»   » 'ವಾಸ್ಕೋಡಿಗಾಮ' ಚಿತ್ರಕ್ಕೆ ವಿದ್ಯಾರ್ಥಿಯೇ ಪ್ರೊಡ್ಯೂಸರ್

'ವಾಸ್ಕೋಡಿಗಾಮ' ಚಿತ್ರಕ್ಕೆ ವಿದ್ಯಾರ್ಥಿಯೇ ಪ್ರೊಡ್ಯೂಸರ್

Posted By:
Subscribe to Filmibeat Kannada

ವಿದ್ಯಾರ್ಥಿ ಸಮೂಹದಲ್ಲಿ ಹೆಚ್ಚು ಟಾಕ್ ಕ್ರಿಯೇಟ್ ಮಾಡಿರುವ ಸಿನಿಮಾ 'ವಾಸ್ಕೋಡಿಗಾಮ'. ಇಂದಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಹೆಣೆದಿರುವ 'ವಾಸ್ಕೋಡಿಗಾಮ' ಚಿತ್ರಕಥೆ ಯುವಕರನ್ನ ಹೆಚ್ಚಾಗಿ ಆಕರ್ಷಿಸುತ್ತಿದೆ.

ಈಗಾಗಲೇ 200 ಕಾಲೇಜುಗಳಲ್ಲಿ 'ವಾಸ್ಕೋಡಿಗಾಮ' ಟ್ರೈಲರ್ ಬಿಡುಗಡೆಯಾಗಿತ್ತು. ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರುತ್ತಿದೆ. ಆದ್ರೆ ವಿಷಯ ಅದಲ್ಲ. [200 ಕಾಲೇಜುಗಳಲ್ಲಿ 'ವಾಸ್ಕೋಡಗಾಮ'ನ ಟ್ರೈಲರ್]

vascodigama

ಶಿಕ್ಷಣ ವ್ಯವಸ್ಥೆ ಮತ್ತು ಕಾಲೇಜು ವಿದ್ಯಾರ್ಥಿಗಳ ಮನಸ್ಥಿತಿ ಬಗ್ಗೆ ತಯಾರಾಗಿರುವ 'ವಾಸ್ಕೋಡಿಗಾಮ' ಚಿತ್ರಕ್ಕೆ ಕಾಲೇಜು ವಿದ್ಯಾರ್ಥಿಯೇ ನಿರ್ಮಾಪಕ ಅನ್ನೋದು ಈಗ ಬಹಿರಂಗವಾಗಿರುವ ಸಂಗತಿ. [ರವಿಚಂದ್ರನ್ ಮಾತಿಗೆ ತಲೆಬಾಗುತ್ತಾ 'ವಾಸ್ಕೋಡಿಗಾಮ' ತಂಡ?]

ಹೌದು, 'ವಾಸ್ಕೋಡಿಗಾಮ' ಚಿತ್ರಕ್ಕೆ ಅಶ್ವಿನ್ ವಿಜಯ್ ಕುಮಾರ್ ಎಂಬ ಎಂ.ಬಿ.ಎ ಸ್ಟುಡೆಂಟ್ ಬಂಡವಾಳ ಹಾಕಿದ್ದಾರೆ. ಇತ್ತೀಚೆಗಷ್ಟೆ ಎಂ.ಬಿ.ಎ ವ್ಯಾಸಂಗ ಕಂಪ್ಲೀಟ್ ಮಾಡಿರುವ ಅಶ್ವಿನ್, ಅಷ್ಟು ಬೇಗ ಪ್ರೊಡ್ಯೂಸರ್ ಆಗಿದ್ದಾರೆ.

vascodigama

ಕಾಲೇಜ್ ನಲ್ಲಿ ಓದುವಾಗಲೇ, ಉತ್ತಮ ಚಿತ್ರ ನಿರ್ಮಾಣ ಮಾಡಬೇಕೆನ್ನುವುದು ಅಶ್ವಿನ್ ಆಸೆಯಾಗಿತ್ತು. ಇನ್ನೂ 'ವಾಸ್ಕೋಡಿಗಾಮ' ಚಿತ್ರದ ನಿರ್ದೇಶಕ ಮಧುಚಂದ್ರ ಕೂಡ ನಿರ್ಮಾಪಕರ ಹುಡುಕಾಟದಲ್ಲಿದ್ದರು. 'ವಾಸ್ಕೋಡಿಗಾಮ' ಕಾನ್ಸೆಪ್ಟ್ ಅಶ್ವಿನ್ ಅವರ ವಯಸ್ಸಿಗೆ ತಕ್ಕನಾಗಿದ್ದಿದ್ದರಿಂದ, ಕಥೆ ಅವರಿಗೆ ಇಷ್ಟವಾಯ್ತಂತೆ. ಹಾಗಾಗಿ ನಿರ್ಮಾಪಕರಾದರು ಅಶ್ವಿನ್. [ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ 'ವಾಸ್ಕೋಡಿಗಾಮ' ಯಾರು?]

'ವಾಸ್ಕೋಡಿಗಾಮ' ಚಿತ್ರದಲ್ಲಿ ನಿರ್ಮಾಣದ ಜೊತೆ ಅಶ್ವಿನ್ ಬಣ್ಣ ಕೂಡ ಹಚ್ಚಿದ್ದಾರೆ. ಲೆಕ್ಚರರ್ ಆಗಿ ಕಿಶೋರ್ ಕಾಣಿಸಿಕೊಂಡಿದ್ದರೆ, ಮುಖ್ಯ ಭೂಮಿಕೆಯಲ್ಲಿ ಪಾರ್ವತಿ ನಾಯರ್ ಇದ್ದಾರೆ. ಈಗಾಗಲೇ ಸಖತ್ ಸೌಂಡ್ ಮಾಡಿರುವ 'ವಾಸ್ಕೋಡಿಗಾಮ' ಸದ್ಯದಲ್ಲೇ ರಿಲೀಸ್ ಆಗಲಿದೆ.

English summary
Kannada Actor Kishore starrer 'Vascodigama' is all set to release shortly. Interesting news is that 'Vascodigama' is produced by MBA Student Ashwin Vijaykumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada