»   » ಸಾಗರೋತ್ತರ ದೇಶಕ್ಕೆ ಹಾರಿದ 'ವಜ್ರಕಾಯ' ಶಿವಣ್ಣ

ಸಾಗರೋತ್ತರ ದೇಶಕ್ಕೆ ಹಾರಿದ 'ವಜ್ರಕಾಯ' ಶಿವಣ್ಣ

Posted By:
Subscribe to Filmibeat Kannada

'ಭಜರಂಗಿ' ಚಿತ್ರದ ಯಶಸ್ಸಿನ ನಂತರ ಎ ಹರ್ಷ ಶಿವಣ್ಣ ಕಾಂಬಿನೇಷನ್ ನಲ್ಲಿ ಬಂದ 'ವಜ್ರಕಾಯ' ಚಿತ್ರ ಭರ್ಜರಿ ಯಶಸ್ಸು ಗಳಿಸಿರುವ ವಿಚಾರ ನಿಮಗೆ ತಿಳಿದೇ ಇದೆ. ಬರೀ ಕರ್ನಾಟಕದಲ್ಲಿ ಮಾತ್ರ ಸೌಂಡ್ ಮಾಡುತ್ತಿದ್ದ 'ವಜ್ರಕಾಯ' ಇದೀಗ ಪರದೇಶದಲ್ಲೂ ಸುದ್ದಿ ಮಾಡಲು ಹೊರಟಿದೆ.

ಆಗಸ್ಟ್ 9 ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ನ ವಿಲೆಜ್ ಸಿನಿಮಾಸ್, ವೆರ್ಲ್ ಬೀ ಪ್ಲಾಜಾ ದಲ್ಲಿ 3 ಗಂಟೆಗೆ 'ವಜ್ರಕಾಯ' ಚಿತ್ರ ಪ್ರದರ್ಶನ ಕಾಣಲಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯ ವಿದೇಶದಲ್ಲೂ ಪಸರಿಸಲಿದೆ. [ಚಿತ್ರವಿಮರ್ಶೆ ; ಶಿವ ಭಕ್ತರಿಗೆ 'ವಜ್ರಕಾಯ' ನೋ ಪ್ರಾಬ್ಲಂ.!]


Kannada movie 'Vajrakaya' to release in Melborne, Australia

ಎರಡನೇ ಬಾರಿಗೆ ನಿರ್ದೇಶಕ ಹರ್ಷ ಹಾಗೂ ಶಿವಣ್ಣ ಅವರು ವೀರ ಹನುಮಂತನ ಪಾದಕ್ಕೆರಗುತ್ತಿದ್ದು, 'ಭಜರಂಗಿ' ಯಂತೆ, 'ವಜ್ರಕಾಯ' ಚಿತ್ರ ಕೂಡ ಬ್ಲಾಕ್ ಬಾಸ್ಟರ್ ಹಿಟ್ ಪಡೆದುಕೊಂಡಿದೆ. [ಶಿವಣ್ಣ 'ವಜ್ರಕಾಯ' ಹಾಡುಗಳಿಗೂ ಬಂದ್ ಬಿಸಿ]


ಸ್ಪೆಷಲ್ ಹಾಡೊಂದಕ್ಕೆ ಟಾಲಿವುಡ್, ಕಾಲಿವುಡ್ ಸೇರಿದಂತೆ ಮಾಲಿವುಡ್, ನಟರು ಹೆಜ್ಜೆ ಹಾಕಿದ್ದು, 'ವಜ್ರಕಾಯ' ಚಿತ್ರದ ವಿಶೇಷತೆಯಾಗಿದೆ. ಧರ್ಮ ಪಾಲನೆ ಜೊತೆಗೆ ತಾಯಿ ಸೆಂಟಿಮೆಂಟ್ ಇರುವ 'ವಜ್ರಕಾಯ' ಚಿತ್ರದಲ್ಲಿ ಶಿವಣ್ಣ ಸ್ಟೈಲಿಷ್ ಲುಕ್ ನಲ್ಲಿ ಮಿಂಚಿದ್ದರು. ['ವಜ್ರಕಾಯ' ಚಿತ್ರದಲ್ಲಿ ಶಿವಣ್ಣನ ಕಮಾಲ್ ನೋಡಿದ್ದೀರಾ..]ಚಿತ್ರದಲ್ಲಿ ನಭಾ ನಟೇಶ್, ಶುಭ್ರ ಅಯ್ಯಪ್ಪ, ಮತ್ತು ಕಾರುಣ್ಯ ರಾಮ್, ಈ ಮೂವರು ನಾಯಕಿಯರು ಶಿವರಾಜ್ ಕುಮಾರ್ ಜೊತೆ ಡ್ಯುಯೆಟ್ ಹಾಡಿದ್ದರು. ಮಾತ್ರವಲ್ಲದೇ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿರುವ 50 ನೇ ಚಿತ್ರ ಇದಾಗಿದ್ದು, ಒಟ್ಟಾರೆ ಹೇಳಬೇಕೆಂದರೆ ಗಾಂಧಿನಗರದ ಜನರನ್ನು 'ವಜ್ರಕಾಯ' ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ ಅಂದರೆ ತಪ್ಪಾಗಲಾರದು.


ಅದೇನೆ ಇರಲಿ ಕರ್ನಾಟಕ ಆಯ್ತು ಇದೀಗ ವಿದೇಶದಲ್ಲೂ 'ವಜ್ರಕಾಯ' ಕಮಾಲ್ ಮಾಡುವುದು ಖಂಡಿತ.


English summary
Shiva Raj Kumar starrer 'Vajrakaya' is all set to release in Melborne, Austalia. The movie is directed by A.Harsha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada