸಂಭ್ರಮದಲ್ಲಿರುವ 'ವಜ್ರಕಾಯ' ಚಿತ್ರತಂಡಕ್ಕೆ ಅಭಿಮಾನಿಗಳು ಮೈಕ್ರೋಬ್ಲಾಗಿಂಗ್ ತಾಣವಾದ ಟ್ವಿಟ್ಟರ್ ನಲ್ಲಿ ಭಾರಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಅಪ್ಪಟ ತಾಯಿ ಮಗನ ಸೆಂಟಿಮೆಂಟ್ ಚಿತ್ರವಾದ 'ವಜ್ರಕಾಯ' ಚಿತ್ರದಲ್ಲಿ ಶಿವರಾಜ್ ಕುಮಾರ್ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದರು. ವಯಸ್ಸು 52 ಆದರೂ ಈಗಲೂ 25 ರ ಯುವಕರನ್ನು ನಾಚಿಸುವಂತಿರುವ ಶಿವಣ್ಣನ ಅದ್ಭುತ ಎನರ್ಜಿಗೆ ಪ್ರೇಕ್ಷಕರು ಮನಸೋಲಲೇಬೇಕು.[ಸಾಗರೋತ್ತರ ದೇಶಕ್ಕೆ ಹಾರಿದ 'ವಜ್ರಕಾಯ' ಶಿವಣ್ಣ]

ವಿಶೇಷವಾಗಿ 'ವಜ್ರಕಾಯ' ಚಿತ್ರದಲ್ಲಿ ಶುಭ್ರ ಅಯ್ಯಪ್ಪ. ಕಾರುಣ್ಯ ರಾಮ್, ನಭಾ ನಟೇಶ್, ಮುಂತಾದ ಮೂವರು ನಾಯಕಿಯರಿದ್ದು, ನಟನೆಯಲ್ಲಿ ಒಬ್ಬರಿಗಿಂತ ಒಬ್ಬರನ್ನು ಮೀರಿಸುವಂತಿದ್ದರು.

ಒಟ್ಟಾರೆ ಇಡೀ ಕುಟುಂಬ ನೋಡುವಂತಹ 'ವಜ್ರಕಾಯ' ಚಿತ್ರಕ್ಕೆ ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಒಂದಕ್ಕಿಂತ ಒಂದು ಹಾಡುಗಳು ಹಿಟ್ ಲಿಸ್ಟ್ ಗೆ ಸೇರಿಕೊಂಡಿವೆ. ಜೊತೆಗೆ ಚಿಕ್ಕಣ್ಣ, ಸಾಧುಕೋಕಿಲ, ಅವರ ಕಾಮಿಡಿ ಪಂಚ್ ಗಳಿಗೆ ಕಾಮಿಡಿ ಪ್ರಿಯರು ಎಂಜಾಯ್ ಮಾಡಿದ್ದಂತೂ ನಿಜ.[ಶಿವಣ್ಣ ಅಭಿನಯದ ವಜ್ರಕಾಯ ಧ್ವನಿಸುರುಳಿ ವಿಮರ್ಶೆ]

ಮಾತ್ರವಲ್ಲದೇ ಪರಭಾಷಾ ನಟರು 'ವಜ್ರಕಾಯ' ಚಿತ್ರದಲ್ಲಿ ಶಿವಣ್ಣ ಜೊತೆ ಹೆಜ್ಜೆ ಹಾಕಿದ್ದು, ಜೊತೆಗೆ ವಿದೇಶದಲ್ಲೂ ತೆರೆ ಕಂಡಿರುವುದು, ಈ ಚಿತ್ರದ ಮತ್ತೊಂದು ವಿಶೇಷ. ಒಟ್ನಲ್ಲಿ ಈ ಎಲ್ಲಾ ವಿಶೇಷಗಳಿಂದ ಹ್ಯಾಟ್ರಿಕ್ ಹೀರೋ ಅವರ 'ವಜ್ರಕಾಯ' ಚಿತ್ರ 50 ದಿನ ಪೂರೈಸಿ ದಾಖಲೆಯತ್ತ ಮುನ್ನುಗ್ಗುತ್ತಿದೆ.

English summary
Kannada movie 'Vajrakaya' Celebrate the 50 Days. Kannada actor Shiva Rajkumar, Actress Karunya Ram, Nabha Natesh. The movie is directed by A.Harsha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada