»   » 'ರೋಗ್'ಗೆ ಎದುರಾಗಿ 'ಮನಸು ಮಲ್ಲಿಗೆ' ಮತ್ತು 'ಅಜರಾಮರ' ತೆರೆಗೆ

'ರೋಗ್'ಗೆ ಎದುರಾಗಿ 'ಮನಸು ಮಲ್ಲಿಗೆ' ಮತ್ತು 'ಅಜರಾಮರ' ತೆರೆಗೆ

Posted By:
Subscribe to Filmibeat Kannada

ಕನ್ನಡ ಚಿತ್ರ ಪ್ರೇಮಿಗಳಿಗಾಗಿ ಈ ವಾರ (ಮಾರ್ಚ್ 31) ಬಹುತೇಕ ಲವ್ ಸ್ಟೋರಿಗಳನ್ನೇ ಹೊಂದಿರುವ 3 ಸಿನಿಮಾಗಳು ತೆರೆಗೆ ಅಪ್ಪಳಿಸುತ್ತಿದೆ. ಅವುಗಳಲ್ಲಿ ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ 'ರೋಗ್' ಚಿತ್ರ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿಯೂ ಏಕಕಾಲಕ್ಕೆ ಬಿಡುಗಡೆ ಆಗುತ್ತಿದ್ದು, ಬಹುನಿರೀಕ್ಷಿತ ಚಿತ್ರವಾಗಿದೆ.

ಉಳಿದಂತೆ ಎಸ್. ನಾರಾಯಣ್ ನಿರ್ದೇಶನ 'ಮನಸು ಮಲ್ಲಿಗೆ' ಮತ್ತು ಹೊಸಬರ ಸಿನಿಮಾ 'ಅಜರಾಮರ' ಚಿತ್ರಗಳು ತೆರೆಗೆ ಅಪ್ಪಳಿಸುತ್ತಿವೆ. ಈ ಚಿತ್ರಗಳ ವಿಶೇಷತೆ ಮತ್ತು ಸಣ್ಣ ಪರಿಚಯವನ್ನು ನಾವು ಮಾಡಿಕೊಡುತ್ತೇವೆ. ಯಾವ ಚಿತ್ರಕ್ಕೆ ಹೋಗಬೇಕು ಎಂಬುದನ್ನು ನೀವೇ ನಿರ್ಧರಿಸಿ.

ಪುರಿ ಜಗನ್ನಾಥ್ 'ರೋಗ್'

ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ 'ರೋಗ್' ಈ ವಾರ ತೆರೆಕಾಣುತ್ತಿದೆ. ಚಿತ್ರ ಈಗಾಗಲೇ ಸೆನ್ಸಾರ್ ಅಂಗಳದಿಂದ U/A ಸರ್ಟಿಫಿಕೇಟ್ ಪಡೆದಿದೆ. ಚಿತ್ರದಲ್ಲಿ ನಿರ್ಮಾಪಕ ಸಿ.ಆರ್ ಮನೋಹರ್ ರವರ ಸಹೋದರ ಸಂಬಂಧಿ ಇಶಾನ್ ನಾಯಕನಾಗಿ ನಟಿಸಿದ್ದು, ಮನ್ನಾರ ಛೋಪ್ರಾ ಹಾಗೂ ಏಂಜೆಲಾ ಇಬ್ಬರು ನಾಯಕಿಯರು ಇದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಈ ಚಿತ್ರ ಬಿಡುಗಡೆ ಆಗುತ್ತಿದೆ. ಖಡಕ್ ಹುಡುಗನ ಕಾದಲ್ ಕಥೆಯ 'ರೋಗ್' ಚಿತ್ರಕ್ಕೆ ಸುನೀಲ್ ಕಶ್ಯಪ್ ಸಂಗೀತ, ಮುಕೇಶ್ ಜಿ ಅವರ ಛಾಯಾಗ್ರಹಣ ಇದೆ.

'ಮನಸು ಮಲ್ಲಿಗೆ'

ಎಸ್ ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಮನಸು ಮಲ್ಲಿಗೆ' ಚಿತ್ರವು ಈ ವಾರ ಬಿಡುಗಡೆ ಆಗುತ್ತಿದೆ. ಮರಾಠಿ ಭಾಷೆಯ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಸೈರಾಟ್' ಚಿತ್ರದ ರಿಮೇಕ್ ಸಿನಿಮಾ 'ಮನಸು ಮಲ್ಲಿಗೆ'. ಚಿತ್ರದಲ್ಲಿ ನಟ ಸತ್ಯಪ್ರಕಾಶ್ ಅವರ ಮಗ ನಿಶಾಂತ್ ನಾಯಕನಾಗಿ ಬಣ್ಣ ಹಚ್ಚಿದ್ದು, ನಾಯಕಿ ಪಾತ್ರದಲ್ಲಿ ರಿಂಕು ರಾಜಗುರು ಕಾಣಿಸಿಕೊಂಡಿದ್ದಾರೆ. ಜೊತೆಗೆ ರಂಗಭೂಮಿ ಕಲಾವಿದರ ದಂಡೇ ಚಿತ್ರದಲ್ಲಿದೆ. ರಾಕ್ ಲೈನ್ ವೆಂಕಟೇಶ್ ಮತ್ತು ಆಕಾಶ್ ಚಾವ್ಲಾ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಪ್ರೇಮದ 'ಅಜರಾಮರ'

ಹುಡುಗನೊಬ್ಬ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಕಷ್ಟಪಡುವಾಗ ಹುಡುಗಿಯೊಬ್ಬಳು ಸಹಾಯ ಮಾಡುತ್ತಾಳೆ. ಆತ ಜೀವನದಲ್ಲಿ ಸಕ್ಸಸ್ ಆಗುತ್ತಾನೆ. ಇಂತಹ ವಿಭಿನ್ನ ಕಥೆಯನ್ನು ಹೊಂದಿರುವುದೇ 'ಅಜರಾಮರ'. ಚಿತ್ರ ಸೆನ್ಸಾರ್ ಮಂಡಳಿಯಿಂದ 'ಯು' ಪ್ರಮಾಣ ಪತ್ರ ಪಡೆದಿದೆ. ಈ ಚಿತ್ರದಲ್ಲಿ ತಾರಕ್ ಮತ್ತು ರೋಶನಿ ಎಂಬ ಹೊಸ ಪ್ರತಿಭೆಗಳು ನಾಯಕ-ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ರವಿ ಕಾರಂಜಿ ಅವರು ನಿರ್ದೇಶನ ಮಾಡಿದ್ದು, ಡಾ.ಡೇವಿಡ್ ಬಾಂಜಿ ನಿರ್ಮಾಣ ಮಾಡಿದ್ದಾರೆ.

ನಿಮ್ಮ ಆಯ್ಕೆಯ ಸಿನಿಮಾ?

ಈ ವೀಕೆಂಡ್ ನಲ್ಲಿ ನಾವು ತಿಳಿಸಿದ ಮೂರು ಚಿತ್ರಗಳಲ್ಲಿ ಯಾವುದನ್ನು ನೋಡಬೇಕು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಿ.

English summary
Puri Jagannath Directorial 'Rogue', S Narayan Directorial 'Manasu Mallige' and 'Ajaramara' Movies are releasing on March 31st

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada