»   » ತೆರೆಯಲ್ಲಿ ನೋಡಿ ಬಾಲ್ ಪೆನ್ ಹಾಗೂ ಗೋಲ್ ಮಾಲ್

ತೆರೆಯಲ್ಲಿ ನೋಡಿ ಬಾಲ್ ಪೆನ್ ಹಾಗೂ ಗೋಲ್ ಮಾಲ್

Posted By:
Subscribe to Filmibeat Kannada
ನಾಳೆ (26 ಅಕ್ಟೋಬರ್ 2012) ದರ್ಶನ್ ನಾಯಕತ್ವದ ಬಹುನಿರೀಕ್ಷಿತ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸೇರಿದಂತೆ ಯಾವುದೇ ಬಿಗ್ ಬ್ಯಾನರ್ ಚಿತ್ರಗಳು ತೆರೆಕಾಣುತ್ತಿಲ್ಲ. ರವಿ ಬೆಳಗೆರೆ ಅರ್ಪಿಸುವ ಮಹಾನದಿ ಕ್ರಿಯೇಷನ್ಸ್ ರವರ 'ಬಾಲ್ ಪೆನ್' ಎಂಬ ಮಕ್ಕಳ ಚಿತ್ರ ಹಾಗೂ ಅಣಜಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಅಣಜಿ ನಾಗರಾಜ್ ನಿರ್ಮಾಣದ 'ಗೋಲ್ ಮಾಲ್' ಚಿತ್ರ ನಾಳೆ ತೆರೆಗೆ ಬರುತ್ತಿದೆ.

'ಬಾಲ್ ಪೆನ್' ಚಿತ್ರವನ್ನು ನಿರ್ಮಿಸಿರುವವರು ಭಾವನಾ ಬೆಳಗೆರೆ ಹಾಗೂ ಶ್ರೀನಗರ ಕಿಟ್ಟಿ. ಕೆ.ಸಿ. ಮಂಜುನಾಥ್ ಹಾಗೂ ಭಾವನಾ ಬೆಳಗೆರೆ ಕಥೆ ಇರುವ ಈ ಚಿತ್ರಕ್ಕೆ ಚಿತ್ರಕಥೆ-ಸಂಭಾಷಣೆ ಹಾಗೂ ನಿರ್ದೇಶನ ಶಶಿಕಾಂತ್ ಅವರದು. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತವಿದೆ. ಬೆಂಗಳೂರು ಕೆಜಿ ರಸ್ತೆಯ 'ಕೈಲಾಸ್' ಹಾಗೂ ರಾಜ್ಯಾದ್ಯಂತ ಬಿಡುಗಡೆಯಾಗಲಿರುವ 'ಬಾಲ್ ಪೆನ್' ಸಾಕಷ್ಟು ಕುತೂಹಲ ಕೆರಳಿಸಿರುವ ಮಕ್ಕಳ ಚಿತ್ರ. ಇದನ್ನು ದೊಡ್ಡವರೂ ಕೂಡ ನೋಡಬಹುದಾಗಿದೆ ಎಂಬುದು ವಿಶೇಷ. ಮತ್ತೊಂದು ವಿಶೇಷವೆಂದರೆ, ಈ ಚಿತ್ರದ ಮುಖಾಂತರ ಉದಯೋನ್ಮುಖ ಹಾಡುಗಾರ ಮತ್ತು ಸಂಗೀತಗಾರ ಆದಿತ್ಯ ರಾವ್ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. (ಆದಿತ್ಯ ರಾವ್ ಸಂದರ್ಶನ)

ಇನ್ನು 'ಭೀಮಾ ತೀರದಲ್ಲಿ (ಬದಲಾದ ಹೆಸರು-ಚಂದಪ್ಪ)' ಚಿತ್ರದ ನಂತರ ಅಣಜಿ ನಾಗರಾಜ್ ನಿರ್ಮಾಣದಲ್ಲಿ ಬರುತ್ತಿರುವ ಮತ್ತೊಂದು ಚಿತ್ರ ಈ 'ಗೋಲ್ ಮಾಲ್'. ವಿಜಯರಾಘವೇಂದ್ರ ಮತ್ತು ಶುಭಾ ಪೂಂಜಾ ಈ ಚಿತ್ರದ ನಾಯಕ-ನಾಯಕಿಯರು. ಚಿತ್ರವನ್ನು ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ಜೊತೆ ನಿರ್ದೇಶಿಸಿರುವವರು ಪ್ರಮೋದ್ ಚಕ್ರವರ್ತಿ. ಚಿತ್ರಕ್ಕೆ ಸಂಗೀತ ನೀಡಿರುವವರು ರಾಧೇ ಕ್ರಿಶ್. 'ಗೋಲ್ ಮಾಲ್' ಚಿತ್ರದ ಟ್ಯಾಗ್ ಲೈನ್ 'ನಮ್ ಗೋಲು ನಿಮ್ ಮಾಲು'.

ಈಗಿನ ಮಾಹಿತಿ ಪ್ರಕಾರ, ಬಹುನಿರೀಕ್ಷಿತ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವು ನವೆಂಬರ್ 01, 2012 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಆದರೆ ಈಗಾಗಲೇ ಸಾಕಷ್ಟು ಬಾರಿ ಬಿಡುಗಡೆಯನ್ನು ಮುಂದೂಡಿರುವ ಚಿತ್ರತಂಡ, ನಿಜವಾಗಿಯೂ ನವೆಂಬರ್ 01ಕ್ಕೆ ಚಿತ್ರವನ್ನು ಬಿಡುಗಡೆಮಾಡಲಿದೆಯೇ ಎಂಬುದು ಎಲ್ಲರಿಗಿರುವ ಸಂದೇಹ. ಚಿತ್ರದ ಪ್ರಮೋಶನ್ ಕೂಡ ಇನ್ನೂ ಪ್ರಾರಂಭವಾಗಿಲ್ಲ ಎನ್ನುವುದು ಎಲ್ಲರ ಗಮನಕ್ಕೆ ಬಂದಿರುವ ಅಂಶ. (ಏಜೆನ್ಸೀಸ್)

English summary
Tomorrow, on 26th October 2012, the only Kannada Movies to Releases Ball Pen and Gol Maal. Most expected Darshan and Nikita starrer movie is post-phoned to November 01st 2012, as the recent information. 
 
 Kannada Movies to Release, Ball Pen and Gol Maal, On 26th October 2012, ಬಿಡುಗಡೆಯಾಗಲಿರುವ ಕನ್ನಡ ಚಿತ್ರಗಳು, ಬಾಲ್ ಪೆನ್ ಮತ್ ಗೋಲ್ ಮಾಲ್, 26 ಅಕ್ಟೋಬರ್ 2012 
 
Please Wait while comments are loading...