»   » ಚಂದನವನದಲ್ಲಿ ಅ.1ರಿಂದ ಆನೆ ಮತ್ತು ಹುಲಿ ಹಾವಳಿ

ಚಂದನವನದಲ್ಲಿ ಅ.1ರಿಂದ ಆನೆ ಮತ್ತು ಹುಲಿ ಹಾವಳಿ

By: ಜೀವನರಸಿಕ
Subscribe to Filmibeat Kannada

ಶೀರ್ಷಿಕೆ ನೋಡಿ ಇದೇನಪ್ಪಾ ಕಾಡಿಂದ ಸ್ಯಾಂಡಲ್ ವುಡ್ ನಾಡಿಗೆ ಪ್ರಾಣಿಗಳು ಯಾವಾಗ ನುಗ್ಗಿದ್ವು ಅಂತ ಆಲೋಚನೆ ಮಾಡ್ತಿದ್ದೀರಾ? ಇದು ಕಾಡಿನ ಆನೆ, ಹುಲಿಯ ಕಾಟ ಅಲ್ಲ ಸ್ವಾಮೇ, ಸ್ಯಾಂಡಲ್ವುಡ್ನ ಆನೆ ಟಾಲಿವುಡ್ನ ಹುಲಿಯ ಅಟ್ಟಹಾಸ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಮಿ. ಐರಾವತ' ಮತ್ತು ಕಿಚ್ಚ ಸುದೀಪ್ ವಿಲನ್ ಆಗಿ ಅಭಿನಯಿಸಿರೋ ತಮಿಳಿನ 'ಪುಲಿ' (ಹುಲಿ) ಚಿತ್ರಗಳು, ಗಾಂಧಿ ಜಯಂತಿ ಮುನ್ನಾದಿನ ಅಕ್ಟೋಬರ್ 1ರಂದು ವಿಶ್ವದಾದ್ಯಂತ ತೆರೆ ಕಾಣಲಿವೆ. ಐರಾವತದಲ್ಲಿ ಪರಭಾಷಾ ತಾರೆ ಊರ್ವಶಿ ರೌಟೇಲಾ ನಾಯಕಿಯಾಗಿದ್ದರೆ, ತಮಿಳಿನ ಪುಲಿಯಲ್ಲಿ ಕನ್ನಡತಿ ಶ್ವೇತಾ ನಂದಿತಾ ಪ್ರಮುಖ ಪಾತ್ರದಲ್ಲಿದ್ದಾರೆ.


ಐರಾವತ ಹತ್ತಾರು ಕೋಟಿ ಬಜೆಟ್ನ ಚಿತ್ರವಾದ್ರೆ ತಮಿಳಿನ ಇಳೆಯ ದಳಪತಿ ವಿಜಯ್ ನಾಯಕರಾಗಿರೋ ಪುಲಿ ನೂರಾರು ಕೋಟಿ ಬಜೆಟ್ನ ಚಿತ್ರ ಅಂದಮೇಲೆ ವಿಶೇಷತೆ ಸಾಮ್ಯತೆಗಳಿರ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಇವೆರಡರಿಂದಾಗ್ತಿರೋ ಹಾವಳಿ ಏನು, ಇವುಗಳ ಆಗಮನದಿಂದ ಬಸವಳಿದಿರುವ ಕನ್ನಡ ಚಿತ್ರಗಳು ಯಾವುವು ಅನ್ನೋದಕ್ಕೆ ಈ ಸ್ಲೈಡ್ ತಿರುಗಿಸ್ತಾ ಹೋಗಿ...


ಎರಡು ಸಿನಿಮಾ = 80% ಥಿಯೇಟರ್

ಅಕ್ಟೋಬರ್ ಒಂದಕ್ಕೆ ತೆರೆಗೆ ಬರಲಿರೋ ಈ ಎರಡೇ ಸಿನಿಮಾಗಳು ರಾಜ್ಯದ ಮುಕ್ಕಾಲು ಭಾಗಕ್ಕಿಂತ ಹೆಚ್ಚಿನ ಥಿಯೇಟರ್ಗಳನ್ನ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲಿವೆ. 350 ಥಿಯೇಟರ್ನಲ್ಲಿ ಐರಾವತನ ಆಗಮನವಾಗಲಿದ್ರೆ ಪುಲಿ 100ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಘರ್ಜಿಸಲಿದೆ.


ಕೆಂಡ ಕಾರುತ್ತಿರುವ 'ಕೆಂಡಸಂಪಿಗೆ' ಸೂರಿ

ಉತ್ತಮ ಪ್ರದರ್ಶನ ಕಾಣ್ತಿರೋ ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ತಮಿಳಿನ ಪುಲಿ ಚಿತ್ರದಿಂದಾಗಿ ಹಲವು ಕಡೆ ಎತ್ತಂಗಡಿಯಾಗ್ತಿದೆ. ಇದ್ರಿಂದ ಸೂರಿ ಪರಭಾಷಾ ಚಿತ್ರಗಳಿಂದ ಥಿಯೇಟರ್ ಸಮಸ್ಯೆ ಅಂತ ಅಲ್ಲಲ್ಲಿ ಕೆಂಡ ಕಾರಿದ್ದಾರೆ.


ಭಟ್ರ ಕನಸುಗಳ ಅಂಗಡಿ ಸ್ಥಗಿತ

ಯೋಗರಾಜ ಭಟ್ಟರು ಹಂಚಿಕೆ ಮಾಡಿದ್ದ ಗೀತಾ ಬ್ಯಾಂಗಲ್ ಸ್ಟೋರ್ ಕೂಡ ಮತ್ತಷ್ಟು ಥಿಯೇಟರ್ಗಳ ಹುಡುಕಾಟದಲ್ಲಿತ್ತು. ಆದ್ರೆ ಪುಲಿ ಮತ್ತು ಐರಾವತದ ಧೂಳೆಬ್ಬಿಸೋ ಎಂಟ್ರಿಯಿಂದ ಥಿಯೇಟರ್ ಸಿಗದೆ ಕಂಗಾಲಾಗಿದೆ.


ಆಟಗಾರನ ಆಟ ಇನ್ಮುಂದೆ ನಡೆಯಲ್ಲ

ಒಳ್ಳೆಯ ಪ್ರಶಂಸೆ ಪಡ್ಕೊಂಡು ಯಶಸ್ವೀ ಪ್ರದರ್ಶನ ಕಾಣ್ತಿದ್ದ ಚಿರು-ಮೇಘನಾ ಅಭಿನಯದ ಆಟಗಾರ ಕೂಡ ಥಿಯೇಟರ್ ಹೆಚ್ಚಿಸಿಕೊಳ್ಳೋ ತವಕದಲ್ಲಿತ್ತು. ಆದ್ರೆ ಈಗ ಥಿಯೇಟರ್ ಕಳ್ಕೋತಿದೆ. ಪುಲಿ ಚಿತ್ರದಲ್ಲಿ ಮಾತ್ರವಲ್ಲದೆ ಒಳ್ಳೆಯ ಚಿತ್ರಗಳಿಗೆ ಪುಲಿ ಮೂಲಕ ಸುದೀಪ್ ವಿಲನ್ ಆಗಿ ಕಾಡ್ತಿದ್ದಾರೆ.


ದಸರಾ ರಜಾ ಸಮಯವಾದ್ರೂ ಸಿಗತ್ತಂದ್ರೆ

ಅಕ್ಟೋಬರ್ ತಿಂಗಳು ದಸರಾ ರಜಾ ಸಮಯ ಒಂದಿಡಿ ತಿಂಗಳು ಸಿಕ್ಕುತ್ತೆ ಆಗ ಸಿನಿಮಾ ರಿಲೀಸ್ ಮಾಡ್ಬೇಕು ಅಂತ ಲೆಕ್ಕಾಚಾರ ಹಾಗಿದ್ದ ನಿರ್ಮಾಪಕ ನಿರ್ದೇಶಕರಿಗೆ ಅಕ್ಟೋಬರ್ ತಿಂಗಳ ಒಂದು ದಿನವನ್ನೂ ಈ ಇಬ್ಬರೂ ಪ್ರಾಣಿಗಳು (ಸ್ಟಾರ್ಗಳು) ಬಿಟ್ಟುಕೊಟ್ಟಿಲ್ಲ. ಅಕ್ಟೋಬರ್ ಒಂದರಿಂದಲೇ ಇಬ್ಬರೂ ಆವರಿಸಿಕೊಳ್ಳಲಿದ್ದಾರೆ.


English summary
Kannada movie Mr Airavata with Darshan as the hero and Tamil movie Puli with Sudeep as the villain are set to hit screens in Karnataka on October 1st. Due to the release of these two multicrore movies few Kannada movies like Kendasampige, Geetha Bangle Store, Aatagara will have to vacate theatres. ಚಂದನವನದಲ್ಲಿ ಅ.1ರಿಂದ ಆನೆ ಮತ್ತು ಹುಲಿ ಹಾವಳಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada