»   » ವಿದೇಶಗಳಲ್ಲಿ ಕನ್ನಡ ಸಿನೆಮಾಗಳ ಘಮಲು ಅಮಲು

ವಿದೇಶಗಳಲ್ಲಿ ಕನ್ನಡ ಸಿನೆಮಾಗಳ ಘಮಲು ಅಮಲು

Posted By: ಜೀವನರಸಿಕ
Subscribe to Filmibeat Kannada

ನಮ್ಮ ಕನ್ನಡ ಸಿನಿಮಾಗಳು ನಮ್ಮ ನೆಲವನ್ನ ದಾಟಿ ಹೋಗೋದು ಕನಸಿನ ಮಾತು ಅನ್ನೋ ಕಾಲವೊಂದಿತ್ತು. ವಿದೇಶಗಳಿರ್ಲಿ ಪಕ್ಕದ ರಾಜ್ಯಗಳಲ್ಲಿ ಕನ್ನಡ ಸಿನಿಮಾಗಳು ರಿಲಿಸಾದ್ರೆ ಸ್ಯಾಂಡಲ್ವುಡ್ನಲ್ಲಿ ಹಬ್ಬ ಆಚರಿಸ್ತಿದ್ರು. ಮಾಧ್ಯಮಗಳಲ್ಲಿ ಚರ್ಚೆಗಳಾಗ್ತಿದ್ವು.

ಆದ್ರೆ ಈಗ ಪ್ರತೀ ಕನ್ನಡ ಸಿನಿಮಾ ಕೂಡ ದೇಶದ ಸೀಮೆಯನ್ನ ಮೀರಿ ಹಾರೋಕೆ ಹಾತೊರೆಯುತ್ತಿದೆ. ವಿದೇಶದಲ್ಲಿರೋ ಸಿನಿಮಾ ಪ್ರೇಮಿಗಳ ಹೃದಯಕ್ಕೆ ವೆರೈಟಿ ವೆರೈಟಿ ವಿಷಯಗಳ ಭಿನ್ನ ವಿಭಿನ್ನ ಸಿನಿಮಾಗಳ ದರ್ಶನವಾಗ್ತಿದೆ. ಕನ್ನಡ ಸಿನಿಮಾದ ಮಾರುಕಟ್ಟೆ ಸಹ ದೊಡ್ಡದಾಗ್ತಿದೆ.

ವಿದೇಶದಲ್ಲಿರುವ ಕನ್ನಡಿಗರು ಕೂಡ ಮುಗಿಬಿದ್ದು ಕನ್ನಡ ಚಿತ್ರಗಳನ್ನು ನೋಡುತ್ತಿರುವುದು ಧನಾತ್ಮಕ ಬೆಳವಣಿಗೆ. ಹೊಸಬರೇ ನಿರ್ಮಿಸಿದ ರಂಗಿತರಂಗ ಚಿತ್ರವಂತೂ ಅಮೆರಿಕದಲ್ಲಿ ಇತಿಹಾಸ ನಿರ್ಮಿಸಿದೆ. ವಿದೇಶದಲ್ಲಿ ರಂಗಿತರಂಗ ಬಾಕ್ಸ್ ಆಫೀಸಿನಲ್ಲಿ ಚಿಂದಿ ಉಡಾಯಿಸಿದೆ.

ಬಹುಷಃ ಇಷ್ಟು ವರ್ಷಗಳಲ್ಲಿ ನಾವು ನೋಡದಷ್ಟು ವೇಗದಲ್ಲಿ ಕನ್ನಡ ಸಿನಿಮಾಗಳು ವಿದೇಶಿ ಮಾರುಕಟ್ಟೆಯಲ್ಲಿ ಭರ್ಜರಿ ಹವಾ ಎಬ್ಬಿಸ್ತಿವೆ. ಸ್ಟಾರ್ಗಳ ಸಿನಿಮಾಗಳು ಮಾತ್ರವಲ್ಲದೆ ಹೊಸಬರ ಸಿನಿಮಾಗಳು ವಿದೇಶದಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿವೆ. ಕನ್ನಡದ ಯಾವ್ಯಾವ ಸಿನಿಮಾಗಳು ವಿದೇಶದಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿವೆ ಅನ್ನೋದನ್ನ ನೋಡ್ತಾ ಹೋಗಿ.

ಉಪ್ಪಿ-2

ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಉಪ್ಪಿ-2 ಚಿತ್ರ ವರ್ಲ್ಡ್ ವೈಡ್ ಸಖತ್ ಹವಾ ಕ್ರಿಯೇಟ್ ಮಾಡಿದೆ. ಸದ್ಯ ಕೆನಡಾ, ಯುರೋಪ್, ಜಪಾನ್, ಸಿಂಗಪುರ, ಮಲೇಶಿಯಾಗಳಲ್ಲಿ ಪ್ರದರ್ಶನ ಕಾಣ್ತಿದೆ. ಉಪೇಂದ್ರ ಸದ್ಯ 20 ದಿನಗಳ ಕಾಲ ಅಮೆರಿಕಾದಲ್ಲಿ ಚಿತ್ರದ ಪ್ರೊಮೋಷನ್ ಮಾಡ್ತಿದ್ದಾರೆ. [ಚಿತ್ರವಿಮರ್ಶೆ]

ಆಟಗಾರ

ಕೆ ಎಂ ಚೈತನ್ಯ ನಿರ್ದೇಶನದ ಆಟಗಾರನ ಓಟ ಕೂಡ ವಿದೇಶದಲ್ಲಿ ಜೋರಾಗಿದೆ. ಸ್ಯಾಂಡಲ್ವುಡ್ನಲ್ಲಿ ಆಟಗಾರನ ಓಟಕ್ಕೆ ಥಿಯೇಟರ್ ಸಮಸ್ಯೆಯಿಂದ ಕಡಿವಾಣ ಬಿದ್ದಿದ್ದರೂ ವಿದೇಶದಲ್ಲಿ ಆಟಗಾರ ಯಶಸ್ವೀ ಓಟಗಾರ. [ಚಿತ್ರವಿಮರ್ಶೆ]

ರಂಗಿತರಂಗ

ಹೊಸಬರ ಥ್ರಿಲ್ಲರ್ ಬಾಕ್ಸಾಫೀಸನ್ನ ಬಾಚಿಕೊಳ್ತಿದೆ. ಅಮೆರಿಕಾ ಸೇರಿದಂತೆ ಹಲವು ಕಡೆಗಳಲ್ಲಿ 50ನೇ ದಿನದತ್ತ ಮುನ್ನುಗ್ತಿರೋ ರಂಗಿತರಂಗ ರಂಗು ರಂಗಾಗಿ ಅಮೆರಿಕನ್ನರು. ಅಮೆರಿಕನ್ನಡಿಗರ ಜೊತೆ ಸಿಂಗಪುರ, ಯುರೋಪ್, ಮಲೇಶಿಯಾ, ಯುಕೆ, ಆಸ್ಟ್ರೇಲಿಯಾ ಕನ್ನಡಿಗರ ಮನಸ್ಸುಗಳಿಗೂ ಲಗ್ಗೆ ಹಾಕಿದೆ ರಂಗಿತರಂಗ. [ಚಿತ್ರವಿಮರ್ಶೆ]

ಕೆಂಡಸಂಪಿಗೆ

ಸೂರಿಯ ಮತ್ತೊಂದು ದುನಿಯಾ ಅಂತ ಕರೆಸಿಕೊಳ್ತಿರೋ ಕೆಂಡಸಂಪಿಗೆ ಈಗ ವಿದೇಶದಲ್ಲಿ ಪರಿಮಳ ಬೀರ್ತಿದೆ. ಪರಿಮಳ ಫ್ಯಾಕ್ಟರಿ ಫಿಲಂಸ್ ಚಿತ್ರದ ಘಮಲು ವಿದೇಶದಲ್ಲೂ ಪರಿಣಾಮಕಾರಿಯಾಗಿ ಪಸರಿಸಿದೆ. ಮೊದಲಿಗೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಪರಸಿರಿದ ನಂತರ ಉಳಿದ ದೇಶಗಳಿಗೂ ಹಾರಲಿದೆ. [ಚಿತ್ರವಿಮರ್ಶೆ]

ಮಿ.ಐರಾವತ

ಚಾಲೆಂಜಿಂಗ್ಸ್ಟಾರ್ ದರ್ಶನ್ ಸಿನಿಮಾ ಐರಾವತ ಅಕ್ಟೋಬರ್ ಒಂದಕ್ಕೆ ವರ್ಲ್ಡ್ ವೈಡ್ ತೆರೆಕಾಣ್ತಿದೆ. ಕರ್ನಾಟಕ ಮಾತ್ರವಲ್ಲದೆ ಅಮೆರಿಕಾದಲ್ಲೂ ಹಲವು ಸ್ಕ್ರೀನ್ಗಳಲ್ಲಿ ಏಕಕಾಲಕ್ಕೆ ಐರಾವತನ ಅಬ್ಬರ ನಡೆಯಲಿದೆ.

ವಿದೇಶದಲ್ಲಿರೋರಿಗೆ ಹಬ್ಬ

ವಿದೇಶದಲ್ಲಿರೋ ಕನ್ನಡದವರಿಗೆ ಇಲ್ಲಿಯವರೆಗೂ ತಿಂಗಳಿಗೆ ಒಂದು ಕನ್ನಡ ಸಿನಿಮಾಗಳು ಸಿಕ್ಕಿದ್ರೆ ಹೆಚ್ಚು ಅನ್ನಿಸ್ತಿತ್ತು. ಆದ್ರೆ ಈಗ ವಾರಕ್ಕೆರಡರಂತೆ ಸಿನಿಮಾಗಳು ತೆರೆಗೆ ಬರ್ತಿವೆ. ಕನ್ನಡ ವಿದೇಶದಲ್ಲೂ ಬೆಳೀತಿದೆ, ಉಳೀತಿದೆ ಸಿನಿಮಾ ಮೂಲಕ ಅನ್ನೋದು ಸಂತಸದ ವಿಚಾರ ತಾನೆ..

English summary
Kannada movies are making lot of noise and are shining in foreign countries. Rangitaranga has already made an impact on box office also in USA. Kendasampige is getting released in New Zealand and Australia. Market for Kannada cinemas is expanding too. Good for the Kannada film industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada