»   » ಈ ವಾರ 4 ಚಿತ್ರ ರಿಲೀಸ್, ನಿಮ್ಮ ಆಯ್ಕೆ ಯಾವುದು?

ಈ ವಾರ 4 ಚಿತ್ರ ರಿಲೀಸ್, ನಿಮ್ಮ ಆಯ್ಕೆ ಯಾವುದು?

Posted By:
Subscribe to Filmibeat Kannada

ಈ ವಾರ ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳಿಗೆ ಒಂದಲ್ಲ, ಎರಡಲ್ಲ 4 ಚಿತ್ರಗಳು ಮನೋರಂಜನೆ ನೀಡಲು ಬರುತ್ತಿದೆ.

ನೋಟ್ ಬ್ಯಾನ್ ನಿಂದ ಕೆಲ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ದಿನಾಂಕವನ್ನ ಮುಂದೂಡಿದ್ದರೇ, ಇದೇ ಸಮಯವನ್ನ ಅವಕಾಶವಾಗಿ ಬಳಸಿಕೊಳ್ಳಲು ಹೊಸಬರ ಚಿತ್ರಗಳು ಯೋಚನೆ ಮಾಡಿದಂತಿದೆ.

ಅಜಯ್ ರಾವ್, ಲೂಸ್ ಮಾದ ಯೋಗೀಶ್, ಮದರಂಗಿ ಕೃಷ್ಣ ಮುಖ್ಯ ಭೂಮಿಕೆಯಲ್ಲಿರುವ 'ಜಾನ್ ಜಾನಿ ಜನಾರ್ಧನ್' ಚಿತ್ರ ಈ ವಾರ (ಡಿಸೆಂಬರ್ 9) ತೆರೆಗೆ ಬರ್ತಿದೆ. ಈ ನಿರೀಕ್ಷೆಯ ಚಿತ್ರದ ಜೊತೆ 'ಡಯಾನ ಹೌಸ್', 'ಸೋಜಿಗ' ಹಾಗೂ 'ಜಾಗೃತಿ' ಎಂಬ ಮೂರು ಹೊಸ ಚಿತ್ರಗಳು ಥಿಯೇಟರ್ ಗೆ ಲಗ್ಗೆಯಿಡುತ್ತಿದೆ.[ವಿಡಿಯೋ: 'ಕನ್ನಡ ಕಲಿಯಲೇ' ಅಂತಾವ್ರೆ 'ಜಾನ್ ಜಾನಿ ಜನಾರ್ದನ' ]

ಈ ವಾರ 4 ಸಿನಿಮಾ ರಿಲೀಸ್

'ಜಾನ್ ಜಾನಿ ಜನಾರ್ಧನ್' ಚಿತ್ರದ ಜೊತೆಗೆ, ರಾಘವ್ ನಾಗ್, ತೇಜಸ್ವಿನಿ ಅಭಿನಯದ 'ಡಯಾನ ಹೌಸ್', ವಿಕ್ರಾಂತ್ ಹೆಗಡೆ ಅಭಿನಯದ 'ಸೋಜಿಗ' ಹಾಗೂ ಅನಂತರಾಯಪ್ಪ, ಮೋಟಮ್ಮ ಕಾಣಿಸಿಕೊಂಡಿರುವ 'ಜಾಗೃತಿ' ಚಿತ್ರಗಳು ಈ ವಾರ (ಡಿಸೆಂಬರ್ 9) ಚಿತ್ರಮಂದಿರಕ್ಕೆ ಬರುತ್ತಿದೆ.

ತ್ರಿಮೂರ್ತಿಗಳ 'ಜಾನ್ ಜಾನಿ ಜಾನಾರ್ಧನ್'

ಗುರುದೇಶ ಪಾಂಡೇ ನಿರ್ದೇಶನದ 'ಜಾನ್ ಜಾನಿ ಜಾನಾರ್ಧನ್' ಮಲ್ಟಿಸ್ಟಾರ್ ಸಿನಿಮಾ. ಚಿತ್ರದಲ್ಲಿ ಮೂವರು ನಾಯಕರಿದ್ದು, ಅಜಯ್ ರಾವ್, ಲೂಸ ಮಾದ ಯೋಗೀಶ್, ಮದರಂಗಿ ಕೃಷ್ಣ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಮುಂಬೈ ಮೂಲದ ರೂಪದರ್ಶಿ ಕಾಮ್ನಾ ರಣಾವತ್ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಪರಿಚಯವಾಗಿದ್ದಾರೆ.

'ಜಾನ್ ಜಾನಿ ಜಾನಾರ್ಧನ್' ಚಿತ್ರದಲ್ಲಿ ಸ್ಟಾರ್ ಗಳ ದಂಡು

ಜಾನ್ ಜಾನಿ ಜಾನಾರ್ಧನ್' ಚಿತ್ರದಲ್ಲಿ ನಟಿ ಮಾಲಾಶ್ರೀ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಿದ್ರೆ, ಪ್ರಮುಖ ಪಾತ್ರಗಳಲ್ಲಿ ಭಾವನಾ ರಾವ್, ಪಾವನಾ ಕಾಣಿಸಿಕೊಂಡಿದ್ದಾರೆ. ಐಂದ್ರಿತಾ ರೈ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಇನ್ನೂ 'ಫಸ್ಟ್ ರ್ಯಾಂಕ್ ರಾಜು' ಖ್ಯಾತಿ ಗುರುನಂದನ್ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ರವಿಶಂಕರ್, ದಿವಂಗತ ಹಾಸ್ಯ ನಟ ಸಂಕೇತ್ ಕಾಶಿ, ಶ್ರೀನಿವಾಸ್ ಮೂರ್ತಿ, ಗಿರಿಜಾ ಲೋಕೇಶ್, ಬ್ಯಾಂಕ್ ಜನಾರ್ಧನ್ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.[ಮಗದೊಮ್ಮೆ 'ಐಟಂ ಗರ್ಲ್' ಆದ 'ಬಸಂತಿ' ಐಂದ್ರಿತಾ ರೇ.!]

ಹಾರರ್ ಚಿತ್ರ 'ಡಯಾನ ಹೌಸ್'

ರಾಘವ್ ನಾಗ್, ತೇಜಸ್ವಿನಿ, ವರ್ಧನ್, ಸೇರಿದಂತೆ ಹಲವು ಕಲಾವಿದರು ಅಭಿನಯಿಸಿರುವ ಡಯಾನ ಹೌಸ್ ಚಿತ್ರವೂ ಇದೇ ವಾರ ತೆರೆಗೆ ಬರ್ತಿದೆ. ಭರತ್ ನಂದ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಗಿರೀಶ್ ಹಾಗೂ ರಾಜಶೇಖರ್ ಬಂಡವಾಳ ಹಾಕಿದ್ದಾರೆ. ಟ್ರೈಲರ್ ಮೂಲಕ ಎಲ್ಲರನ್ನೂ ಭಯಪಡಿಸಿರುವ ಡಯಾನ ಹೌಸ್ ಚಿತ್ರಮಂದಿರದಲ್ಲೂ ಪ್ರೇಕ್ಷಕರನ್ನ ಭಯಪಡಿಸುತ್ತಾ ಅಂತ ಕಾದು ನೋಡಬೇಕಿದೆ.

ಹೊಸಬರ 'ಸೋಜಿಗ'

ನಿರ್ಮಾಪಕ ನಾಯರಣ ಹೆಗಡೆ ಅವರ ಮಗ ವಿಕ್ರಾಂತ್ ಹೆಗಡೆ ಚೊಚ್ಚಲ ಬಾರಿಗೆ ನಾಯಕನಾಗಿ ಅಭಿನಯಿಸಿದರುವ ಚಿತ್ರ ಸೋಜಿಗ. ದಿನೇಶ್ ಕಂಪ್ಲಿ ನಿರ್ದೇಶನ ಮಾಡಿದ್ದು, ಸುನಾಧ್ ಗೌತಮ್ ಸಂಗೀತ ಒದಗಿಸಿದ್ದಾರೆ. ಅಖಿಲ್ ಪ್ರಕಾಶ್, ಹರಿಣಿ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ಧಿ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

ವಿಶೇಷವಾದ 'ಜಾಗೃತಿ'

ಭ್ರಷ್ಚಚಾರ ಹಾಗೂ ಮತದಾನ ಕುರಿತಾದ ಕತೆಯನ್ನ ಹೊಂದಿರುವ 'ಜಾಗೃತಿ' ಸಾಮಾಜಿಕ ಕಳಕಳಿ ಚಿತ್ರ. ವಕೀಲ ಅನಂತರಾಯಪ್ಪ ಈ ಚಿತ್ರವನ್ನ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣ ಮಾಡಿ ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ. ಇನ್ನೂ ಚಿತ್ರದ ವಿಶೇಷ ಪಾತ್ರಗಳಲ್ಲಿ ಮಾಜಿ ಸಚಿವೆ ಮೊಟಮ್ಮ ಸೇರಿದಂತೆ ಪ್ರತಿಷ್ಠಿತ ಹುದ್ದೆಯಲ್ಲಿರುವ ಹಲವು ಹಿರಿಯ ಅಧಿಕಾರಿಗಳು ಅಭಿನಯಿಸಿದ್ದಾರೆ.

ನಿಮ್ಮ ಆಯ್ಕೆ ಯಾವುದು?

ಈ 4 ಚಿತ್ರಗಳಲ್ಲಿ ನಿಮ್ಮ ಆಯ್ಕೆ ಯಾವುದು ? ನೀವು ಯಾವ ಸಿನಿಮಾಗೆ ಹೋಗುತ್ತೀರಾ ಎಂದು ಕೆಳಗೆ ನೀಡಲಾಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ.

English summary
Kannada Actor Ajay Rao, Yogesh and Krishna starrer Kannada Movie 'John Jaani Janardhan', 'Sojiga' and 'Jagruthi' movies are releasing on December 9th. here is the detil report....

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada