»   » ಈ ನಾಲ್ಕು ಚಿತ್ರಗಳಲ್ಲಿ ನಿಮ್ಮ ಆಯ್ಕೆ ಯಾವುದು?

ಈ ನಾಲ್ಕು ಚಿತ್ರಗಳಲ್ಲಿ ನಿಮ್ಮ ಆಯ್ಕೆ ಯಾವುದು?

Posted By:
Subscribe to Filmibeat Kannada

ಶುಕ್ರವಾರ ಅಂದ್ರೆ ಸಿನಿವಾರ. ಸಿನಿ ರಸಿಕರಿಗೆ ರಸದೌತಣ ನೀಡುವುದಕ್ಕೆ ಈ ಶುಕ್ರವಾರ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ಆ ಎಲ್ಲಾ ಚಿತ್ರಗಳ ಮಾಹಿತಿ ಇಲ್ಲಿದೆ.

ಈ ವರ್ಷಾರಂಭದಲ್ಲಿ 'ಕೃಷ್ಣಲೀಲಾ' ಚಿತ್ರದಂಥ ಸೂಪರ್ ಹಿಟ್ ಕೊಟ್ಟ ಅಜೇಯ್ ರಾವ್ ಈ ವಾರ 'ಸೆಕೆಂಡ್ ಹ್ಯಾಂಡ್ ಲವರ್' ಆಗಿ ತೆರೆಗೆ ಬರುತ್ತಿದ್ದಾರೆ. ಪ್ರಣೀತಾ ಹಾಗೂ ಅನೀಶಾ ಮುಖ್ಯ ತಾರಾಗಣದಲ್ಲಿರುವ ಈ ಚಿತ್ರಕ್ಕೆ ರಾಘವ್ ಲೋಕಿ ನಿರ್ದೇಶಕ.

2nd hand lover

ರಾಕ್ ಸಂಗೀತದ ಹಿನ್ನಲೆಯಲ್ಲಿ ಗುರುಕಿರಣ್ ಅದ್ಭುತ ಸಂಗೀತ ನೀಡಿದ್ದಾರೆ. ಸಾಧು ಕೋಕಿಲ, ಐಶ್ವರ್ಯ, ವಿಶ್ವ, ಗಿರಿ, ರಾಮಕೃಷ್ಣ ಮತ್ತಿತರರು 'ಸೆಕೆಂಡ್ ಹ್ಯಾಂಡ್ ಲವರ್' ತಾರಾಗಣದಲ್ಲಿದ್ದಾರೆ. ಇನ್ನು ಇದೇ ವಾರ ಪ್ರಜ್ವಲ್ ದೇವರಾಜ್ ಅಭಿನಯದ 'ಅರ್ಜುನ' ಚಿತ್ರ ಕೂಡ ರಿಲೀಸ್ ಆಗುತ್ತಿದೆ.

Kannada Movies releasing this friday September 25th

ಆರ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ಮನ್ಸೂರ್ ಹಾಗು ಮುತ್ತುರಾಜು ನಿರ್ಮಿಸಿರುವ 'ಅರ್ಜುನ' ಚಿತ್ರದಲ್ಲಿ ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ. ಭಾಮ, ಕಡ್ಡಿಪುಡಿ ಚಂದ್ರು, ಗಿರೀಶ್, ರಮೇಶ್ ಭಟ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪಿ.ಸಿ.ಶೇಖರ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಎರಡು ಕಮರ್ಶಿಯಲ್ ಚಿತ್ರಗಳ ನಡುವೆ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವ 'ನಾನು ಅವನಲ್ಲ...ಅವಳು' ಚಿತ್ರ ಕೂಡ ಇದೇ ವಾರ ಬಿಡುಗಡೆ ಆಗುತ್ತಿದೆ. [ವಿಮರ್ಶೆ: ನೋಡುಗರ ಪರಿಕಲ್ಪನೆ ಬದಲಾಯಿಸುವ 'ನಾನು ಅವನಲ್ಲ...ಅವಳು']

Kannada Movies releasing this friday September 25th

ರವಿ.ಆರ್.ಗರಣಿ ನಿರ್ಮಿಸಿರುವ, ಬಿ.ಎಸ್.ಲಿಂಗದೇವರು ನಿರ್ದೇಶಿಸಿರುವ ಚಿತ್ರ 'ನಾನು ಅವನಲ್ಲ...ಅವಳು'. ಮಂಗಳಮುಖಿ ಲಿವಿಂಗ್ ಸ್ಮೈಲ್ ವಿದ್ಯಾ ಅವರ ನಿಜ ಜೀವನವನ್ನ ಆಧರಿಸಿರುವ ಈ ಚಿತ್ರದಲ್ಲಿ ಸಂಚಾರಿ ವಿಜಯ್ ಮಂಗಳಮುಖಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಹಾರರ್ ಚಿತ್ರ ಪ್ರಿಯರನ್ನು ರಂಜಿಸುವುದಕ್ಕೆ 'ಚಂದ್ರಿಕಾ' ತೆರೆ ಕಾಣುತ್ತಿದೆ. ಫ್ಲೈಯಿಂಗ್ ವೀಲ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿ.ಆಶಾ ಅವರು ನಿರ್ಮಿಸಿರುವ 'ಚಂದ್ರಿಕಾ' ಚಿತ್ರದಲ್ಲಿ ಜೆ.ಕೆ ನಾಯಕನಾಗಿ ನಟಿಸಿದ್ರೆ ಕಾಮನಾ ಜೇಠ್ಮಲಾನಿ, ಶ್ರೀಮುಖಿ, ಗಿರೀಶ್ ಕಾರ್ನಾಡ್, ಎಲ್.ಬಿ.ಶ್ರೀರಾಂ ತಾರಾಗಣದಲ್ಲಿದ್ದಾರೆ.

Kannada Movies releasing this friday September 25th

ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನ ಯೋಗೇಶ್ ನಿರ್ದೇಶಿಸಿದ್ದಾರೆ.

ನಾಲ್ಕು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಗಳು ಈ ವಾರ ನಿಮ್ಮ ಮುಂದೆ ಬರುತ್ತಿದೆ. ಈ ನಾಲ್ಕರಲ್ಲಿ ನಿಮ್ಮ ಆಯ್ಕೆ ಯಾವುದು ಅಂತ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ, ನಮಗೆ ತಿಳಿಸಿ....

English summary
Prajwal Devaraj starrer 'Arjuna', Ajai Rao starrer '2nd Hand Lover', 'Chandrika' and 'Naanu Avanalla..Avalu' movies are releasing this week (September 25th). Here is the complete report on all the movies. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada