»   » 'ವಾಸ್ಕೋಡಿಗಾಮ' ಚಿತ್ರಕ್ಕೆ ಕಾಡ್ತಿದೆ ಥಿಯೇಟರ್ ಸಮಸ್ಯೆ

'ವಾಸ್ಕೋಡಿಗಾಮ' ಚಿತ್ರಕ್ಕೆ ಕಾಡ್ತಿದೆ ಥಿಯೇಟರ್ ಸಮಸ್ಯೆ

Posted By:
Subscribe to Filmibeat Kannada

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಸೆಪ್ಟೆಂಬರ್ 11 ಅಂದ್ರೆ ಮುಂದಿನ ವಾರ 'ವಾಸ್ಕೋಡಿಗಾಮ' ಚಿತ್ರ ಬಿಡುಗಡೆ ಆಗ್ಬೇಕಿತ್ತು. ಆದ್ರೆ, ಚಿತ್ರಮಂದಿರಗಳ ಕೊರತೆ ಇರುವ ಕಾರಣ 'ವಾಸ್ಕೋಡಿಗಾಮ' ಚಿತ್ರ ಬಿಡುಗಡೆ ಒಂದು ತಿಂಗಳು ಮುಂದಕ್ಕೆ ಹೋಗಿದೆ.

ಕಿಶೋರ್ ಮತ್ತು ಪಾರ್ವತಿ ನಾಯರ್ ಅಭಿನಯದ 'ವಾಸ್ಕೋಡಿಗಾಮ' ಚಿತ್ರ ಬಿಡುಗಡೆಗೆ ಈಗಾಗಲೇ ಸಕಲ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ, ಈ ವಾರ 'RX ಸೂರಿ' ಸೇರಿದಂತೆ ಒಟ್ಟು ನಾಲ್ಕು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ['ವಾಸ್ಕೋಡಿಗಾಮ' ಚಿತ್ರಕ್ಕೆ ವಿದ್ಯಾರ್ಥಿಯೇ ಪ್ರೊಡ್ಯೂಸರ್]

vascodigama

ಮುಂದಿನ ವಾರ ಕೂಡ ಚಿತ್ರ ಬಿಡುಗಡೆಗಾಗಿ ಸಿನಿಮಾಗಳು ಕ್ಯೂ ನಲ್ಲಿವೆ. ಈ ಸಮಯದಲ್ಲಿ 'ವಾಸ್ಕೋಡಿಗಾಮ' ರಿಲೀಸ್ ಮಾಡುವುದು ಕಷ್ಟ ಅಂತ ವಿತರಕರಾದ ಜಯಣ್ಣ ಮತ್ತು ಭೋಗೇಂದ್ರ ಹೇಳಿದ್ದಾರಂತೆ.

ಅವರ ಮಾತಿಗೆ ಮನ್ನಣೆ ನೀಡಿರುವ 'ವಾಸ್ಕೋಡಿಗಾಮ' ಚಿತ್ರತಂಡ ಒಂದು ತಿಂಗಳು ರಿಲೀಸ್ ಡೇಟ್ ನ ಪೋಸ್ಟ್ ಪೋನ್ ಮಾಡಿದೆ. ಹಾಗಂತ ಚಿತ್ರ ನಿರ್ದೇಶಕ ಮಧುಚಂದ್ರ ತಿಳಿಸಿದರು. [ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ 'ವಾಸ್ಕೋಡಿಗಾಮ' ಯಾರು?]

ಟ್ರೈಲರ್ ಮತ್ತು ಹಾಡುಗಳಿಂದ 'ವಾಸ್ಕೋಡಿಗಾಮ' ಯುವಕರನ್ನ ಅಟ್ರ್ಯಾಕ್ಟ್ ಮಾಡಿದೆ. ಇಂದಿನ ಶಿಕ್ಷಣ ವ್ಯವಸ್ಥೆ ಬಗ್ಗೆ 'ವಾಸ್ಕೋಡಿಗಾಮ' ಚಿತ್ರಕಥೆ ಹೆಣೆಯಲಾಗಿದೆ.

English summary
Kannada Actor Kishore starrer 'Vascodigama' was supposed to release on September 11th. But due the shortage of theaters 'Vascodigama' release has been postponed for a month.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada