For Quick Alerts
  ALLOW NOTIFICATIONS  
  For Daily Alerts

  ಕನ್ನಡ ಸಿನಿಮಾಗಳು ಬೇರೆ ಭಾಷೆಗೆ ರೀಮೇಕಾದ ವರ್ಷ

  By ಜೀವನರಸಿಕ
  |

  ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನ ಗೆಳತಿಯೊಬ್ಬಳು ಆಗಾಗ ಹೇಳ್ತಿದ್ದಳು; ನನಗೆ ಇಲ್ಲಿರೋ ತೆಲುಗು, ತಮಿಳು ಫ್ರೆಂಡ್ಸ್ ಗಳೆಲ್ಲಾ ತಮಾಷೆ ಮಾಡ್ತಾರೆ. ನಿಮ್ ಕನ್ನಡ ಸಿನಿಮಾಗಳೆಲ್ಲ ತೆಲುಗು, ತಮಿಳು ರೀಮೇಕ್ ಅಂತ. ಕನ್ನಡ ಸಿನಿಮಾಗಳು ಚೆನ್ನಾಗಿರಲ್ಲ ಅಲ್ವಾ. ಅದ್ಕೇ ರೀಮೇಕ್ ಮಾಡ್ತಾರಲ್ವ ಅಂತ.

  ಕನ್ನಡದವಳಾಗಿ ನಂಗೆ ಅವ್ರ ಮುಂದೆ ಅವಮಾನ ಆಗುತ್ತೆ. ಯಾವ್ ಸಿನಿಮಾ ನೋಡೋಕ್ ಹೊರಟ್ರೂ ಅದು ನಾನ್ ನೋಡಿದ್ದೀನಿ. ಅದು ತೆಲುಗು ರೀಮೇಕ್ ಅಂತಾರೆ. ಇಲ್ಲದಿದ್ರೆ ತಮಿಳು ರೀಮೇಕ್ ಅಂತಾರೆ.

  ಒಂದು ವರ್ಷದಿಂದ ಈ ಮಾತಿಗೆ ಉತ್ತರ ಕೊಡೋ ಕಾಲ ಬರುತ್ತೆ ಅನ್ಕೊಂಡಿದ್ದೆ. ಈ ವರ್ಷ ನನ್ನ ಗೆಳತಿಗೆ ಲಿಸ್ಟ್ ಸಮೇತ ಹೇಳ್ದೆ. ಕನ್ನಡದ ಸಿನಿಮಾಗಳೇ ತೆಲುಗು, ತಮಿಳಿಗೆ ರೀಮೇಕಾಗ್ತಿವೆ ಅಂತ. ಗೆಳತಿ ಒಂದು ಕ್ಷಣ ಆಕಾಶದಲ್ಲಿ ಹಾರಾಡಿದ್ಳು.. ಇವತ್ತು ಮಾಡ್ತಿನಿ ಇರು ನಮ್ಗೂ ಸ್ವಾಭಿಮಾನ ಇದೆ, ನಮ್ಮಲ್ಲೂ ಟ್ಯಾಲೆಂಟ್ ಇದೆ ಅಂತ ತೋರಿಸ್ತೀನಿ ಅಂತ ಖುಷಿಯಾದ್ಲು. ಅಂತಹಾ ಯಶಸ್ವೀ ಕನ್ನಡದ ವರ್ಷ ಇದು.

  ಈ ವರ್ಷ ಕನ್ನಡ ಸಿನಿಮಾಗಳು ತಮ್ಮ ಗಡಿಯನ್ನ ಮೀರಿ ತೆಲುಗು, ತಮಿಳಿಗೂ ತಲುಪಿದ್ವು. ಬಾಲಿವುಡ್ ಗೂ ಎಂಟ್ರಿಕೊಟ್ವು. ಅದಕ್ಕಿಂತ ಹೆಚ್ಚಾಗಿ ಅಲ್ಲೂ ಯಶಸ್ವಿಯಾದ್ವು. ನಾನು ನನ್ನ ಗೆಳತಿಗೆ ಕೊಟ್ಟ ಹೆಮ್ಮೆಯ ಆ ಸಿನಿಮಾಗಳನ್ನ ನೀವೂ ನೋಡ್ತಾ ಹೋಗಿ...ಖಂಡಿತ ನಿಮಗೂ ಹೆಮ್ಮೆ ಅನ್ನಿಸುತ್ತದೆ. ಅಂದಹಾಗೆ ಈ ವರ್ಷ ಕನ್ನಡದ ನಿರ್ದೇಕರು ಪರಭಾಷೆಗೂ ಎಂಟ್ರಿಕೊಟ್ಟ ವರ್ಷ.

  ತೆಲುಗಿನಲ್ಲೂ 'ಚಾರ್ಮಿನಾರ್' ಚಾರ್ಮ್

  ತೆಲುಗಿನಲ್ಲೂ 'ಚಾರ್ಮಿನಾರ್' ಚಾರ್ಮ್

  ಈ ವರ್ಷದ ಮೊದಲ ಯಶಸ್ವೀ ಸಿನಿಮಾ ತೆಲುಗು ತಮಿಳಲ್ಲಿ ನಿರ್ದೇಶನ ಮಾಡೋ ಆಫರ್ ನಿರ್ದೇಶಕ ಚಂದ್ರೂಗೆ ಇದ್ರು 'ಬ್ರಹ್ಮ' ಸಿನಿಮಾದಲ್ಲಿ ಬಿಜಿಯಾದ್ರು.

  ತೆಲುಗು, ತಮಿಳಿಗೂ ಹಾರಲಿದೆ ಮೈನಾ

  ತೆಲುಗು, ತಮಿಳಿಗೂ ಹಾರಲಿದೆ ಮೈನಾ

  ನಾಗಶೇಖರ್ ನಿರ್ದೇಶನದ 'ಮೈನಾ' ಕನ್ನಡದಲ್ಲಿ ನೂರು ದಿನ ಪೂರೈಸ್ತು. ತಮಿಳು, ತೆಲುಗಲ್ಲಿ ನಾಗಶೇಖರ್ ನಿರ್ದೇಶಿಸ್ತಾರೆ ಅಂತ ಸುದ್ದೀನೂ ಬಂತು. ಆಮೇಲೆ ನಾಗಶೇಖರ್ ಆಕ್ಟಿಂಗ್ ನಲ್ಲಿ ಬಿಜಿಯಾದ್ರು.

  ತೆಲುಗಿನಲ್ಲೂ ಗೋವಿಂದಾಯ ನಮಃ

  ತೆಲುಗಿನಲ್ಲೂ ಗೋವಿಂದಾಯ ನಮಃ

  ಗೋವಿಂದಾಯ ನಮಃ ಚಿತ್ರ ಪ್ಯಾರ್ ಗೆ ಆಗ್ಬಿಟ್ಟೈತೆ ಹಾಡಿನ ಕಮಾಲ್ ಜೊತೆ ತೆಲುಗಿನಲ್ಲಿ 'ಸುಡಿಗಾಡು' ಅನ್ನೋ ಹೆಸರಲ್ಲಿ ರೀಮೇಕಾಗಿ ಭರ್ಜರಿ ಯಶಸ್ಸನ್ನೂ ಕಾಣ್ತು. ಕನ್ನಡದ ನಿರ್ದೇಶಕ ಪವನ್ ಒಡೆಯರ್ ತೆಲುಗಲ್ಲೂ ಯಶಸ್ವಿಯಾದ್ರು.

  'ಗೂಗ್ಲಿ'ಗೆ ತೆಲುಗು ಹಕ್ಕುಗಳಲ್ಲೂ ಭರ್ಜರಿ ಹಣ

  'ಗೂಗ್ಲಿ'ಗೆ ತೆಲುಗು ಹಕ್ಕುಗಳಲ್ಲೂ ಭರ್ಜರಿ ಹಣ

  ಪವನ್ ಒಡೆಯರ್ ನಿರ್ದೇಶನದ ಯಶ್-ಕೃತಿ ಖರಬಂದ ಜೋಡಿಯ 'ಗೂಗ್ಲಿ' ಚಿತ್ರ ಕನ್ನಡದಲ್ಲಿ ಬಾಕ್ಸ್ ಆಫೀಸನ್ನ ಚಿಂದಿ ಉಡಾಯಿಸಿ ತೆಲುಗು ಹಕ್ಕುಗಳಲ್ಲೂ ಭರ್ಜರಿ ಹಣ ಮಾಡ್ತು.

  ತೆಲುಗು, ತಮಿಳಿನಲ್ಲೂ ಬಚ್ಚನ್

  ತೆಲುಗು, ತಮಿಳಿನಲ್ಲೂ ಬಚ್ಚನ್

  ಶಶಾಂಕ್ ನಿರ್ದೇಶನದ ಕನ್ನಡದ ಚಿತ್ರ 'ಬಚ್ಚನ್' ತೆಲುಗು, ತಮಿಳಲ್ಲೂ ತೆರೆಗೆ ಬಂತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಮಾಲ್ ಗೆ ಪ್ರೇಕ್ಷಕರು ಬೋಲ್ಡಾದ್ರು.

  'ಲೂಸಿಯಾ'ಗೆ ಹಲವು ಭಾಷೆಗಳಿಂದ ಬೇಡಿಕೆ

  'ಲೂಸಿಯಾ'ಗೆ ಹಲವು ಭಾಷೆಗಳಿಂದ ಬೇಡಿಕೆ

  ಪವನ್ ಕುಮಾರ್ ನಿರ್ದೇಶನದ 'ಲೂಸಿಯಾ' ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದ ಮೇಲೆ ಚಿತ್ರಕ್ಕೆ ಹಲವು ಭಾಷೆಗಳಿಂದ ಬೇಡಿಕೆ ಬಂದಿದೆ. ಈಗಾಗ್ಲೇ ಹಿಂದಿ ರೀಮೇಕ್ ವರ್ಕ್ ಶುರುವಾಗಿದೆ.

  ತೆಲುಗು, ತಮಿಳಿನಲ್ಲಿ ತೆರೆಕಂಡ ಅಟ್ಟಹಾಸ

  ತೆಲುಗು, ತಮಿಳಿನಲ್ಲಿ ತೆರೆಕಂಡ ಅಟ್ಟಹಾಸ

  ಎಎಮ್ಆರ್ ರಮೇಶ್ ನಿರ್ದೇಶನದ 'ಅಟ್ಟಹಾಸ' ಚಿತ್ರದ್ದು ಈ ವರ್ಷ ಗೆಲುವಿನ ಅಟ್ಟಹಾಸ. ತಮಿಳಿನಲ್ಲಿ 'ವನಯುದ್ಧಂ' ಅನ್ನೋ ಹೆಸರಿನ ಜೊತೆಗೆ ತೆಲುಗಲ್ಲೂ ತೆರೆಕಂಡ ಚಿತ್ರ ಕನ್ನಡದ ಮತ್ತೊಂದು ಹೆಮ್ಮೆಯ ಚಿತ್ರ.

  ಟೋಪಿವಾಲಾ ತೆಲುಗಿಗೆ ರೀಮೇಕ್

  ಟೋಪಿವಾಲಾ ತೆಲುಗಿಗೆ ರೀಮೇಕ್

  ಉಪ್ಪಿ ಅಭಿನಯದ 'ಟೋಪಿವಾಲಾ' ಸೋತ್ರೂ ಕಮರ್ಷಿಯಲಿ ಗೆದ್ದ ಚಿತ್ರ. ತೆಲುಗಲ್ಲಿ 'ಸ್ವಿಸ್ ಬ್ಯಾಂಕ್ ಕಿ ದಾರೇದಿ' ಅನ್ನೋ ಹೆಸರಲ್ಲಿ ತಯಾರಾಗ್ತಿದೆ.

  ಭಜರಂಗಿ, 6-5=2 ಪರಭಾಷೆಗೆ ರೀಮೇಕ್

  ಭಜರಂಗಿ, 6-5=2 ಪರಭಾಷೆಗೆ ರೀಮೇಕ್

  ಇತ್ತೀಚೆಗೆ ಬಂದ ಭಜರಂಗಿ ಕೂಡ ಪರಭಾಷೆಯವರ ಕಣ್ಣು ಇತ್ತ ಬೀಳೋ ಹಾಗೆ ಮಾಡಿದೆ. ಇನ್ನು ಹಾರರ್ ಸಿನಿಮಾ 6-5=2 ಚಿತ್ರದ ರೀಮೇಕ್ ಹಕ್ಕುಗಳನ್ನ ರು. 30-40 ಲಕ್ಷ ಕೊಟ್ಟು ತೆಲುಗು ತಮಿಳು ಸಿನಿಮಾದವ್ರು ನಮ್ಗೆ ಕೊಡಿ ನಮ್ಗೆ ಕೊಡಿ ಅಂತ ಡಿಮಾಂಡ್ ಮಾಡಿ ತೆಗೆದುಕೊಂಡಿದ್ದಾರೆ.

  English summary
  Here is the list of Kannada movies released in the year 2013 and remade in Tamil, Telugu. Kannada hit movies like Charminar, Myna, Govindaya Namaha, Googly, Bachchan, Lucia, Attahasa, Topiwala and 6-5=2 are remade in Telugu, Tamil languages.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X