»   » ಹಾಲಿವುಡ್ ಗೆ ಹೋಗಿ ಬಂದ ಸ್ಯಾಂಡಲ್ ವುಡ್ 'ಇಡ್ಲಿ'

ಹಾಲಿವುಡ್ ಗೆ ಹೋಗಿ ಬಂದ ಸ್ಯಾಂಡಲ್ ವುಡ್ 'ಇಡ್ಲಿ'

Posted By:
Subscribe to Filmibeat Kannada

ಒಂದು ಸಿನಿಮಾ ರೆಡಿಯಾಗ್ಬೇಕಂದ್ರೆ, ಕಥೆಗೆ ಅವಶ್ಯಕವಾಗಿರುವ ಲೋಕೇಷನ್ ಗಳಲ್ಲಿ ಶೂಟ್ ಮಾಡ್ಬೇಕು. ಹಾಗೊಂದ್ವೇಳೆ ಅನಿವಾರ್ಯ ಇಲ್ಲದಿದ್ದರೂ ಗಿಮಿಕ್ ಗೋಸ್ಕರವಾದರೂ, ಕೆಲವರು ಫಾರಿನ್ ನಲ್ಲಿ ಚಿತ್ರೀಕರಣ ಮಾಡ್ತಾರೆ. ಬೆಂಗಳೂರಿನ ಯಾವ್ದೋ ಗಲ್ಲಿಯಲ್ಲಿ ಲವ್ ಆದ್ರೆ, ನಾಯಕ-ನಾಯಕಿ ಡ್ಯುಯೆಟ್ ಹಾಡೋದು ಫಾರಿನ್ ನಲ್ಲಿ.

ಗಾಂಧಿನಗರದ ಇಂತಹ ಪರಿಸ್ಥಿತಿಯಲ್ಲಿ ಸ್ಯಾಂಡಲ್ ವುಡ್ ನ 'ಇಡ್ಲಿ'ಯೊಂದು ಹಾಲಿವುಡ್ ನ ರೌಂಡ್ ಹಾಕಿಕೊಂಡು ಬಂದಿದೆ. ಯಾವುದಪ್ಪಾ 'ಇಡ್ಲಿ' ಅಂತ ಕನ್ ಫ್ಯೂಸ್ ಆಗ್ಬೇಡಿ, ಅಂತ ತಲೆಕೆರೆದುಕೊಳ್ಳುವ ಟೈಟಲ್ ಇಟ್ಟು ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾ 'ಯಾರಿಗೆ ಇಡ್ಲಿ'.

Kannada movie Yarige Idly shoot in Hollywood

ಯಶವಂತ್ ಸರದೇಶಪಾಂಡೆ ನಿರ್ದೇಶಿಸುತ್ತಿರುವ 'ಯಾರಿಗೆ ಇಡ್ಲಿ' ಚಿತ್ರತಂಡ, ಶೂಟಿಂಗ್ ಗಾಗಿ ವಿಶ್ವವಿಖ್ಯಾತ ಹಾಲಿವುಡ್ ಗೆ ಹೋಗಿಬಂದಿದೆ. ಹಾಗಂತ ಇಲ್ಲಿ ಯಾವುದೋ ಸಾಂಗ್ ಶೂಟಿಂಗ್ ಅಥವಾ ಡ್ಯುಯೆಟ್ ಸೀನ್ ಚಿತ್ರೀಕರಣ ಮಾಡಿಲ್ಲ. ಚಿತ್ರದ ಪ್ರಮುಖ ಸೀನ್ ವೊಂದರ ಶೂಟಿಂಗ್ ಇಲ್ಲಿ ನಡೆದಿದೆ.

ಚಿತ್ರದ ನಾಯಕ ವಿಶ್ವಜಿತ್ ಹರೀಶ, ಹಾಲಿವುಡ್ ನಲ್ಲಿ ಹೀರೋ ಆಗುವ ಕನಸು ಕಾಣುವುದರಿಂದ ಹಾಲಿವುಡ್ ಗೆ ಚಿತ್ರತಂಡ ಹಾರಿದೆ. ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವುದರ ಜೊತೆಗೆ ಹಾಲಿವುಡ್ ನೋಡಿರುವ ಬಗ್ಗೆ ವಿಶ್ವಜಿತ್ ಹರೀಶ್ ಖುಷಿಯಾಗಿದ್ದಾರೆ. ಚಿತ್ರೀಕರಣದ ಜೊತೆಗೆ ಹಾಲಿವುಡ್ ಸ್ಟುಡಿಯೋ, ಆಸ್ಕರ್ ಪ್ರಶಸ್ತಿ ನೀಡುವ ಕೊಡಕ್ ಥಿಯೇಟರ್ ಗಳನ್ನ ಸುತ್ತಿ ಬಂದಿದೆ ಚಿತ್ರತಂಡ.

ಟಾಕಿ ಪೋರ್ಷನ್ ಅಷ್ಟೇ ಇಲ್ಲಿಯವರೆಗೂ ಕಂಪ್ಲೀಟ್ ಮಾಡಿರುವ 'ಯಾರಿಗೆ ಇಡ್ಲಿ' ಸದ್ಯದಲ್ಲೇ ಹಾಡಿನ ಚಿತ್ರೀಕರಣ ಶುರುಮಾಡಲಿದೆ. ಹೊಸ ವರ್ಷದ ಆಸುಪಾಸಿನಲ್ಲಿ ಥಿಯೇಟರ್ ಸಿಕ್ಕ ತಕ್ಷಣ 'ಯಾರಿಗೆ ಇಡ್ಲಿ' ತೆರೆಗೆ ಬರಲಿದೆ. (ಫಿಲ್ಮಿಬೀಟ್ ಕನ್ನಡ)

English summary
Kannada movie Yarige Idly has shot an important scene in Hollywood. Yarige Idly stars newcomer Vishwajith Harish and the movie is directed by Yashwant Sardeshpande.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada