»   » ಯಜಮಾನನ ಜೊತೆ ಹುಚ್ಚ ಮತ್ತೆ ಥಿಯೇಟರಿಗೆ ಬರುತ್ತಿದ್ದಾನೆ!

ಯಜಮಾನನ ಜೊತೆ ಹುಚ್ಚ ಮತ್ತೆ ಥಿಯೇಟರಿಗೆ ಬರುತ್ತಿದ್ದಾನೆ!

Posted By:
Subscribe to Filmibeat Kannada

ಒಂದು ಕಾಲದಲ್ಲಿ ಸಖತ್ ಫೇಮಸ್ ಆಗಿದ್ದ 20 ಕನ್ನಡ ಚಿತ್ರಗಳ ಸರದಾರ ನಿರ್ಮಾಪಕ ರೆಹಮಾನ್ ಅವರ ಸೂಪರ್ ಹಿಟ್ ಚಿತ್ರಗಳಾದ 'ಯಜಮಾನ' ಹಾಗೂ 'ಹುಚ್ಚ' ಚಿತ್ರಗಳು ಮತ್ತೊಮ್ಮೆ ರೀ-ರಿಲೀಸ್ ಆಗುತ್ತಿವೆ.

ಡಾ.ವಿಷ್ಣುವರ್ಧನ್ ಅವರು ದ್ವಿ ಪಾತ್ರದಲ್ಲಿ ನಟಿಸಿದ್ದ 'ಯಜಮಾನ' ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಜೊತೆಗೆ ಕಿಚ್ಚ ಸುದೀಪ್ ರೇಖಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ 'ಹುಚ್ಚ' ಚಿತ್ರ ಸುದೀಪ್ ಅವರನ್ನು ಎತ್ತಲೋ ಕೊಂಡೊಯ್ದಿತ್ತು.

ಶಶಿಕುಮಾರ್, ಅಭಿಜಿತ್, ಪ್ರೇಮಾ ಹಾಗೂ ಡಾ.ವಿಷ್ಣುವರ್ಧನ್ ಡಬಲ್ ರೋಲ್ ನಲ್ಲಿ ಮಿಂಚಿದ್ದ 'ಯಜಮಾನ' ಚಿತ್ರ ತಮಿಳಿನ 'ವಾನತ್ತೈ ಪೋಲ' ನ ರಿಮೇಕ್ ಆಗಿತ್ತು. ಇನ್ನು ಈ ಸಿನಿಮಾವನ್ನು 14 ವರ್ಷಗಳ ಹಿಂದೆ ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ಸಿನಿಮಾ ಸುಮಾರು 35 ಕೋಟಿ ರೂಪಾಯಿ ಗಳಿಸಿತ್ತು. ಜೊತೆಗೆ ಹುಬ್ಬಳ್ಳಿ ಹಾಗೂ ನಮ್ಮ ಬೆಂಗಳೂರಿನಲ್ಲಿ ಸಿಲ್ವರ್ ಜ್ಯುಬಿಲಿಯನ್ನು ಆಚರಿಸಿಕೊಂಡಿತ್ತು. ನಿರ್ಮಾಪಕ ರೆಹಮಾನ್ ಅವರು ಚಿತ್ರದ ರಿಮೇಕ್ ರೈಟ್ಸ್ ಪಡೆದುಕೊಳ್ಳಲು 12 ಲಕ್ಷ ವೆಚ್ಚವನ್ನು ಭರಿಸಿದ್ದರು.

ನಿರ್ದೇಶಕ ಓಂ ಪ್ರಕಾಶ್ ರಾವ್ ಆಕ್ಷನ್-ಕಟ್ ಹೇಳಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗು ರೇಖಾ ಅಭಿನಯದ 'ಹುಚ್ಚ' ಚಿತ್ರ ತಮಿಳಿನ 'ಸೇತು'ವಿನ (ವಿಕ್ರಂ ನಟಿಸಿದ್ದರು) ರಿಮೇಕ್ ಆಗಿದ್ದು, ರಿಮೇಕ್ ಹಕ್ಕಿಗಾಗಿ ಹೆಚ್ಚಿನ ಹಣವನ್ನು ನಿರ್ಮಾಪಕರು ಪಾವತಿ ಮಾಡಿದ್ದರು. ತದನಂತರ ಚಿತ್ರ ತೆರೆ ಕಂಡು ಹಿಸ್ಟರಿ ಕ್ರಿಯೇಟ್ ಮಾಡಿರುವುದಲ್ಲದೇ ಸುಮಾರು 20 ಕೋಟಿ ಹಣವನ್ನು ಬಾಚಿಕೊಂಡಿತ್ತು. ಮುಂದೆ ಓದಿ..

'ಯಜಮಾನ' ಟಿ.ವಿ ಸ್ಯಾಟಲೈಟ್ ರೇಟ್

ಡಾ.ವಿಷ್ಣು ಅವರ ಯಜಮಾನ ಚಿತ್ರ ಟಿ.ವಿ ಸ್ಯಾಟಲೈಟ್ ರೈಟ್ಸ್ ರೇಟ್ ಸುಮಾರು 7 ಲಕ್ಷಕ್ಕೆ ಸೇಲ್ ಆಗಿತ್ತಾದರೂ ರಾಕ್ ಲೈನ್ ವೆಂಕಟೇಶ್ ಅವರು ಉದಯ ಟಿ.ವಿಗೆ ಸುಮಾರು 70 ಲಕ್ಷಕ್ಕೆ ಸೋಲ್ಡ್ ಔಟ್ ಮಾಡಿದ್ದಾರೆ. ಯಜಮಾನ ಚಿತ್ರದ ಆಡಿಯೋ ವನ್ನು ಆನಂದ್ ಆಡಿಯೋ ಪಡೆದುಕೊಂಡಿದ್ದು, ಸುಮಾರು 8 ಲಕ್ಷಕ್ಕೆ ಸೋಲ್ಡ್ ಔಟ್ ಆಗಿ ಈಗಲೂ ಹಣ ಗಳಿಸುತ್ತಿದೆ.

'ಹುಚ್ಚ' ಚಿತ್ರದ ಟಿ.ವಿ ರೇಟ್

ನಿರ್ದೇಶಕ ಓಂ ಪ್ರಕಾಶ್ ರಾವ್ ಆಕ್ಷನ್-ಕಟ್ ಹೇಳಿದ್ದ ಕಿಚ್ಚ ಸುದೀಪ್ ಹಾಗೂ ರೇಖಾ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಹುಚ್ಚ ಚಿತ್ರದ ಸ್ಯಾಟಲೈಟ್ ಹಕ್ಕನ್ನು ಉದಯ ಟಿ.ವಿ ಸುಮಾರು 5 ಲಕ್ಷಕ್ಕೆ ಖರೀದಿಸಿತ್ತು.

DTS ಟೆಕ್ನಿಕಲ್ ಗೆ ತಗುಲಿದ ಖರ್ಚು

ಸಾಧಾರಣ 5 ವರ್ಷಗಳ ನಂತರ ಈ ಎರಡು ಚಿತ್ರಗಳ ನಿಯಂತ್ರಣ ಮಾಡುವ ಹಕ್ಕು ನಿರ್ಮಾಪಕ ರೆಹಮಾನ್ ಅವರ ಕೈಯಲ್ಲಿದ್ದುದ್ದರಿಂದ, DTS ಎಫೆಕ್ಟ್ ಹಾಗೂ ಸ್ಯಾಟಲೈಟ್ ಸ್ಕ್ರೀನ್ ಗೆ ಹೊಂದಿಕೊಳ್ಳುವ ಇತರ ತಾಂತ್ರಿಕ ಹೊಂದಾಣಿಕೆಗಳನ್ನು ಮಾಡಲು ಹಾಗೂ ಹೊಸ ತಾಂತ್ರಿಕ ಸೇರ್ಪಡೆಗಳಿಗೆ ಅವರು ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿದ್ದರು.

ಸಂಗೀತ ನಿರ್ದೇಶಕ ರಾಜೇಶ್ ರಾಮಾನಾಥ್ ಜೊತೆ ಚರ್ಚೆ

ಸಂಗೀತ ನಿರ್ದೇಶಕ ರಾಜೇಶ್ ರಾಮಾನಾಥ್ ಹಾಗೂ ನಿರ್ಮಾಪಕ ರೆಹಮಾನ್ ಅವರು ಚಿತ್ರದ ಟಿ.ವಿ ರೇಟ್ ಬಗ್ಗೆ 'ಸ್ಥಾಯಿ ಸ್ಟುಡಿಯೋದಲ್ಲಿ', ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ಎರಡು ಚಿತ್ರಗಳಿಗೂ ಸೇರಿಸಿ ಸುಮಾರು 8 ಲಕ್ಷ ವೆಚ್ಚದಲ್ಲಿ ಹೆಚ್ಚಿನ ತಾಂತ್ರಿಕ ವ್ಯವಸ್ಥೆಗೆ ತಾವು ಸಹಾಯ ಮಾಡುವುದಾಗಿ ಸಂಗೀತ ನಿರ್ದೇಶಕರು ಭರವಸೆ ನೀಡಿದ್ದರು.

ವಿಷ್ಣುವರ್ಧನ್ ಅವರಿಗೆ ಹಣ ನೀಡಿರಲಿಲ್ಲ

'ಯಜಮಾನ' ಚಿತ್ರದ ಶೂಟಿಂಗ್ ನಿಂದ ಹಿಡಿದು ಡಬ್ಬಿಂಗ್ ಆಗುವವರೆಗೂ ಡಾ.ವಿಷ್ಣು ಅವರು ನಿರ್ಮಾಪಕ ರೆಹಮಾನ್ ಅವರಲ್ಲಿ ಪೇಮೆಂಟ್ ಬಗ್ಗೆ ಒಂದು ಮಾತು ಆಡಿರಲಿಲ್ಲವಂತೆ. ಅಷ್ಟು ಹೃದಯ ವೈಶಾಲ್ಯ ವನ್ನು ಡಾ.ವಿಷ್ಣು ಅವರು ಹೊಂದಿದ್ದರು ಎಂದು ನಿರ್ಮಾಪಕ ರೆಹಮಾನ್ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

English summary
Noted producer of 20 Kannada film Rehaman of 'Yajamana' and 'Huchcha' fame is contemplating on release of the films again.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada