»   » ಗಾನ ನಿಲ್ಲಿಸಿದ ಶ್ರೇಷ್ಠ ಗಾಯಕನಿಗೆ ಕಂಬನಿ ಮಿಡಿದ ಸಂಗೀತಲೋಕ

ಗಾನ ನಿಲ್ಲಿಸಿದ ಶ್ರೇಷ್ಠ ಗಾಯಕನಿಗೆ ಕಂಬನಿ ಮಿಡಿದ ಸಂಗೀತಲೋಕ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಖ್ಯಾತ ಗಾಯಕ ಎಲ್.ಎನ್.ಶಾಸ್ತ್ರಿ ಅವರು ನಿಧನರಾಗಿದ್ದಾರೆ. ಕನ್ನಡ ಸಂಗೀತ ಲೋಕದ ಶ್ರೇಷ್ಠ ಗಾಯಕ ಇನ್ನಿಲ್ಲ ಎಂಬ ಕೂಗು ಇಡೀ ಸ್ಯಾಂಡಲ್ ವುಡ್ ಗೆ ಬೇಸರ ತಂದಿದೆ.

ಎಲ್.ಎನ್.ಶಾಸ್ತ್ರಿ ಅವರ ಒಡನಾಡಿಗಳು, ಅವರ ಸಹೋದ್ಯೋಗಿಗಳು, ಅವರ ಜೊತೆಯಲ್ಲಿ ಕೆಲಸ ಮಾಡಿವರು ಹೀಗೆ, ಶಾಸ್ತ್ರಿ ಅವರ ಗಾನಸುಧೆಯನ್ನ ಕೇಳಿ ಖುಷಿ ಪಟ್ಟವರೆಲ್ಲಾ ಶೋಕ ಸಾಗರದಲ್ಲಿ ಮುಳುಗುವಂತಾಗಿದೆ.

ಶಾಸ್ತ್ರಿ ಅವರ ಬಗ್ಗೆ, ಅವರ ಸಂಗೀತ ಹಾದಿಯ ಬಗ್ಗೆ ಕಂಡ ಕನ್ನಡದ ಖ್ಯಾತ ಗಾಯಕರು, ಸಂಗೀತ ನಿರ್ದೇಶಕರು ಸಂಗೀತ ಲೋಕದ ಅಪರೂಪದ ಗಾಯಕನಿಗೆ ಸಂತಾಪ ಸೂಚಿಸಿದ್ದಾರೆ. ಶಾಸ್ತ್ರಿ ಬಗ್ಗೆ ಯಾರ್ಯಾರು ಏನು ಹೇಳಿದ್ದಾರೆ ಎಂಬುದನ್ನ ಮುಂದೆ ನೋಡಿ......

ಗುರುಕಿರಣ್

''ನಾನು ಅವರು ಒಂದೇ ತಂಡದಿಂದ ಬಂದವರು. ವಿ.ಮನೋಹರ್ ಅವರ ಜೊತೆ ಕೆಲಸ ಮಾಡಿದ್ದೀವಿ. ಸುಮಾರು 25 ವರ್ಷದ ಸ್ನೇಹ ನಮ್ಮದು. ಮ್ಯೂಸಿಕಲ್ ನೋಟ್ಸ್ ಎಲ್ಲ ಅವರ ನೋಡಿ ಕಲಿತ್ತಿದ್ದೆ. ತುಂಬ ಫ್ರೆಂಡ್ಲಿ ಆಗಿ ಇರುತ್ತಿದ್ದರು. ಆಗಸ್ಟ್ 29ಗೆ ಅವರ ಹುಟ್ಟುಹಬ್ಬವಿತ್ತು'' - ಗುರು ಕಿರಣ್, ಸಂಗೀತ ನಿರ್ದೇಶಕ

ಸ್ವರ ನಿಲ್ಲಿಸಿದ ಗಾನ ಕೋಗಿಲೆ ಎಲ್.ಎನ್.ಶಾಸ್ತ್ರಿಗೆ ರೇಖಾ ರಾಣಿ ನುಡಿ ನಮನ

L.N Shastri Famous Singer Suffers From Cancer | Filmibeat Kannada
ಅರ್ಜುನ್ ಜನ್ಯ

ಅರ್ಜುನ್ ಜನ್ಯ

''ಬಹಳ ಹತ್ತಿರದ ಪರಿಚಯ. ತುಂಬ ನೋವಾಗ್ತಿದೆ. ಕನ್ನಡಕ್ಕೆ, ಕನ್ನಡ ಸಂಗೀತಕ್ಕೆ ದೊಡ್ಡ ನಷ್ಟ. ಗಾಯಕರಿಗೆ ಹೆಚ್ಚು ಪ್ರೋತ್ಸಾಹ ಕೊಡ್ತಿದ್ದರು. ಅವರು ಒಳ್ಳೆಯ ಗಾಯಕರು, ಸಂಗೀತ ನಿರ್ದೇಶಕರು ಆಗಿದ್ದರು. ತಾನೊಬ್ಬ ಗಾಯಕರಾಗಿದ್ದರೂ, ಬೇರೆಯವರ ಗಾಯನವನ್ನ ಹೆಚ್ಚು ಹೊಗಳುತ್ತಿದ್ದರು. ಆ ದೇವರ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದಷ್ಟೇ ಹೇಳಬಲ್ಲೆ'' - ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ

ಕೆ.ಕಲ್ಯಾಣ್, ಸಾಹಿತಿ

''ನನ್ನ ಸಿನಿಮಾ ಗೀತೆಯ ಮೊದಲು ಹಾಡು ಹಾಡಿದ್ದು ಶಾಸ್ತ್ರಿ ಅವರೇ. ತುಂಬ ಕಷ್ಟ ಆಗ್ತಿದೆ. ಒಬ್ಬ ಹೃದಯವಂತ ಗೆಳೆಯ, ಒಳ್ಳೆ ಮನುಷ್ಯ, ಒಳ್ಳೆ ಹಾಡುಗಾರ, ಅದ್ಭುತ ಸಾಹಿತಿ ಕೂಡ ಹೌದು. ಅವರನ್ನ ಭೇಟಿ ಮಾಡಿದಾಗ ನೀವು ಮತ್ತೆ ಎದ್ದು ಬಂದು ಹಾಡ್ಬೇಕು ಎಂದು ಹೇಳಿದ್ದಕ್ಕೆ,''ನಾನು ಮತ್ತೆ ಹಾಡ್ತಿನಿ'' ಎಂದಿದ್ದರು'' - ಕೆ.ಕಲ್ಯಾಣ್, ಸಾಹಿತಿ

ಕ್ಯಾನ್ಸರ್ ವಿರುದ್ಧ ಹೋರಾಡಿ ಸೋತ ಗಾಯಕ ಎಲ್ ಎನ್ ಶಾಸ್ತ್ರಿ

ಶಮಿತಾ ಮಲ್ನಾಡ್

''ಶಾಸ್ತ್ರಿ ಅವರ ವಿಚಾರದಲ್ಲಿ ಯಾಕೆ ಪವಾಡ ಆಗಬಾರದು ಎಂದು ಕೇಳಿ ಕೊಳ್ಳುತ್ತಿದ್ದೇವು. ಆದ್ರೆ, ನಾವು ಅವರನ್ನ ಕಳೆದುಕೊಂಡೆವು. ಅವರು ಬರಿ ಗಾಯಕರಾಗಿ ಮಾತ್ರವಿರಲಿಲ್ಲ, ಅವರೊಬ್ಬರು ಅಪ್ರತಿಮ ಗಾಯಕ. ಅದ್ಭುತ ವ್ಯಕ್ತಿ, ಒಬ್ಬ ಬಿಗ್ ಬ್ರದರ್ ರೀತಿ ಇದ್ದರು. ಕಿರಿಯ ಪ್ರತಿಭೆಗಳಿಗೆ ಪ್ರೋತ್ಸಾಹ, ಗೌರವ ನೀಡುವುದರಲ್ಲಿ ಅವರ ಅದ್ಭುತ. ತುಂಬ ಮೃದ ಸ್ವಭಾವ ಹೊಂದಿದ್ದರು. ಇದು ದೊಡ್ಡ ನಷ್ಟ'' - ಶಮಿತಾ ಮಲ್ನಾಡ್, ಗಾಯಕಿ

ವಿ.ಮನೋಹರ್

''ಇಂಜಿನಿಯರಿಂಗ್ ಮುಗಿಸಿ ಬಂದ ನಂತರ ನಮ್ಮ ಗುರುಗಳು ಬಳಿ ಟ್ರ್ಯಾಕ್ ಸಿಂಗರ್ ಆಗಿ ಕೆಲಸ ಮಾಡ್ತಿದ್ದರು. ನಾನು ರೆಕಾರ್ಡಿಂಗ್ ಗೆ ಹೋಗುತ್ತಿದ್ದೆ. ಅಲ್ಲಿಂದ ನಾನು, ಅವರು ಸ್ನೇಹಿತರು. ಒಂದೇ ರೂಂನಲ್ಲಿ ಇದ್ವಿ. ನಾನೊಂದು ಆಲ್ಬಂ ಮಾಡಿದೆ. ಅದಕ್ಕೆ ಅವರು ದುಡ್ಡು ಹಾಕಿದ್ರು. ನಾನು ಮ್ಯೂಸಿಕ್ ಮಾಡಿದೆ. ಈ ಆಲ್ಬಂನಿಂದಲೇ ನನಗೆ ಟರ್ನಿಂಗ್ ಪಾಯಿಂಟ್. ಆಮೇಲೆ ಉಪೇಂದ್ರ ಅವರು ನನಗೆ ಅವಕಾಶ ಕೊಟ್ಟಿದ್ದು. 'ಭಂಡ ನನ್ನ ಗಂಡ', 'ತರ್ಲೆ ನನ್ ಮಗ' ಸುಮಾರು 50 ಸಿನಿಮಾಗೆ ನನಗೆ ಸಹಾಯಕರಾಗಿ ಕೆಲಸ ಮಾಡಿದರು. ಒಳ್ಳೆ ಒಳ್ಳೆ ಹಾಡುಗಳನ್ನ ಹಾಡಿ ಕೊಟ್ಟರು'' - ವಿ.ಮನೋಹರ್, ಸಂಗೀತ ನಿರ್ದೇಶಕ

ಮರೆಯಾದ ಗಾನ ಚೈತನ್ಯ ಎಲ್.ಎನ್.ಶಾಸ್ತ್ರಿ

ಅವರು ಸಾವು ಅನ್ಯಾಯ

''ಅವರು ಸಂಗೀತ ನಿರ್ದೇಶಕರಾಗಿ ಅಷ್ಟೊಂದು ಯಶಸ್ಸು ಸಿಗಲಿಲ್ಲ. ಯಾರ ಬಗ್ಗೆನೂ ಮಾತನಾಡುತ್ತಿರಲಿಲ್ಲ. ಅವರ ಪಾಡಿಗೆ ಅವರು ಇರುವ ವ್ಯಕ್ತಿತ್ವ. ಅವರಿಗೆ ಈ ರೀತಿ ಆಗಿದ್ದು ತುಂಬ ಅನ್ಯಾಯ. ನಾನು ಅವರು ಆರೋಗ್ಯ ವಿಚಾರಿಸಿದೆ'' - ವಿ.ಮನೋಹರ್, ಸಂಗೀತ ನಿರ್ದೇಶಕ

English summary
Sandalwood music composer LN Shastri (Shastry) died of cancer at his residence on Wednesday afternoon. His sudden death has shocked and saddened many of kannada Music Director and Playback singers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada