For Quick Alerts
  ALLOW NOTIFICATIONS  
  For Daily Alerts

  ಈ ಮೂರು ಚಿತ್ರಗಳಲ್ಲಿ ನಿಮ್ಮ ಚಾಯ್ಸ್ ಯಾವುದು?

  By Harshitha
  |

  ನಾಳೆ ಶುಕ್ರವಾರ. ಸಿನಿ ಪ್ರಿಯರ ನೆಚ್ಚಿನ ವಾರ. ಸಿನಿ ರಸಿಕರ ಅಭಿರುಚಿಗೆ ತಕ್ಕಂತೆ ನಾಳೆ ಮೂರು ಕನ್ನಡ ಚಿತ್ರಗಳು ರಿಲೀಸ್ ಆಗುತ್ತಿವೆ.

  60ರ ಗಡಿ ದಾಟಿರುವ ಅನಂತ್ ನಾಗ್ ಹೀರೋ ಆಗಿ ನಟಿಸಿರುವ '+' ಸಿನಿಮಾ ನಾಳೆ ಬಿಡುಗಡೆ ಆಗುತ್ತಿದೆ. ಈ ಹಿಂದೆ 'ದ್ಯಾವ್ರೇ' ಚಿತ್ರ ನಿರ್ದೇಶಿಸಿದ್ದ ಯೋಗರಾಜ್ ಭಟ್ ಶಿಷ್ಯ ಗಡ್ಡವಿಜಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. '+'ಗೆ ಯೋಗರಾಜ್ ಭಟ್ ಮತ್ತು ರಿತೇಶ್ ಬಂಡವಾಳ ಹಾಕಿದ್ದಾರೆ.

  ಚೇತನ್ ಚಂದ್ರ, ರಿತೇಶ್, ಸುಧಾರಾಣಿ, ರವಿಶಂಕರ್, ಮುಂತಾದವರು '+' ಸಿನಿಮಾದಲ್ಲಿದ್ದಾರೆ. ಬಿ.ಜೆ.ಭರತ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. [ವಾವ್, ಅನಂತನಾಗ್ ಹೀರೋ ಅಟ್ ಅರುವತ್ತಾರು!]

  '+' ಚಿತ್ರದೊಂದಿಗೆ ಶ್ರೀಕೃಷ್ಣ ಪ್ರಾಪರ್ಟೀಸ್ ಮತ್ತು ಪ್ರಮೋಟರ್ಸ್ ಲಾಂಛನದಡಿಯಲ್ಲಿ ನಿರ್ಮಾಣವಾಗಿರುವ 'ಪಂಡಿತ' ಚಿತ್ರ ಈ ವಾರ ರಿಲೀಸ್ ಆಗುತ್ತಿದೆ.

  ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿರುವ ಕೃಷ್ಣೇಂದ್ರ ಪಂಡಿತ್ ಸಂಗೀತವನ್ನೂ ನೀಡಿ, ನೃತ್ಯ ನಿರ್ದೇಶನವನ್ನು ಮಾಡಿದ್ದಾರೆ. ಚಿತ್ರದ ನಿರ್ಮಾಪಕರೂ ಆಗಿರುವ ಕೃಷ್ಣೇಂದ್ರ ಪಂಡಿತ್, ನಟನೆ ಜೊತೆಗೆ ಈ ಚಿತ್ರದ ಹಾಡುಗಳ ಗಾಯಕರೂ ಹೌದು.

  ಇದೇ ವಾರ '7' ಸಿನಿಮಾ ಕೂಡ ತೆರೆಗೆ ಬರುತ್ತಿದೆ. ಸೆನ್ಸಾರ್ ಅಂಗಳದಿಂದ 'U/A' ಸರ್ಟಿಫಿಕೇಟ್ ಪಡೆದಿರುವ '7' ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿರುವುದು ಚಂದ್ರಶೇಖರ್ ಶ್ರೀವಾಸ್ತವ್.

  ಚಂದ್ರಶೇಖರ್ ಶ್ರೀವಾಸ್ತವ್, ರೂಪಾ ನಟರಾಜ್, ಸಾಧು ಕೋಕಿಲ, ರಂಗಾಯಣ ರಘು, ರವಿ ಕಾಳೆ ಮುಂತಾದವರು '7 ಚಿತ್ರದಲ್ಲಿದ್ದಾರೆ. ಕನ್ನಡ ಸಿನಿ ಪ್ರಿಯರಿಗೆ ಈ ಶುಕ್ರವಾರ ಮೂರು ಆಯ್ಕೆಗಳಿವೆ. ಇದರಲ್ಲಿ ನಿಮ್ಮ ಚಾಯ್ಸ್ ಯಾವುದು? ನೀವೇ ನಿರ್ಧರಿಸಿ.

  English summary
  Anant Nag starrer '+', '7' and 'Pandita' movies are releasing this week (October 16th). Here is the complete report on all the movies. Take a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X